ಕರಾವಳಿ

ಕಾಂಗ್ರೆಸ್‌ ಪಕ್ಷವನ್ನು ನಿಷೇಧಿಸಿ: ನಳಿನ್‌ ಕುಮಾರ್ ಕಟೀಲ್

ನ್ಯೂಸ್ ನಾಟೌಟ್: ದೇಶದಲ್ಲಿ ಭಯೋತ್ಪಾದನೆ, ನಕ್ಸಲ್‌ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಕಾಂಗ್ರೆಸ್‌ ಅನ್ನು ನಿಷೇಧ ಮಾಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ಕಾಂಗ್ರೆಸ್‌ ಅನ್ನು ವಿಸರ್ಜನೆ ಮಾಡಬೇಕು ಎಂದು ಗಾಂಧೀಜಿ ಹೇಳಿದ್ದರು. ಭಯೋತ್ಪಾದನೆಗೆ ಬೆಂಗಾವಲಾಗಿ ನಿಂತಿರುವುದಲ್ಲದೇ, ದೇಶ, ಧರ್ಮ ಹಾಗೂ ಹಿಂದೂ- ಮುಸ್ಲಿಮರನ್ನು ಒಡೆದಿರುವುದು ಕಾಂಗ್ರೆಸ್‌ ಎಂದು ಹೇಳಿದರು.

ಪಿಎಫ್‌ಐ ನಿಷೇಧ ಮಾಡಿರುವುದನ್ನು ಕಾಂಗ್ರೆಸ್‌ನ ಕೆಲವರು ವಿರೋಧಿಸುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು. ಹಿಂದೂಗಳನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಪಿಎಫ್‌ಐ, ಕೆಎಫ್‌ಡಿ ಸಂಘಟನೆಗಳ 2 ಸಾವಿರ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ವಾಪಸ್‌ ಪಡೆದರು. ಅದೇ ಮತಾಂಧ ಶಕ್ತಿಗಳು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿವೆ ಎಂದು ಹೇಳಿದರು.

Related posts

ಸರ್ಕಾರದಿಂದಲೇ ತಿರುಪತಿ ದೇವಸ್ಥಾನ ಶುದ್ಧೀಕರಣಕ್ಕೆ ತಯಾರಿ..! ಈ ಬಗ್ಗೆ ಆಂಧ್ರ ಮುಖ್ಯಮಂತ್ರಿ ಹೇಳಿದ್ದೇನು..?

ನೀರಬಿದಿರೆ ತರವಾಡು ದೈವಗಳ ಪ್ರತಿಷ್ಠಾನ ಸಮಿತಿ ಮಹಾಸಭೆ, ತಂಬಿಲ ಸೇವೆ

ಸುಳ್ಯ -ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