ಕ್ರೈಂ

ತನ್ನದೇ ಸ್ಕೂಟರ್ ಗೆ ಬೆಂಕಿಕೊಟ್ಟು ಬಸ್ ಚಾಲಕ ಆತ್ಮಹತ್ಯೆ

ಬಾಳಿಲ: ಇಲ್ಲಿನ ಬಸ್ ಚಾಲಕರೊಬ್ಬರು ತನ್ನದೇ ಸ್ಕೂಟರ್ ಗೆ ಬೆಂಕಿಕೊಟ್ಟು ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಬುಧವಾರ ಸಂಜೆ ಘಟನೆ ನಡೆದಿದ್ದು ಬಾಳಿಲ ಅಯ್ಯನಕಟ್ಟೆ ಗುರಿಕ್ಕಾನ ಮನೆ ಎನ್.ಹರೀಶ್ (40) ಎಂಬವರು ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ.

ಎಂದಿನಂತೆ ಬೆಳಗ್ಗೆ ಹರೀಶ್ ಕೆಲಸಕ್ಕೆ ಹೋದವರು ಸಂಜೆ ಸ್ಕೂಟರ್ ನಲ್ಲಿ ತಮ್ಮ ಮನೆಗೆ ಬಂದಿದ್ದಾರೆ. ಮನೆಗೆ ಬಂದವರೇ ಸ್ಕೂಟರ್ ನಿಲ್ಲಿಸಿ ತನ್ನದೇ ಸ್ಕೂಟರಿಗೆ ಬೆಂಕಿ ಕೊಟ್ಟಿದ್ದಾರೆ. ಬಳಿಕ ಸ್ನಾನ ಮಾಡಲು ಹೋಗಿದ್ದಾರೆ. ಇದನ್ನು ಕಂಡ ಅವರ ಮಗ ನೀರು ಹಾಕಿ ಸ್ಕೂಟರಿನ ಬೆಂಕಿ ನಂದಿಸಿದ್ದಾರೆ. ಈ ವೇಳೆ ಹರೀಶ್ ವಿಷ ಸೇವಿಸಿದ್ದು ತಿಳಿದು ಬಂದಿದೆ. ಕೂಡಲೇ ಅವರನ್ನು ಆಂಬ್ಯುಲೆನ್ಸ್ ಮೂಲಕ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅದಾಗಲೇ ಅವರು ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ. ಮೃತರು ಶಾಲಾ ಬಸ್ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದರೆನ್ನಲಾಗಿದೆ. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ.

Related posts

ಮದುವೆಗೆ ಒಪ್ಪದ ಪ್ರಿಯಕರನ ಮೇಲೆ ಆಸಿಡ್ ಎರಚಿದ ಯುವತಿ..!

ಭಾರತದ ನಿವೃತ್ತ ನೌಕಾಪಡೆ ಅಧಿಕಾರಿಗಳಿಗೆ ಖತರ್ ಮರಣದಂಡನೆ ಘೋಷಿಸಿದ್ದೇಕೆ..? ಆ 8 ಅಧಿಕಾರಿಗಳು ಇಸ್ರೆಲ್ ಪರ ಗೂಢಚರ್ಯೆ ಮಾಡಿದ್ದರೇ..? ಭಾರತ ಸರ್ಕಾರ ಈ ಬಗ್ಗೆ ಹೇಳಿದ್ದೇನು?

ಮದುವೆಗೆ ಬಂದಿದ್ದ ಸ್ನೇಹಿತ ಮಂಟಪದಲ್ಲೇ ಕುಸಿದು ಬಿದ್ದು ಸಾವು..! ಇಲ್ಲಿದೆ ವೈರಲ್ ವಿಡಿಯೋ