ಸುಳ್ಯ: ಯಕ್ಷಗಾನ ಕ್ಷೇತ್ರದಲ್ಲಿ ಅನುಪಮ ಸಾಧನೆ ಗೈದ ಹಿನ್ನೆಲೆಯಲ್ಲಿ ಜಯಾನಂದ ಸಂಪಾಜೆ ಸೇರಿದಂತೆ ಒಟ್ಟಾರೆ 58 ಮಂದಿ ಸಾಧಕರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಾಗಿದ್ದಾರೆ. ರಾಜ್ಯೋತ್ಸವದ ದಿನದಂದು ಇವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ. ಬಹು ವರ್ಷದ ಯಕ್ಷಗಾನದ ಅನುಭವ ಹೊಂದಿರುವ ಜಯಾನಂದ ಅವರು ಹಲವು ಪ್ರಸಂಗಗಳಲ್ಲಿ ತನ್ನದೇ ಆದ ವಿಶಿಷ್ಟ ಅಭಿನಯದ ಮೂಲಕ ಜನಮನ ಗೆದ್ದಿದ್ದಾರೆ.