ಕರಾವಳಿಸುಳ್ಯ

ಸುಳ್ಯ: ಜ.26 ರಂದು ನಡೆಯಲಿದೆ ಅದ್ದೂರಿ ‘ಅಟೋಚಾಲಕರ ಮಹಾಸಂಗಮ’,ಜೂನಿಯ‌ರ್ ಕಾಲೇಜು ಕ್ರೀಡಾಂಗಣದಲ್ಲಿ ಕಾರ್ಯಕ್ರಮ ವೈಭವ

ನ್ಯೂಸ್ ನಾಟೌಟ್‌: ಸುಳ್ಯ ತಾಲೂಕು ಅಟೊ ರಿಕ್ಷಾ ಚಾಲಕರ ಸಂಘ ಸ್ಥಾಪನೆಯಾಗಿ 25 ವರ್ಷಗಳು ಪೂರೈಸಿವೆ. ಈ ಹಿನ್ನಲೆಯಲ್ಲಿ ಜ.26.ರಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿ, ಜೂನಿಯ‌ರ್ ಕಾಲೇಜು ಕ್ರೀಡಾಂಗಣದಲ್ಲಿ ಬೆಳ್ಳಿ ಹಬ್ಬ ಸಂಭ್ರಮ ಕಾರ್ಯಕ್ರಮವನ್ನು ಏರ್ಪಡಿಸಲು ತಯಾರಿ ನಡೆಸಿದೆ ಎಂದು ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ತಿಳಿಸಿದ್ದಾರೆ.

ಈ ಪ್ರಯುಕ್ತ ತಾಲೂಕಿನ ಎಲ್ಲಾ ರಿಕ್ಷಾ ಚಾಲಕರು ಹಾಗೂ ಈ ಹಿಂದೆ ರಿಕ್ಷಾ ಚಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಚಾಲಕರುಗಳ ಮಹಾ ಸಂಗಮ ನಡೆಯಲಿದೆ ಎಂದು ಅವರು ಹೇಳಿದರು. ಈ ಸಂಘ ಸರಿಸುಮಾರು 1999 ರಲ್ಲಿ ಗೋಪಾಲ ಕೃಷ್ಣ ಭಟ್‌ ಅಧ್ಯಕ್ಷತೆಯಲ್ಲಿ ಸ್ಥಾಪನೆಗೊಂಡಿತು.ಬಳಿಕ ಸಂಘವು ವಿಜಯಕುಮಾ‌ರ್ ಉಬರಡ್ಕ ಅಧ್ಯಕ್ಷತೆಯಲ್ಲಿ ಸಾಗಿ ಬಂದು ಕಳೆದ 9 ವರ್ಷಗಳಿಂದ ರಾಧಾಕೃಷ್ಣ ಬೈತಡ್ಕರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಾ ಬಂದಿದ್ದು, ಈ ವರ್ಷ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.

