ಕರಾವಳಿ

ಸುಳ್ಯ: ಮುಸ್ಲಿಂ ಧರ್ಮದ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾದ ಆಸಿಯಾ ಕಟ್ಟೆಕಾರ್

ಸುಳ್ಯ :ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಸುಳ್ಯ ಕಟ್ಟೆಕಾರ್ ಕುಟುಂಬದ  ಖಲೀಲ್ ಎಂಬವನನ್ನು ಮದುವೆಯಾಗಿ ಬಳಿಕ ಡೈವೋರ್ಸ್ ನಲ್ಲಿ ಅಂತ್ಯವಾದ ಆಸಿಯಾ ಬದುಕಿನ ಮತ್ತೊಂದು ಇನಿಂಗ್ಸ್ ಆರಂಭವಾಗಿದೆ. ಇದೀಗ ಕೇರಳ ಮೂಲದ ಉದ್ಯಮಿ ಇಮ್ರಾನ್ ಎಂಬವರನ್ನು ಮದುವೆಯಾಗಿದ್ದಾಳೆ ಎಂದು ತಿಳಿದು ಬಂದಿದೆ.

ಹಿಂದೂ ಕುಟುಂಬದಲ್ಲಿ ಜನಿಸಿ ಶಾಂತಿ ಹೆಸರಿನಲ್ಲಿ ಬೆಳೆದಿದ್ದ ಹುಡುಗಿ ಬಳಿಕ ಆಸಿಯಾ ಆದಳು. ಕಟ್ಟೆಕಾರ್ ಕುಟುಂಬದ ಇಬ್ರಾಹಿಂ ಖಲೀಲ್‌ ಕಟ್ಟೆಕಾರ್ ನನ್ನು ಮದುವೆಯಾದಳು. ಆದರೆ ಬರುತ್ತಾ ಇವರ ಜೀವನದಲ್ಲಿ ವಿರಸ ಹೆಚ್ಚಾಯಿತು. ಆಕೆಯನ್ನು ಬಿಟ್ಟು ಆತ ತಲೆಮರೆಸಿಕೊಂಡ. ಆಕೆ ನ್ಯಾಯಕ್ಕಾಗಿ ಕಟ್ಟೆಕಾರ್ ಅಂಗಡಿ ಎದುರು ಹೋರಾಟ ನಡೆಸಿದಳು. ಎಷ್ಟು ಪ್ರಯತ್ನಿಸಿದರೂ ಆಸಿಯಾಗೆ ಇಬ್ರಾಹಿಂ ಖಲೀಲ್ ಜತೆಗಿನ ಜೀವನ ನಡೆಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಈ ಜೋಡಿ ಪರಸ್ಪರ ಸಮ್ಮತಿಯಿಂದ ಡೈವೋರ್ಸ್ ಗೆ ಪಡೆದುಕೊಂಡಿತ್ತು. ಇದೀಗ ಆಸಿಯಾ ಮತ್ತೊಂದು ಮದುವೆಯಾಗಿ ಮುಸ್ಲಿಂ ಧರ್ಮದಲ್ಲಿಯೇ ತನ್ನ ಜೀವನ ಮುಂದುವರಿಸಿಕೊಂಡು ಹೋಗಿದ್ದಾರೆ.

Related posts

ಡ್ಯಾಂ ಬಳಿ ಮೀನಿಗೆ ಗಾಳ ಹಾಕುತ್ತಿದ್ದ ವೇಳೆ ನೀರಿಗೆ ಆಯತಪ್ಪಿ ಬಿದ್ದ ಯುವಕ..!ಸತತ 2 ಗಂಟೆಗಳ ಕಾಲ ಈಜಾಡಿ ಪವಾಡ ಸದೃಶ ಪಾರಾದ..!ಅಷ್ಟಕ್ಕೂ ಡ್ಯಾಂನಿಂದ ನೀರು ರಭಸವಾಗಿ ಹರಿಯುತ್ತಿದ್ದರೂ ಈತ ಬಚಾವಾಗಿದ್ದೇಗೆ?

ಸುಳ್ಯ : ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು ವತಿಯಿಂದ ‘ಡಾ. ಕೆ.ವಿ.ಜಿ. ಸ್ಕಾಲರ್‌ಶಿಪ್ ‘ ಜೂ. 20ರಂದು ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟ

ಸುಳ್ಯ: ಗಣೇಶೋತ್ಸವ ಕಾರ್ಯಕ್ರಮದ ವೇಳೆ ಕುಡುಕನ ಅವಾಂತರ..! ಕಂಠ ಪೂರ್ತಿ ಮದ್ಯ ಸೇವಿಸಿ ಸಂಘಟಕರ ಎದುರಲ್ಲೇ ಬಿದ್ದು ಹೊರಳಾಡಿದ ಭೂಪ..!