ಕರಾವಳಿಕ್ರೈಂ

ಪುತ್ತೂರು: ಮರದ ಗೆಲ್ಲು ತಲೆ ಮೇಲೆ ಬಿದ್ದು ವ್ಯಕ್ತಿ ಮೃತ್ಯು

ನ್ಯೂಸ್ ನಾಟೌಟ್ : ಮನೆ ಸಮೀಪ ಮರ ಕಡಿಯುತ್ತಿದ್ದ ಸಂದರ್ಭ ಮರದ ಗೆಲ್ಲು ತಲೆಗೆ ಬಡಿದು ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ದರ್ಬೆತ್ತಡ್ಕದಲ್ಲಿ ನಡೆದಿದೆ.ದರ್ಬೆತ್ತಡ್ಕದ ನಿವಾಸಿ ಗುರುಪ್ರಸಾದ್(49) ಮೃತಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದೆ.

ಗುರುಪ್ರಸಾದ್ ರವರು ತಮ್ಮ ಜಮೀನಿನಲ್ಲಿ ಮರದ ಗೆಲ್ಲನ್ನು ಕಡಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಇವರು ಹಗ್ಗದಿಂದ ಮರದ ಗೆಲ್ಲನ್ನು ಕೆಳಗೆ ನಿಂತು ಎಳೆಯುತ್ತಿದ್ದರು ಎನ್ನಲಾಗಿದ್ದು, ಈ ವೇಳೆ ಆಕಸ್ಮಿಕವಾಗಿ ಗೆಲ್ಲು ಇವರ ಮೈ ಮೇಲೆ ಬಿದ್ದಿದೆ. ಪರಿಣಾಮ ಗಂಭೀರ ಗಾಯಗೊಂಡಿದ್ದ ಇವರನ್ನು ತಕ್ಷಣವೇ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎನ್ನಲಾಗಿದೆ.ಮೃತರ ಪತ್ನಿ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿದ್ದು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

Related posts

ಅಂದು ಇದೇ ದಿನ ಸುಳ್ಯಕ್ಕೆ ಆಗಮಿಸಿದ್ದರು ರಾಷ್ಟ್ರಪಿತ ಮಹಾತ್ಮಾ ಗಾಂಧಿ..! 90 ವರ್ಷದ ನೆನಪಿಗಾಗಿ ‘ಗಾಂಧಿ ಕಟ್ಟೆ’ ಲೋಕಾರ್ಪಣೆ…

ಪಂಜ: ವಿದ್ಯುತ್ ಕಂಬವೇರಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಭಾರಿ ಅವಘಡ, ಕಾರ್ಮಿಕ ಸಾವು, ಸಿಡಿಲು ಬಡಿಯಿತೇ..? ವಿದ್ಯುತ್ ಶಾಕ್ ತಗುಲಿತೇ..? ಸಿಗಬೇಕಿದೆ ಉತ್ತರ

ಸುಳ್ಯ : ತಂದೆಯಿಂದಲೇ ಮಗನಿಗೆ ಕತ್ತಿಯಿಂದ ಹಲ್ಲೆ, ಮಗ ಆಸ್ಪತ್ರೆಗೆ ದಾಖಲು