ಕ್ರೈಂ

ಸುಳ್ಯ : ತಂದೆಯಿಂದಲೇ ಮಗನಿಗೆ ಕತ್ತಿಯಿಂದ ಹಲ್ಲೆ, ಮಗ ಆಸ್ಪತ್ರೆಗೆ ದಾಖಲು

375
Spread the love

ಸುಳ್ಯ: ತಂದೆಯೇ ಮಗನಿಗೆ ಕತ್ತಿಯಿಂದ ಕಡಿದು ಗಂಭೀರ ಗಾಯಗೊಳಿಸಿದ ಘಟನೆ ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದ ಗುಂಡ್ಯ ಎಂಬಲ್ಲಿ ನಡೆದಿದೆ.

ಗುಂಡ್ಯ ನಿವಾಸಿ ಐತಪ್ಪ ನಾಯ್ಕ ಹಾಗೂ ಅವರ ಮಗ ಜಯಪ್ರಕಾಶ್ ಮಧ್ಯೆ ಯಾವುದೋ ಕಾರಣಕ್ಕೆ ಮನೆಯಲ್ಲೇ ಮಾತಿನ ಚಕಮಕಿ ನಡೆದಿತ್ತು. ಮಾತಿನ ಚಕಮಕಿ ನಡೆದು ತಂದೆ ಮಗ ಹೊಡೆದಾಡಿಕೊಂಡಿದ್ದರು. ಈ ಸಂದರ್ಭ ತಂದೆ ಐತಪ್ಪ ನಾಯ್ಕ ಮಗ ಜಯಪ್ರಕಾಶ್ ಅವರ ಎದೆಯ ಭಾಗಕ್ಕೆ ಕತ್ತಿಯಿಂದ ಕಡಿದಿದ್ದಾರೆಂದು ಆರೋಪಿಸಲಾಗಿದೆ. ಗಂಭೀರ ಗಾಯಗೊಂಡು ವಿಪರೀತ ರಕ್ತಸ್ರಾವಕ್ಕೊಳಗಾದ ಯುವಕ ಜಯಪ್ರಕಾಶ್ ನನ್ನು ಅವರ ಸಂಬಂಧಿ ಆಟೋ ಚಾಲಕ ರವಿ ಎಂಬವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ವಿಪರೀತ ರಕ್ತಸ್ರಾವ ಉಂಟಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆ ಮೇರೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನು, ತಂದೆ ಹಾಗೂ ಮಗ ಇಬ್ಬರೂ ಕುಡಿತದ ಚಟ ಹೊಂದಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕುಡಿತದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ತಂದೆ ಹಾಗೂ ಮಗನ ಮಧ್ಯೆ ಜಗಳ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ತಂದೆ ಮಗನ ಹೊಡೆದಾಟಕ್ಕೆ ಸ್ಪಷ್ಟ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.

See also  ಬೈಕ್‌ ಬಿಟ್ಟು ಬಂದಿದ್ದಕ್ಕೆ ಹೆಲ್ಮೆಟ್‌ ನಿಂದ ತಂದೆಗೆ ಹೊಡೆದ ಮಗ..! ಮಗನನ್ನೇ ಇರಿದು ಕೊಂದ ತಂದೆ..!
  Ad Widget   Ad Widget   Ad Widget   Ad Widget   Ad Widget   Ad Widget