ನ್ಯೂಸ್ ನಾಟೌಟ್ : ನೆಲ್ಯಾಡಿ ಭಾಗದಲ್ಲಿ ವಾಹನ ಚಲಾಯಿಸಿಕೊಂಡು ಸಂಚಾರ ಮಾಡುವುದೇ ತೀವ್ರ ಕಷ್ಟವೆನಿಸಿದೆ.ಒಂದೆಡೆ ರಸ್ತೆ ಕಾಮಗಾರಿಯೂ ನಡೆಯುತ್ತಿದೆ.ಇನ್ನೊಂದೆಡೆ ಅಪಘಾತ ಪ್ರಕರಣಗಳು ಕೂಡ ಜಾಸ್ತಿಯಾಗುತ್ತಿದೆ.
ಇದೀಗ ರಸ್ತೆ ಕಾಮಗಾರಿಗಾಗಿ ಹೆದ್ದಾರಿ ಬದಿ ಹಾಕಿದ್ದ ಜಲ್ಲಿ ರಾಶಿಯ ಮೇಲೆಯೇ ಕಾರು ಚಲಾಯಿಸಿ ಚಾಲಕ ಗಾಯಗೊಂಡ ಘಟನೆ ವರದಿಯಾಗಿದೆ. ನೆಲ್ಯಾಡಿ ಸಮೀಪದ ಉದನೆಯಲ್ಲಿ ಈ ಘಟನೆ ನಡೆದಿದ್ದು, ಗಾಯಾಳು ಚಾಲಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುತ್ತಿದ್ದಾಗ ಜಲ್ಲಿ ರಾಶಿ ಮೇಲೆಯೇ ಕಾರು ಚಲಿಸಿದ ಪರಿಣಾಮ ಕಾರು ಚಾಲಕ ಹಾಗೂ ನೆಲ್ಯಾಡಿಯ ಉದ್ಯಮಿ ಶಿಬು ವರ್ಗೀಸ್ರವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.