ಕರಾವಳಿ

ಅಜ್ಜಾವರ : ಚೈತನ್ಯ ಸೇವಾಶ್ರಮ ದೇವರಕಳಿಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

951

ಸುಳ್ಯ: ಚೈತನ್ಯ ಸೇವಾಶ್ರಮ ದೇವರಕಳಿಯ ಅಜ್ಜಾವರ ಇಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಮುಂಜಾನೆ ಗಣಪತಿ ಪೂಜೆಯನ್ನು ಮಾಡಿ ಬಳಿಕ ಕಲಶವನ್ನಿಟ್ಟು ಶ್ರೀಕೃಷ್ಣನ ಪೂಜೆಯನ್ನು ಮಾಡಲಾಯಿತು .ಆಶ್ರಮದ ಟ್ರಸ್ಟಿಯಾದ ಪ್ರಣವಿ ಎಂ ರವರು ಶ್ರೀಕೃಷ್ಣನನ್ನು ಕಲಶದಲ್ಲಿ ಆಹ್ವಾನಿಸಿ ವೇದಮಂತ್ರದೊಂದಿಗೆ ಶೋಡಷೋಪಚಾರ ಪೂಜೆ ಮಾಡಿದರು. ಈ ಸರಳ ಸಮಾರಂಭದಲ್ಲಿ ಶ್ರೀ ಸ್ವಾಮೀ ಯೋಗೇಶ್ವರಾನಂದ ಸರಸ್ವತಿ ಯವರು ಮಕ್ಕಳಿಗೆ ಶ್ರೀಕೃಷ್ಣನ ಅಷ್ಟಾಕ್ಷರಿ ಮಂತ್ರ ಬೋದಿಸಿ ಅರ್ಚನೆ ಮಾಡಿಸಿದರು. ಡಾ ಸಾಯಿಗೀತಾ ಜ್ಞಾನೇಶ್ ಭಜನಾಸತ್ಸಂಗ ನೆರವೇರಿಸಿದರು .ಮಂಗಳಾರತಿಯ ನಂತರ ಸಹ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

See also  ನೀಟ್ ಪರೀಕ್ಷೆ: ಪುತ್ತೂರಿನ ವಿದ್ಯಾರ್ಥಿನಿ ದೇಶಕ್ಕೆ ಎರಡನೇ ಸ್ಥಾನ
  Ad Widget   Ad Widget   Ad Widget   Ad Widget   Ad Widget   Ad Widget   Ad Widget