ಗೋಳಿತೊಟ್ಟು: ಬಾವಿಗೆ ಬಿದ್ದ ಪುಟ್ಟ ಕರುವೊಂದನ್ನು ಬಜರಂಗದಳದ ಕಾರ್ಯಕರ್ತರು ರಕ್ಷಿಸಿ ಸುದ್ದಿಯಾಗಿದ್ದಾರೆ. ಕಡಬ ತಾಲೂಕು ಗೋಳಿತ್ತೊಟ್ಟು ಗ್ರಾಮದ ರಮೇಶ ಕಲ್ಲಡ್ಕ ಇವರ ಮನೆಯ 1ವರ್ಷದ ಕರು 30 ಅಡಿ ಆಳದ ಬಾವಿಗೆ ಬಿದ್ದು ಜೀವನ್ಮರಣ ಸ್ಥಿತಿಯಲ್ಲಿತ್ತು. ತಕ್ಷಣ ಬಾವಿಗಿಳಿದ ಬಜರಂಗದಳದ ಕಾರ್ಯಕರ್ತರು ಸುರಕ್ಷಿತವಾಗಿ ಗೋವನ್ನು ಮೇಲಕ್ಕೆ ತರುವಲ್ಲಿ ಯಶಸ್ವಿಯಾದರು. ಬಾಲಕೃಷ್ಣ ಗೌಡ ಗೌಡತ್ತಿಗೆ ಬಾವಿಗಿಳಿದು ಕರುವನ್ನು ಮೇಲಕ್ಕೆತ್ತಲು ಮುಖ್ಯ ಕಾರ್ಯ ನಿರ್ವಹಿಸಿದರು. ಉಳಿದಂತೆ ರಕ್ಷಣಾ ಕಾರ್ಯದಲ್ಲಿ ಬಜರಂಗದಳ ಗೋಳಿತ್ತೊಟ್ಟು ಪ್ರಖಂಡ ಸಂಚಾಲಕ ರಾಜೇಶ್ ಕಲ್ಲಡ್ಕ, ಸಹ ಸಂಚಾಲಕ ನಾಗೇಶ್ ಪೆರಣ, ನವೀನ್ ಕೋಡಿಯಡ್ಕ, ರಾಮಚಂದ್ರ ಪೆರಣ, ವಿಶ್ವನಾಥ ಪೆರಣ ಮತ್ತಿತರರು ಭಾಗಿಯಾಗಿದ್ದರು.