ನ್ಯೂಸ್ ನಾಟೌಟ್ :ಕಾರು ಹಾಗೂ ಕೆಎಸ್‍ಆರ್‌ಟಿಸಿ ಬಸ್ ನಡುವೆ ಡಿಕ್ಕಿ ಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಶಹಪುರ ತಾಲೂಕಿನ ಮದ್ದರಕಿ ಬಳಿಯಲ್ಲಿ ನಡೆದಿದೆ. ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ದುರಂತ ಸಂಭವಿಸಿದ್ದು, ಭೀಕರತೆಯು ಸಂಪಾಜೆಯಲ್ಲಾದ ಬಸ್-ಕಾರು ಅಪಘಾತದಲ್ಲಿ ಆರುಮಂದಿ ದುರಂತ ಅಂತ್ಯ ಕಂಡ ವರದಿಯನ್ನೇ ಹೋಲುತ್ತಿದೆ.
ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು ,ಬಸ್ಸಿನಲ್ಲಿದ್ದ ಐದಾರು ಪ್ರಯಾಣಿಕರಿಗೂ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.ಬಳಿಕ ಚಾಲಕ ಬಸ್ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ರಂಗಂಪೇಟೆ ನಿವಾಸಿಗಳಾದ ಕೃಷಿ ಇಲಾಖೆಯ ಅಧಿಕಾರಿ ನಾಗರಾಜ ಸಜ್ಜನ್ (59), ಪತ್ನಿ ಮಹಾದೇವಿ (50) ಹಾಗೂ ಸಂಬಂಧಿ ರೇಣುಕಾ (45)ಮೃತಪಟ್ಟವರೆಂದು ತಿಳಿದು ಬಂದಿದೆ.ಕಲಬುರಗಿಯಲ್ಲಿ ಸಂಬಂಧಿಕರ ಮದುವೆಗೆ ಹೋಗಿದ್ದು, ಮದುವೆ ಮುಗಿಸಿ ವಾಪಸ್ ಬರುವಾಗ ಈ ಅವಘಡ ಸಂಭವಿಸಿದ್ದು,ಸ್ಥಳಕ್ಕೆ ಭೀಮರಾಯನ ಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಂಪಾಜೆಯಲ್ಲಿ ಆರು ಮಂದಿಯನ್ನು ಬಲಿ ಪಡೆದ ಅಪಘಾತದ ಫೋಟೋ