ಕರಾವಳಿ

ಸಮಾಜದ ಅಭಿವೃದ್ಧಿಗೆ ಉತ್ತಮ ಬರಹಗಳು ಅವಶ್ಯಕ : ಡಾ. ಉಮ್ಮರ್ ಬೀಜದಕಟ್ಟೆ

462
Spread the love

ಹಾಸನ: ಪರಸ್ಪರ ಮನುಷ್ಯ-ಮನುಷ್ಯರ ನಡುವೆ ಕಂದಕ ನಿರ್ಮಾಣವಾಗುತ್ತಿರುವ ಪ್ರಸಕ್ತ ಸನ್ನಿವೇಶಗಳಲ್ಲಿ ಉತ್ತಮ ಬರಹಗಳು ಮನುಷ್ಯ ಮನಸ್ಸುಗಳನ್ನು ಜೋಡಿಸುವುದರ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ ಎಂದು ಡಾ. ಉಮ್ಮರ್ ಬೀಜದಕಟ್ಟೆ ತಿಳಿಸಿದರು.

ಹಾಸನದ ಮಾಣಿಕ್ಯ ಪ್ರಕಾಶನ (ರಿ) ಮತ್ತು ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ಸಹಕಾರದಲ್ಲಿ ನಡೆದ 5ನೇ ರಾಜ್ಯ ‘ಕವಿ – ಕಾವ್ಯ ಸಂಭ್ರಮ – 2021’ರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತಿಗಳು, ಮತ್ತು ಬರಹಗಾರರು ತಮ್ಮ ಬರಹಗಳ ಮೂಲಕ ಈ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು. ಈ ಕಾರ್ಯಕ್ರಮವನ್ನು ಖ್ಯಾತ ಸಾಹಿತಿ ಶ್ರೀಮತಿ ಬಾನು ಮುಷ್ತಾಕ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಾಹಿತ್ಯ ಸಂಘಟಕರಾದ ಕೊಟ್ರೇಶ್ ಎಸ್. ಉಪ್ಪಾರ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ನುಡಿದರು, ಕವಯತ್ರಿ ತುಮಕೂರಿನ ಹೇಮಾಲತಾ ನರಿಹಳ್ಳಿ ಪ್ರಾರ್ಥಿಸಿದರು. ಅರಸಿಕೆರೆಯ ಶಿಕ್ಷಕಿ ಮುತ್ತು ವಾಣಿ ಕಾರ್ಯಕ್ರಮವನ್ನುನಿರೂಪಿಸಿದರು. ಸಾಹಿತಿ ವಾಸು ಸಮುದ್ರವಳ್ಳಿ ವಂದಿಸಿದರು.

See also  ಕೊಡಗಿನ ಜನರಿಗೂ ಶುರುವಾಯ್ತಾ ಹುಲಿಯುಗುರಿನ ಭಯ..? ವಿರಾಜಪೇಟೆ ಶಾಸಕ ಎ ಎಸ್ ಪೊನ್ನಣ್ಣ ಜನರಿಗೆ ನೀಡಿದ ಅಭಯವೇನು?
  Ad Widget   Ad Widget   Ad Widget   Ad Widget   Ad Widget   Ad Widget