ನ್ಯೂಸ್ ನಾಟೌಟ್ :ರೌಡಿಯೊಬ್ಬನನ್ನು ಕಿಡ್ನ್ಯಾಪ್ ಮಾಡಿ ವಿವಸ್ತ್ರಗೊಳಿಸಿ ದಾಳಿ ನಡೆಸಿರುವ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ.ನಟೋರಿಯಸ್ ರೌಡಿ ಕುಡಿದ ಮತ್ತಿನಲ್ಲಿ ಠಕ್ಕರ್ ಕೊಟ್ಟಿದ್ದಕ್ಕೆ ಎದುರಾಳಿ ಗ್ಯಾಂಗ್ ಟಾರ್ಚರ್ ನೀಡಿದೆ.
ನಟೋರಿಯಸ್ ರೌಡಿ ಸಚಿನ್ ಷ್ಯಾಡೋ ಎಂಬಾತ ಕುಡಿದ ನಶೆಯಲ್ಲಿದ್ದ. ಈ ವೇಳೆ ಎದುರಾಳಿ ಗ್ಯಾಂಗ್ಗೆ ಅವಾಜ್ ಹಾಕಿದ್ದ ಎನ್ನಲಾಗಿದೆ.ಬಳಿಕ ರೌಡಿ ಎದುರಾಳಿ ಗ್ಯಾಂಗ್ ಬರುವ ಮುನ್ನವೇ ಕಾಲ್ಕಿತ್ತಿದ್ದ.ಈ ವೇಳೆ ಎದುರಾಳಿ ಗ್ಯಾಂಗ್ ಕೈಗೆ ಸಿಕ್ಕಿ ಹಾಕಿಕೊಂಡ ರೌಡಿ ಸಚಿನ್ ಷ್ಯಾಡೋ ಸ್ನೇಹಿತನನ್ನು ಹಿಗ್ಗಾಮುಗ್ಗಾ ಥಳಿಸಿದ್ದರು.ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು.ಚಿಕಿತ್ಸೆ ಮುಂದುವರಿದಿತ್ತು.
ಈ ಸಂದರ್ಭ ಆಸ್ಪತ್ರೆಗೆ ದಾಖಲಾದ ಸ್ನೇಹಿತನನ್ನು ನೋಡಲು ಸಚಿನ್ ಷ್ಯಾಡೋ ಬರುತ್ತಾನೆ ಅನ್ನೊದನ್ನು ಖಚಿತ ಮಾಡಿಕೊಂಡು ಆತ ಬರುವುದನ್ನೇ ಎದುರಾಳಿ ಗ್ಯಾಂಗ್ ಕಾದು ನಿಂತಿತ್ತು. ಅಂದುಕೊಂಡಂತೆ ಆಸ್ಪತ್ರೆಗೆ ಬಂದ ರೌಡಿ ಸಚಿನ್ ಷ್ಯಾಡೋನನ್ನು ಅಲ್ಲಿಂದ ಕಿಡ್ನ್ಯಾಪ್ ಮಾಡಿ ಎಸ್ಕೇಪ್ ಆಗಿದ್ದಾರೆ. ಬರೋಬ್ಬರಿ ಮೂರು ದಿನಗಳ ಕಾಲ ಲಾಕ್ ಮಾಡಿಕೊಂಡ ಎದುರಾಳಿ ಗುಂಪು ಖಾಸಗಿ ಲೇಔಟ್ನಲ್ಲಿ ವಿವಸ್ತ್ರಗೊಳಿಸಿ ಮನಸೋ ಇಚ್ಛೆ ಹ*ಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಜತೆಗೆ ಹಲ್ಲೆ ಮಾಡಿರುವ ವಿಡಿಯೊ ಮಾಡಿ ವೈರಲ್ ಕೂಡ ಮಾಡಿದ್ದಾರೆ ಎಂದು ತಿಳಿದು ಬಂದಿದೆ.