ಸಂಪಾಜೆ: ಕೊಡಗು -ದಕ್ಷಿಣ ಕನ್ನಡ ಗಡಿ ಭಾಗದಲ್ಲಿ ಕಾಡಾನೆ ದಾಳಿ ಮತ್ತೆ ಮುಂದುವರಿದಿದೆ. ನಿನ್ನೆ ರಾತ್ರಿ ಕೊಡಗು ಸಂಪಾಜೆ ಗ್ರಾಮ ವ್ಯಾಪ್ತಿಯಲ್ಲಿ ದುಗ್ಗಳ ತೀರ್ಥಪ್ರಸಾದ್ ರವರ ಕೃಷಿ ಭೂಮಿಗೆ ಕಾಡಾನೆ ದಾಳಿ ಮಾಡಿದ್ದು ಅಪಾರ ಪ್ರಮಾಣದ ಅಡಿಕೆ ತೆಂಗು, ಬಾಳೆ ಕೃಷಿ ನಷ್ಟವುಂಟಾಗಿರುತ್ತದೆ. ಇಂತಹ ದಾಳಿಗಳು ಇದು ಮೊದಲೇನಲ್ಲ. ಇಷ್ಟೆಲ್ಲ ಅನಾಹುತಗಳಾಗುತ್ತಿದ್ದರೂ ಅರಣ್ಯ ಇಲಾಖೆ ಮೌನ ವಹಿಸಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.