ಕರಾವಳಿ

ಅಂಚೆ ಇಲಾಖೆ ಸಿಬ್ಬಂದಿ ಎಂ. ಎಲ್. ನಾರಾಯಣ ನಿವೃತ್ತಿ

809

ಸುಳ್ಯ:ಇಲ್ಲಿನ ಉಪವಿಭಾಗ ಅಂಚೆ ಕಛೇರಿಯಲ್ಲಿ ಎಂ.ಟಿ.ಎಸ್. ಆಗಿದ್ದ ಎಂ. ಎಲ್. ನಾರಾಯಣ ತೊಡಿಕಾನ ಇವರು ಅ. 30 ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ.

ತೊಡಿಕಾನ ಗ್ರಾಮದ ಮಾವಿನಕಟ್ಟೆಯ ಎಂ. ಎಲ್. ನಾರಾಯಣ, ತೊಡಿಕಾನ ಶಾಖಾ ಅಂಚೆ ಕಛೇರಿಯಲ್ಲಿ 38 ವರ್ಷ ಸೇವೆ ಸಲ್ಲಿಸಿದ್ದರು, ಬಳಿಕ ಪದೋನ್ನತಿ ಹೊಂದಿ ಪುತ್ತೂರು ಪ್ರಧಾನ ಅಂಚೆ ಕಛೇರಿಗೆ ಎಂ. ಟಿ. ಎಸ್. ಆಗಿ ವರ್ಗಾವಣೆಗೊಂಡಿದ್ದರು. ಅಲ್ಲಿ 1 ವರ್ಷ ಸೇವೆ ಸಲ್ಲಿಸಿ, ಬಳಿಕ  ಸುಳ್ಯ ಅಂಚೆ ಕಛೇರಿಗೆ ವರ್ಗಾವಣೆಯಾಗಿದ್ದರು. ಸುಳ್ಯದಲ್ಲಿ ಒಂದು ವರ್ಷ, ಹೀಗೆ ಸುಧೀರ್ಘ 40 ವರ್ಷಗಳ ಕಾಲ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪತ್ನಿ ಎಂ.ಎಲ್. ವೇದಾವತಿ ಗೃಹಿಣಿ, ಹಿರಿಯ ಪುತ್ರಿ  ಎಂ. ಎಲ್. ವಿನುತಾರಿಗೆ ವಿವಾಹವಾಗಿದೆ , ಕಿರಿಯ ಪುತ್ರಿ ಎಂ.ಎಲ್. ಅಂಜಲಿ ಅರಂತೋಡು ಎನ್.ಯಂ. ಪಿ.ಯು. ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ.

See also  ಸುಳ್ಯದ ಖ್ಯಾತ ಉದ್ಯಮಿಯ ಸೊಸೆ ಐಶ್ವರ್ಯಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!,ನಾಲ್ಕು ಪುಟಗಳ ಡೆತ್‌ನೋಟ್‌ ಪತ್ತೆ,ಐವರು ಅರೆಸ್ಟ್..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget