ದೇಶ-ಪ್ರಪಂಚ

ಸೆಂಟ್ರಲ್ ಜೈಲಿನಿಂದ ತಂದ ಮಣ್ಣಿನಿಂದ ನಾಥೂರಾಮ್ ಗೋಡ್ಸೆ ಪ್ರತಿಮೆ ನಿರ್ಮಾಣ: ಹಿಂದೂ ಮಹಾಸಭಾ

ಗ್ವಾಲಿಯರ್: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಕೊಂದಿದ್ದ ನಾತೂರಾಮ್ ಗೋಡ್ಸೆಯನ್ನು 1949ರಲ್ಲಿ ಗಲ್ಲಿಗೇರಿಸಿದ್ದ ಹರಿಯಾಣದ ಅಂಬಾಲ ಸೆಂಟ್ರಲ್ ಜೈಲಿನಿಂದ ತಂದ ಮಣ್ಣಿನಿಂದ ನಾಥೂರಾಮ್ ಗೋಡ್ಸೆ ಪ್ರತಿಮೆಯನ್ನು ನಿರ್ಮಿಸುವುದಾಗಿ ಹಿಂದೂ ಮಹಾಸಭಾ ಹೇಳಿದೆ. ಸೋಮವಾರ ನಾಥೂರಾಮ್ ಗೋಡ್ಸೆಯ ಪುಣ್ಯತಿಥಿಯನ್ನು ಆಚರಿಸಿದ ಬಲಪಂಥೀಯ ಸಂಘಟನೆಗಳು ಈ ಬಗ್ಗೆ ಮಾಹಿತಿ ನೀಡಿವೆ.

ನಾಥೂರಾಮ್ ಗೋಡ್ಸೆ ಮತ್ತು ನಾರಾಯಣ ಆಪ್ಟೆ ಅವರನ್ನು ಗಲ್ಲಿಗೇರಿಸಿದ ಅಂಬಾಲಾ ಜೈಲಿನಿಂದ ಕಳೆದ ವಾರ ಹಿಂದೂ ಮಹಾಸಭಾದ ಕಾರ್ಯಕರ್ತರು ಮಣ್ಣನ್ನು ತಂದಿದ್ದಾರೆ. ಈ ಮಣ್ಣನ್ನು ಗೋಡ್ಸೆ ಮತ್ತು ಆಪ್ಟೆ ಅವರ ಪ್ರತಿಮೆಗಳನ್ನು ತಯಾರಿಸಲು ಬಳಸಲಾಗುವುದು. ಹಾಗೇ, ಆ ಪ್ರತಿಮೆಗಳನ್ನು ಗ್ವಾಲಿಯರ್ ನಲ್ಲಿರುವ ಹಿಂದೂ ಮಹಾಸಭಾದ ಕಚೇರಿಯಲ್ಲಿ ಸ್ಥಾಪಿಸಲಾಗುವುದು ಎಂದು ಹಿಂದೂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಜೈವೀರ್ ಭಾರದ್ವಾಜ್ ತಿಳಿಸಿದ್ದಾರೆ.

Related posts

ಫ್ಯಾಷನ್ ಹೆಸರಿನಲ್ಲಿ ವೇದಿಕೆಯಲ್ಲಿ ಬೆತ್ತಲಾದ ಜನಪ್ರಿಯ ರ‍್ಯಾಪ್ ಗಾಯಕನ ಪತ್ನಿ..! ಆಕೆಯ ಬಂಧನಕ್ಕೆ ಆಗ್ರಹ

ಕಟ್ಟಡದಿಂದ ಜಿಗಿದು ಉಸಿರುಚೆಲ್ಲಿದ್ದ ಅಣ್ಣ,ರಾಖಿ ಕಟ್ಟಲು ಸಹೋದರ ಬೇಕೆಂದು ಹಠ ಹಿಡಿದ ಮಗಳು: ನವಜಾತ ಶಿಶುವನ್ನೇ ಅಪಹರಿಸಿ ಮಗಳಿಗೆ ತಂದೊಪ್ಪಿಸಿದ ಪೋಷಕರು..!

2014ರಲ್ಲಿ ಎಂಜಿನಿಯರ್‌ ವಿರುದ್ಧ ಅತ್ಯಾಚಾರ ಕೇಸ್‌ ದಾಖಲಿಸಿದ್ದ ಯುವತಿ..! ಇಂದು(ಜೂ.27) ತೀರ್ಪು ಪ್ರಕಟಿಸಿದ ಕೋರ್ಟ್..! ದೂರು ನೀಡಿದಾಕೆ ಸೇರಿ 13 ಮಂದಿಯ ಜೈಲುಪಾಲು..!