ಕರಾವಳಿ

ಅಂತಾರಾಷ್ಟ್ರೀಯ ನ್ಯತ್ಯ ಸ್ಪರ್ಧೆ: ತೊಡಿಕಾನದ ಧನ್ಯ ಮಯ್ಯ ಪ್ರಥಮ

ಸುಳ್ಯ :  ಮಹಾರಾಷ್ಟ್ರದ  ” ಅಖಿಲ  ನಟರಾಜಂ  ಅಂತರ್ ಸಂಸ್ಕೃತಿ ಸಂಘ – ನಾಗಪುರ ” (ಪ್ಯಾರಿಸ್ ನ ಅಂತಾರಾಷ್ಟ್ರೀಯ ನೃತ್ಯ ಮಂಡಳಿಯ ಸದಸ್ಯ) ವತಿಯಿಂದ  ನಡೆದ  ವರ್ಲ್ಡ್  ಡ್ಯಾನ್ಸ್ರಸ್  – ಅಂತರರಾಷ್ಟ್ರೀಯ ನೃತ್ಯ ಸ್ಪರ್ಧೆ ( world dancers – International online  dance  contest  ) -2021 ಸೀಸನ್ -4 ನಲ್ಲಿ ಭರತನಾಟ್ಯಂ   ಓಪನ್ ಕೆಟಗರಿಯಲ್ಲಿ ತೊಡಿಕಾನ ಗ್ರಾಮದ ಧನ್ಯ ಮಯ್ಯ ಪ್ರಥಮ  ಸ್ಥಾನ ಪಡೆದಿರುತ್ತಾರೆ. ಇವರು ಭರತನಾಟ್ಯ ದ ಸೀನಿಯರ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವರು. ಹಲವಾರು ಕಡೆ ನೃತ್ಯ ಪ್ರದರ್ಶನ ನೀಡಿದ್ದು  ಮಂತ್ರಾಲಯದ ರಾಘವೇಂದ್ರ ಮಠದಲ್ಲೂ   ನೃತ್ಯ ಸೇವೆ  ಅರ್ಪಿಸಿದ್ದಾರೆ.  ಪ್ರಸ್ತುತ ವಿದ್ಯಾರಶ್ಮಿ ಪದವಿಪೂರ್ವ ಕಾಲೇಜಿನಲ್ಲಿ ರಸಾಯನಶಾಸ್ತ್ರ ಉಪನ್ಯಾಸಕರಾಗಿ ಕಾಯ೯ ನಿರ್ವಹಿಸುತ್ತಿದ್ದಾರೆ. ಇವರು ತೊಡಿಕಾನದ  ಉದಯ ಮಯ್ಯ ಮತ್ತು ಶಶಿಕಲಾ ರವರ ಪುತ್ರಿ.

Related posts

ರಾಜ್ಯಕ್ಕೆ ಮೋದಿಯ ಭೇಟಿ ಫೋಟೋ ಶೂಟ್‌ಗಾಗಿ..! ಕೆಪಿಸಿಸಿ ವಕ್ತಾರ ಟಿಎಂ ಶಹೀದ್ ವ್ಯಂಗ್ಯ

ಸುಳ್ಯ ಕಾಯರ್ತೋಡಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ,ಜಾತ್ರೋತ್ಸವ ಸಂಭ್ರಮ:ಮೆರವಣಿಗೆ-ಹಸಿರುವಾಣಿ ಸಮರ್ಪಣೆ

ಸುಳ್ಯ ಪೊಲೀಸ್ ಠಾಣೆ ಮುಂಭಾಗದಲ್ಲಿ ಹಿಂದೂ ಕಾರ್ಯಕರ್ತರ ಬಂಧನ ವಿರೋಧಿಸಿ ಪ್ರತಿಭಟನೆ, ಕಲ್ಕುಡ ದೈವಸ್ಥಾನದಲ್ಲಿ ನ್ಯಾಯಕ್ಕಾಗಿ ಪ್ರಾರ್ಥನೆ