ಕರಾವಳಿಕ್ರೈಂ

ಕೊಲ್ಲೂರು ಮೂಕಾಂಬಿಕೆಯ ದರ್ಶನಕ್ಕೆ ಬಂದಿದ್ದ ಭಕ್ತೆಯ ಬ್ಯಾಗ್‌ನಿಂದ ನಾಲ್ಕು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು..!

ನ್ಯೂಸ್‌ ನಾಟೌಟ್‌: ಕೊಲ್ಲೂರು ಮೂಕಾಂಬಿಕೆಯ ದರ್ಶನಕ್ಕೆ ಬಂದಿದ್ದ ಭಕ್ತೆಯೊಬ್ಬರ ಬ್ಯಾಗ್‌ನಿಂದ ನಾಲ್ಕು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ದೋಚಿದ ಘಟನೆ ನಡೆದಿದೆ.

ಕೇರಳ ರಾಜ್ಯದ ಹಣಂಗೊರು ಮೂಲದ ಶಾರದ ನಗರದ ನಿವಾಸಿಗಳಾದ ಪ್ರವೀಣ ಎಂಬುವರು ತನ್ನ ಪತ್ನಿ ವಾಣಿಶ್ರೀ ಹಾಗೂ ಮಕ್ಕಳೊಂದಿಗೆ ಸುರತ್ಕಲ್‌ನಲ್ಲಿ ವಾಸವಾಗಿದ್ದರು. ಭಾನುವಾರ ಕೊಲ್ಲೂರು ಮೂಕಾಂಬಿಕೆಯ ದರ್ಶನ ಮಾಡುವ ಯೋಜನೆ ರೂಪಿಸಿದ್ದರು. ಆದರೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಚಿಕ್ಕ ಪರ್ಸ್‌ನಲ್ಲಿ ಹಾಕಿ ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟಿದ್ದರು. ಬೆಳಗ್ಗೆ 11 ಗಂಟೆಗೆ ದೇವರ ದರ್ಶನ ಮಾಡಿ ಹೊರಗಡೆ ಬಂದಾಗ ಪ್ರವೀಣ ಅವರ ಹೆಂಡತಿಯ ವ್ಯಾನಿಟಿ ಬ್ಯಾಗ್‌ನ ಜಿಪ್‌ ಓಪನ್ ಆಗಿತ್ತು.

ತಕ್ಷಣ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಚಿನ್ನಾಭರಣಗಳಿದ್ದ ಚಿಕ್ಕ ಪರ್ಸ್ ಕಳುವಾಗಿದ್ದು ಬೆಳಕಿಗೆ ಬಂದಿದೆ. ಅದಾಗಲೇ ಭಕ್ತರ ಸೋಗಿನಲ್ಲಿದ್ದ ಕಳ್ಳರು ವಾಣಿಶ್ರೀ ಬ್ಯಾಗಿಗೆ ಕನ್ನ ಹಾಕಿದ್ದರು. ಚಿಕ್ಕ ಪರ್ಸ್ ನಲ್ಲಿದ್ದ ಚಿನ್ನದ ಚೈನ್ -2., ಚಿನ್ನದ ಬಳೆ -3., 4 ಜೊತೆ ಚಿನ್ನದ ಕಿವಿ ಓಲೆ, ಎಲ್ಲ ಒಟ್ಟು 13½ ಪವನ್ (108 ಗ್ರಾಂ) ಸೇರಿದಂತೆ ಒಟ್ಟು ಅಂದಾಜು ಮೌಲ್ಯ 4 ಲಕ್ಷದ 75 ಸಾವಿರ ರೂಪಾಯಿ ಚಿನ್ನಾಭರಣ ಸ್ವತ್ತುಗಳನ್ನು ಕದ್ದೊಯ್ದಿದ್ದಾರೆ. ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ವಿಶೇಷ ಪೂಜೆ

ಉಪ್ಪಿನಂಗಡಿ:ತಡರಾತ್ರಿ ಹೊತ್ತಿ ಉರಿದ ಬೇಕರಿ ಅಂಗಡಿ..! ಬೆಳ್ತಂಗಡಿ ಮತ್ತು ಪುತ್ತೂರಿನಿಂದ ಬಂದ ಅಗ್ನಿಶಾಮಕ ವಾಹನಗಳು..!

ಅಜ್ಜಾವರ: ಬೈಕ್-ಜೀಪ್ ನಡುವೆ ಭೀಕರ ಅಪಘಾತ, ಪತಿ ಸಾವು, ಪತ್ನಿ ಗಂಭೀರ