ನ್ಯೂಸ್ ನಾಟೌಟ್ : ಕೆ.ಎಂ.ಎಫ್ (ನಂದಿನಿ) ಎಂಡಿ ಜಗದೀಶ್ ಗೆ ಎಂಬವರಿಗೆ ಸ್ಥಾನ ತೋರಿಸದೇ ದಿಢೀರ್ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಡಿ.2ರಂದೇ ವರ್ಗಾವಣೆ ಮಾಡಲಾಗಿದೆ. ನಂದಿನಿಯ ಬ್ರ‍್ಯಾಂಡ್ ನ ಇಡ್ಲಿ, ದೋಸೆ ಹಿಟ್ಟನ್ನು ತರಲು ಜಗದೀಶ್ ಅವರು ದೊಡ್ಡಮಟ್ಟದ ಪ್ಲ್ಯಾನ್ ಮಾಡಿದ್ದರು. ನಂದಿನಿಯ ಹೊಸ ಪ್ರಾಡೆಕ್ಟ್ ರೂಪುರೇಷೆ ಟೆಂಡರ್ ಹಂತದಲ್ಲಿದೆ. ಅದರೆ, ಅಷ್ಟರಲ್ಲಿ ಸ್ಥಳ ನಿಯುಕ್ತಿ ಮಾಡದೇ ದಿಢೀರ್ ವರ್ಗಾವಣೆ ಮಾಡಲಾಗಿದೆ.
ಕೆಎಂಎಫ್ ಎಂಡಿಯಾಗಿ ಸಿಎಂ ಜಂಟಿ ಕಾರ್ಯದರ್ಶಿಯಾಗಿದ್ದ ಬಿ.ಶಿವಸ್ವಾಮಿಯವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರದ ಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಕ್ಸ್ ಖಾತೆಯಲ್ಲಿ ಟೀಕೆ ವ್ಯಕ್ತಪಡಿಸಿದ್ದಾರೆ. “ಅಮುಲ್, ನಂದಿನಿಯನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದ ಇದೇ ಕಾಂಗ್ರೆಸ್ ಈಗ ಅಧಿಕಾರಕ್ಕೆ ಬಂದಿದೆ. ‘ನಂದಿನಿ’ಯನ್ನು ಒಳಗಿನಿಂದ ನಾಶಪಡಿಸುತ್ತಿದೆ.
ನಂದಿನಿಯ ಯಶಸ್ಸಿನ ಹಿಂದಿನ ಶಕ್ತಿಯಾಗಿದ್ದ ಕೆಎಂಎಫ್ ಎಂಡಿ ಎಂಕೆ ಜಗದೀಶ್, ಇಡ್ಲಿ/ದೋಸೆ ಹಿಟ್ಟಿನಂತಹ ನವೀನ ಉತ್ಪನ್ನಗಳ ಬಿಡುಗಡೆಗೆ ಮುಂಚಿತವಾಗಿ ಹಠಾತ್ ವರ್ಗಾವಣೆಯಾಗಿದ್ದಾರೆ. ಅವರ ನಾಯಕತ್ವದಲ್ಲಿ ನಂದಿನಿ ದೆಹಲಿ, ದುಬೈ ಮತ್ತು ತಿರುಪತಿಯೊಂದಿಗೆ ಸಂಬಂಧವನ್ನು ಪುನರುಜ್ಜೀವನಗೊಳಿಸುವಾಗ ಐ.ಎಸ್.ಎಲ್, ಪ್ರೊ ಕಬಡ್ಡಿ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ತಂಡಗಳನ್ನು ಪ್ರಾಯೋಜಿಸುವ ಮೂಲಕ ಹೊಸ ಎತ್ತರಕ್ಕೆ KMFಅನ್ನು ಏರಿಸಿದ್ದರು.
ಇದೀಗ ಕೇರಳದ ಲಾಬಿಗೆ ಕೈಜೋಡಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಖಾಸಗಿ ಬ್ರಾಂಡ್‌ಗಳನ್ನು ರಕ್ಷಿಸಲು ನಂದಿನಿಯನ್ನು ಹಾಳು ಮಾಡಿದ್ದಾರೆ. ಸಮರ್ಪಿತ ಅಧಿಕಾರಿಯೊಬ್ಬರು ತಮ್ಮ ಕೆಲಸವನ್ನು ಚೆನ್ನಾಗಿ ಮಾಡಿದ್ದಕ್ಕಾಗಿ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಈ ಸರ್ಕಾರದಲ್ಲಿ ಸ್ವೀಕಾರಾರ್ಹವಲ್ಲ! ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ? ಕರ್ನಾಟಕದ ಜನತೆ ಉತ್ತರ ಕೇಳುತ್ತಾರೆ” ಎಂದು ವಿಜಯೇಂದ್ರ ಪೋಸ್ಟ್ ಹಾಕಿದ್ದಾರೆ.
Click