ಸುಳ್ಯ: ಕಸಬಾ, ದುಗ್ಗಲಡ್ಕದ ನೀರಬಿದಿರೆ ತರವಾಡು ದೈವಗಳ ಪ್ರತಿಷ್ಠಾನ ಸಮಿತಿ ಮಹಾಸಭೆ ಹಾಗೂ ದೈವಗಳಿಗೆ ತಂಬಿಲ ಸೇವೆಯು ಇತ್ತೀಚೆಗೆ ನೀರಬಿದಿರೆ ತರವಾಡು ಮನೆಯಲ್ಲಿ ನಡೆಯಿತು. ಬಳಿಕ ನಡೆದ ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ದಿಲೀಪ್ ಕುಮಾರ್.ಎನ್, ಅಧ್ಯಕ್ಷರಾಗಿ ಶಂಕರ್ ಪೆರಾಜೆ, ಉಪಾಧ್ಯಕ್ಷರಾಗಿ ನಾರಾಯಣ ನರಿಂಗಾನ, ಕಾರ್ಯದರ್ಶಿಯಾಗಿ ತೇಜೇಶ್.ಬಿ.ವೈ ಕಲ್ಲುಗುಂಡಿ, ಜತೆ ಕಾರ್ಯದರ್ಶಿಯಾಗಿ ಸುಂದರ ನೀರಬಿದಿರೆ, ಕೋಶಾಧಿಕಾರಿಗಳಾಗಿ ಕೇಶವ ನೀರಬಿದಿರೆ ಹಾಗೂ ಚಂದ್ರ ಪೆರಾಜೆ ಇವರನ್ನು ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ ಗುಡ್ಡಪ್ಪ ನೀರಬಿದಿರೆ, ಬಾಲಕೃಷ್ಣ ಮಂಜನಾಡಿ, ನಾರಾಯಣ.ಕೆ, ಮಣಿಕಂಠ ಕುಂಬ್ಳೆ, ಆನಂದ ನೆಕ್ಕಿಲಡ್ಕ, ಐತಪ್ಪ ಬೆಳ್ಳಾರೆ, ಬಾಲಕೃಷ್ಣ.ಎನ್ ಆಯ್ಕೆಯಾದರು.