Uncategorized

ಗುಂಡಿ ತಪ್ಪಿಸಲು ಹೋಗಿ ಲಾರಿ ಅಡಿಗೆ ಬಿದ್ದು ಪ್ರಾಣ ಕಳೆದುಕೊಂಡ ಟೆಕ್ಕಿ

ನ್ಯೂಸ್ ನಾಟೌಟ್: ಹೊಸ ವರ್ಷದ ಆರಂಭವಾಗಿ ಇನ್ನೂ ನಾಲ್ಕು ವಾರವಾಗಿಲ್ಲ. ಈ ಬೆನ್ನಲ್ಲೇ ರಸ್ತೆ ಅಪಘಾತವೊಂದರಲ್ಲಿ 22 ವರ್ಷದ ಮಹಿಳಾ ಟೆಕ್ಕಿ ಪ್ರಾಣ ಕಳೆದುಕೊಂಡಿದ್ದಾರೆ.

ಇಂಜಿನೀಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಶೋಭಾ ಅನ್ನುವ ಯುವತಿ ತಮ್ಮ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಚೆನ್ನೈನ ಮದುರಾವೊಯಲ್ ಎಂಬಲ್ಲಿ ಹೋಗುತ್ತಿದ್ದಂತೆ ಎದುರಿಗೆ ಹೊಂಡವೊಂದು ಕಾಣಿಸಿಕೊಂಡಿದೆ. ಇದನ್ನು ತಪ್ಪಿಸಲು ಹೋಗಿ ಆಕೆ ಬ್ಯಾಲೆನ್ಸ್‌ ತಪ್ಪಿ ಕೆಳಕ್ಕೆ ಬಿದ್ದಿದ್ದಾಳೆ. ಈ ವೇಳೆ ಲಾರಿ ಚಾಲಕ ಆಕೆಯ ಮೇಲೆ ಚಲಾಯಿಸಿಕೊಂಡು ಹೋಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು. ಈ ವೇಳೆ ಆಕೆ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಸಾವಿಗೀಡಾದ ಯುವತಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದಳು. ಈಕೆ ತನ್ನ ಸಹೋದರನನ್ನು ಕೋಚಿಂಗ್‌ ಕ್ಲಾಸ್‌ ಗೆ ಬಿಡುವ ದಾರಿಯಲ್ಲಿದ್ದಾಗ ಇಂತಹದ್ದೊಂದು ದುರ್ಘಟನೆ ಸಂಭವಿಸಿದೆ.

Related posts

ಉಪ್ಪಳ: ಹಾಲು ತರಲು ಹೋಗಿದ್ದ ಬಾಲಕಿ ನಿಗೂಢವಾಗಿ ನಾಪತ್ತೆ..!

ನಾಯಿಯಿಂದ ತಪ್ಪಿಸಿಕೊಳ್ಳಲು ಹೋಗಿ ರೈಲಿನಡಿಗೆ ಬಿದ್ದರು..!ಇಬ್ಬರು ಮಕ್ಕಳು ದುರಂತ ಅಂತ್ಯ,ಏನಿದು ಹೃದಯವಿದ್ರಾವಕ ಘಟನೆ?

ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯ ಘೋಷಣೆ