ಸಂಪಾಜೆ: ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಪಾಜೆ ಅರಣ್ಯ ತಪಾಸಣಾ ಕೇಂದ್ರ ಗೇಟ್ ಬಳಿ ನಿನ್ನೆ ರಾತ್ರಿ 12.00 ಗಂಟೆಗೆ ಅಕ್ರಮ ಗೋ ಸಾಗಾಟ ವಾಹನವನ್ನು ತಡೆ ಹಿಡಿಯಲಾಯಿತು.
KA 05 AA 8605 ನಂಬರ್ ನ ಲಾರಿಯಲ್ಲಿ ಸುಮಾರು 30 ಕ್ಕೂ ಗೋವುಗಳನ್ನು ತುಂಬಿಕೊಂಡು ಮಡಿಕೇರಿ ಮಾರ್ಗದಿಂದ ಸುಳ್ಯ ಕಡೆಗೆ ತೆರಳಲು ಪ್ರಯತ್ನಿಸಿದ್ದು ಸಂಪಾಜೆ ಗೇಟ್ ಬಳಿ ತಪಾಸಣೆ ವೇಳೆಗೆ ಅಕ್ರಮ ಗೋ ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ. ಆರಕ್ಷಕ ಠಾಣಾ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ತಪಾಸಣೆ ಮಾಡುವ ಸಂದರ್ಭದಲ್ಲಿ ಲಾರಿಯಲ್ಲಿದ್ದ ಗೋಕಳ್ಳರು ಪರಾರಿಯಾಗಿರುತ್ತಾರೆ. ಸಂಪಾಜೆ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.