ಕರಾವಳಿಸುಳ್ಯ

ಬೆಳ್ಳಾರೆ: ಪೆರುವಾಜೆ ಜಲದುರ್ಗಾ ದೇವಿ ದೇಗುಲದಲ್ಲಿ ಅದ್ದೂರಿ ಜಾತ್ರೋತ್ಸವ,ಕ್ಷೇತ್ರಕ್ಕೆ ವಿಜೃಂಭಣೆಯಿಂದ ಸಾಗಿ ಬಂದ ಹಸಿರುವಾಣಿ ಮೆರವಣಿಗೆ;ಕಣ್ಮನ ಸೆಳೆದ ಗೊಂಬೆಕುಣಿತ,ನೃತ್ಯಭಜನೆ,ನಾಸಿಕ್ ಬ್ಯಾಂಡ್..!

ನ್ಯೂಸ್‌ನಾಟೌಟ್‌: ಇತಿಹಾಸ ಪ್ರಸಿದ್ಧ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಜಾತ್ರೋತ್ಸವ ಆರಂಭಗೊಂಡಿದ್ದು, ಈ ಪ್ರಯುಕ್ತ ಕ್ಷೇತ್ರಕ್ಕೆ ಮಂಗಳವಾರ (ಜ.16) ವಿಜೃಂಭಣೆಯಿಂದ ಹಸಿರುವಾಣಿ ಮೆರವಣಿಗೆ ನಡೆಯಿತು.ಬೆಳ್ಳಾರೆ ಪೇಟೆಯ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಮುಂಭಾಗದಲ್ಲಿ ಮಾಣಿಲ ಶ್ರೀಧಾಮ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಸಿರುವಾಣಿ ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ವಾದ್ಯ ಬ್ಯಾಂಡ್, ಗೊಂಬೆ ಕುಣಿತ, ಮಕ್ಕಳ ನೃತ್ಯ ಭಜನೆ, ಸಿಂಗಾರಿ ಮೇಳ, ನಾಸಿಕ್ ಬ್ಯಾಂಡ್, ಯಕ್ಷಗಾನ ಶೈಲಿಯ ವೇಷಗಳು ಹಾಗೂ ವಿವಿಧ ವೇಷ ಭೂಷಣಗಳಿಂದ ಮೆರವಣಿಗೆ ಬೆಳ್ಳಾರೆ ಮುಖ್ಯಪೇಟೆಯಲ್ಲಿ ಸಾಗಿ ಪೆರುವಾಜೆ ದೇವಸ್ಥಾನದವರೆಗೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಸಮಿತಿ ಸದಸ್ಯರಾದ ಪಿ. ವೆಂಕಟಕೃಷ್ಣ ರಾವ್, ಜಯಪ್ರಕಾಶ್ ರೈ, ದಾಮೋದರ ನಾಯ್ಕ, ನಾರಾಯಣ ಕೊಂಡೆಪ್ಪಾಡಿ, ಜಗನ್ನಾಥ ರೈ, ಭಾಗ್ಯಲಕ್ಷ್ಮಿ, ಯಶೋದ ಎ,ಎಸ್. ಹಾಗೂ ನೂರಾರು ಜನ ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Related posts

ಸುಳ್ಯ:KVGಯ ಎಲೆಕ್ಟ್ರೀಷಿಯನ್ ವಸಂತ ಕುರುಂಜಿಗುಡ್ಡೆ ನಿಧನ,ಅಂತಿಮ ದರ್ಶನ ಪಡೆದ AOLE ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ಹಾಗೂ ಸಿಬ್ಬಂದಿ

ಸುಳ್ಯದ ರಿಕ್ಷಾ ಚಾಲಕ ಅಬ್ದುಲ್ ರಜಾಕ್ ಸಾಹೇಬ್ ಹೃದಯಾಘಾತದಿಂದ ಸಾವು

ಎಲ್ಲರಂತೆ ನಾವಲ್ಲ,ನಮ್ಮಂತೆ ಯಾರಿಲ್ಲ..ಆದರೂ ನಿಮ್ಮೊಳಗೆ ನಾವು:ವಿಶ್ವ ಆಟಿಸಂ ದಿನದ ಶುಭಾಶಯಗಳು