ಕರಾವಳಿ

ಮೊರಾರ್ಜಿ ದೇಸಾಯಿ ಶಾಲೆ ಪ್ರವೇಶ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

347
Spread the love

ಸುಳ್ಯ: ಗುತ್ತಿಗಾರು, ನಾಲ್ಕೂರ್, ದೇವಚಳ್ಳ, ಮಡಪ್ಪಾಡಿ, ಹರಿಹರ, ಬಾಳುಗೋಡು, ಕೊಲ್ಲಮೊಗ್ರ, ಕಲ್ಮಕಾರು, ನೆ. ಕೆಮ್ರಾಜೆ. ಗ್ರಾಮ ವ್ಯಾಪ್ತಿಯ ಮೊರಾರ್ಜಿ ಶಾಲಾ ಪ್ರವೇಶ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ಸಿಹಿ ಸುದ್ದಿ ನೀಡಿದೆ.

ವಿದ್ಯಾರ್ಥಿಗಳು ಅರ್ಜಿ ಫಾರಂ ತರಲು, ಮತ್ತು ವಾಪಾಸ್ ಅರ್ಜಿ ನೀಡಲು ಪಂಜಕ್ಕೆ ತೆರಳಬೇಕಾಗುತ್ತದೆ. ತುಂಬಾ ದೂರ ಪ್ರಯಾಣಿಸಬೇಕಾಗುತ್ತದೆ. ಜತೆಗೆ ಹೆಚ್ಚಿನವರಿಗೆ ಅರ್ಜಿ ಭರ್ತಿ ಮಾಡುವುದು ಕಷ್ಟದ ವಿಚಾರವಾಗಿದೆ. ಹೀಗಿರುವಾಗ ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಅನ್ನುವ ಕಾರಣಕ್ಕೆ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ಮಕ್ಕಳಿಗೆ ಬೇಕಾಗುವ ಈ ಕೆಲಸವನ್ನು ಉಚಿತವಾಗಿ ಮಾಡಿಕೊಡಲಿದೆ. ಅರ್ಜಿ ಫಾರಂ ಅನ್ನು ಪಂಜಕ್ಕೆ ತಲುಪಿಸುವ ವ್ಯವಸ್ಥೆ ಕೂಡ ಉಚಿತವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ 9480199711 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು. ಮೊರಾರ್ಜಿ ಶಾಲಾ, ಮತ್ತು ನವೋದಯ ಪ್ರವೇಶ ಪರೀಕ್ಷೆಗೆ ಕೋಚಿಂಗ್ ತರಬೇತಿಗಳನ್ನು ಶ್ರೀ ದುರ್ಗಾ ಕಂಪ್ಯೂಟರ್ಸ್ ಗುತ್ತಿಗಾರು ಇಲ್ಲಿ ನೀಡಲಾಗುತ್ತಿದೆ. ಅರ್ಜಿ ಫಾರಂಗಳೂ ಕೂಡ ದೊರೆಯುವ ವ್ಯವಸ್ಥೆ ಮಾಡಲಾಗಿದೆ. ಪ್ರವೇಶ ಪರೀಕ್ಷೆಗೆ ತರಬೇತಿ ಕೂಡ ಸಂಸ್ಥೆ ನೀಡಲಿದೆ. ಹೆಚ್ಚಿನ ಮಾಹಿತಿಗಾಗಿ 8073117026 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ.

See also  ಕಡಬ:ಬಲ್ಯ ದೇವಾಲಯದಿಂದ ಚಿನ್ನ,ಬೆಳ್ಳಿಯ ಆಭರಣ ದೋಚಿದ ಕಳ್ಳರು..!
  Ad Widget   Ad Widget   Ad Widget   Ad Widget   Ad Widget   Ad Widget