Uncategorized

ಉಪ್ಪಳ: ಹಾಲು ತರಲು ಹೋಗಿದ್ದ ಬಾಲಕಿ ನಿಗೂಢವಾಗಿ ನಾಪತ್ತೆ..!

ಮಂಜೇಶ್ವರ: ಹದಿನೇಳರ ಹರೆಯದ ಬಾಲಕಿಯೊಬ್ಬಳು ನಿಗೂಢವಾಗಿ ನಾಪತ್ತೆಯಾದ ಘಟನೆ ಉಪ್ಪಳದಲ್ಲಿ ನಡೆದಿದೆ. ಉಪ್ಪಳ ಹಿದಾಯತ್ ಬಜಾರ್ ನಲ್ಲಿ ವಾಸವಾಗಿರುವ ಶಿವಮೊಗ್ಗ ಮೂಲದ ಸಾನಿಯಾ ನಾಪತ್ತೆಯಾದವಳು.

ಏನಿದು ಘಟನೆ?

ಮಂಗಳವಾರ ಬೆಳಗ್ಗೆ ಹಾಲು ತರಲೆಂದು ಅಂಗಡಿಗೆ ತೆರಳಿದ್ದ ಸಾನಿಯಾ ಮನೆಗೆ ಮರಳದೆ ನಾಪತ್ತೆಯಾಗಿದ್ದಾಳೆ. ಹಲವೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಬಳಿಕ ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ. ಸಮೀಪದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದು , ಹಲವೆಡೆ ಶೋಧ ಆರಂಭಿಸಿದ್ದಾರೆ. ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ , ಮಂಜೇಶ್ವರ ಠಾಣಾಧಿಕಾರಿ ಎ . ಸಂತೋಷ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

Related posts

ಕಿಚ್ಚ ಸುದೀಪ್ ಅವರನ್ನು ಭೇಟಿಯಾದ ಡಿಕೆಶಿ,ರಾಜಕೀಯ ಚರ್ಚೆಗಳಿಗೆ ಕಾರಣವಾದ ಫೋಟೊ ವೈರಲ್

ಇಂದು ಸಂಜೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ? ಹೊಸ ಮುಖಗಳಿಗೆ ಅವಕಾಶ ಸಾಧ್ಯತೆ

ಕೃಷಿಗೆ ಹಾಕಿದ್ದ ರಕ್ಷಣಾ ತಂತಿಗೆ ಸಿಲುಕಿದ್ದ ಕರಡಿ: ಗ್ರಾಮಸ್ಥರಲ್ಲಿ ಆತಂಕ !