ಜ.26 ರಂದು ಸುಳ್ಯದಲ್ಲಿ ಬೆಳ್ಳಿ ಸಂಭ್ರಮದ ಬೃಹತ್ ಕಾರ್ಯಕ್ರಮ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ಅಧ್ಯಕ್ಷತೆಯಲ್ಲಿ ನಡೆಯಲಿದ್ದು,ಸಭಾಕಾರ್ಯಕ್ರಮವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಲಿದ್ದಾರೆ.ಈಗಾಗಲೇ ರಚಿಸಿಕೊಂಡಿರುವ ತಾಲೂಕಿನ ಸುಬ್ರಹ್ಮಣ್ಯ, ಹರಿಹರ, ಗುತ್ತಿಗಾರು, ಪಂಜ ಕುಕ್ಕುಜಡ್ಕ ಜಾಲ್ಸೂರು, ಪೆರಾಜೆ, ಕಲ್ಲುಗುಂಡಿ ಘಟಕಗಳ ಸದಸ್ಯರ ಸಹಕಾರದೊಂದಿಗೆ ಈ ಕಾರ್ಯಕ್ರಮ ಅವಿಸ್ಮರಣೀಯವಾಗಿರಲಿದೆ ಎಂದವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್.ಅಂಗಾರ,ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ| ಕೆ .ವಿ ಚಿದಾನಂದ, ಮಣಿಪಾಲ ಮದ್ದೂ‌ರ್ ಯೂನಿಯನ್ ಜನರಲ್ ಸೆಕ್ರೆಟರಿ ಪುರುಷೋತ್ತಮ ಕೆ. ಎನ್, ಸುಳ್ಯ ನ.ಪಂ ಸದಸ್ಯೆ ಕಿಶೋರಿ ಶೇಟ್, ಭಾರತೀಯ ಮದ್ದೂರ್ ಸಂಘದ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಯು, ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘದ ಸ್ಥಾಪಕಾಧ್ಯಕ್ಷ ಗೋಪಾಲಕೃಷ್ಣ ಭಟ್, ಸುಳ್ಯ ವೃತ್ತ ನಿರೀಕ್ಷಕ ಮೋಹನ್ ಕೊಠಾರಿ, ರಿಕ್ಷಾ ಚಾಲಕರ ಸಂಘದ ಕಾನೂನು ಸಲಹೆಗಾರ ಭಾಸ್ಕರ್ ರಾವ್, ರಿಕ್ಷಾ ಚಾಲಕರ ಸಂಘದ ಮಾಜಿ ಅಧ್ಯಕ್ಷ ವಿಜಯಕುಮಾ‌ರ್ ಉಬರಡ್ಕ ಭಾಗವಹಿಸಲಿದ್ದಾರೆ.ಭ್ರಾಮರಿ ನಾಟ್ಯಾಲಯ ಕುಕ್ಕುಜಡ್ಕ , ವಿದೂಷಿ ಜಯಶ್ರೀ ಕುಳ್ಳಂಪಾಡಿ ಮತ್ತು ಸಾಂಸ್ಕೃತಿಕ ವೈಭವ, ಯೋಗ, ಹಾಸ್ಯ, ಡ್ಯಾನ್ಸ್ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಅಟೋ ರಿಕ್ಷಾ ಚಾಲಕರ ಸಂಘದ ಸ್ಥಾಪಕ ಅಧ್ಯಕ್ಷ ಗೋಪಾಲಕೃಷ್ಣ ಭಟ್, ಅಟೋ ರಿಕ್ಷಾ ಚಾಲಕರ ಸಂಘದ ಮಾಜಿ ಅಧ್ಯಕ್ಷ ವಿಜಯಕುಮಾರ್ ಉಬರಡ್ಕ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮರ್ಕಂಜ,ಉಪಕಾರ್ಯದರ್ಶಿ ಸುರೇಂದ್ರ ಕಾಮತ್, ಕೋಶಾಧಿಕಾರಿ ನಿತ್ಯಾನಂದ, , ಮನೋಹರ್ ಚೊಕ್ಕಾಡಿ, ಮೋಹನ್ ಚೊಕ್ಕಾಡಿ,ಸಂಗಪ್ಪ, ಸುಧಾಕರ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮಕ್ಕೆ ಆಗಮಿಸಿ ಉಪಸ್ಥಿತರಿದ್ದು,ಯಶಸ್ವಿಯಾಗಿ ನಡೆಸಿಕೊಡಬೇಕೆಂದು ದಿನೇಶ್ ಶಿರಾಡಿ ಸುಬ್ರಮಣ್ಯ ಘಟಕ , ಮನೋಹರ್ ಕಾರ್ಜ ಪಂಜ ಘಟಕ, ದಯಾನಂದ ಹರಿಹರ ಘಟಕ, ವಿಶ್ವನಾಥ್ ಅಚ್ರಪ್ಪಾಡಿ ಗುತ್ತಿಗಾರ್ ಘಟಕ, ಸತೀಶ ಪಿಲಿಕಜೆ ಕುಕ್ಕುಜಡ್ಕ ಘಟಕ, ಗೋಪಾಲ ಅಡ್ಕಾರ್ ಜಾಲ್ಸೂರು ಘಟಕ, ಚಂದ್ರ ಶೇಖರ್ ಕೊಡ್ಯಾ ಗುಂಡಿ ಪೆರಾಜೆ ಘಟಕ, ಕೇಶವ ಬಂಗ್ಲೆ ಗುಡ್ಡೆ ಕಲ್ಲುಗುಂಡಿ ಘಟಕ ಆಹ್ವಾನಿಸಿದ್ದಾರೆ.

Related posts

ಅಜ್ಜಾವರ : ಚೈತನ್ಯ ಸೇವಾಶ್ರಮ ದೇವರಕಳಿಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಬೆಳ್ತಂಗಡಿ:ಪ್ರಾಣದ ಹಂಗು ತೊರೆದು ರೋಗಿಯ ಸೇವೆಗಿಳಿದ ಆ್ಯಂಬುಲೆನ್ಸ್ ಚಾಲಕ ನಿಧನ ಬೆನ್ನಲ್ಲೇ ಮತ್ತೊಂದು ಆಘಾತ, ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೂ ಕೊನೆಯುಸಿರು..!

ಶೋಭಕ್ಕನ ಹಾವು ಹಿಡಿದ ಸಾಹಸಮಯ ವಿಡಿಯೋ ವೈರಲ್, ಯಾರಿವರು ಶೋಭಕ್ಕ..? ಕೊನೆಗೂ ಸಿಕ್ಕಿತು ಉತ್ತರ