ಸುಳ್ಯ

ಸುಳ್ಯ: ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಯುವದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ, ಹಲವು ಗಣ್ಯರು ಭಾಗಿ

ನ್ಯೂಸ್ ನಾಟೌಟ್: ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಯುವ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶೆ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯೆ ಕುಮಾರಿ ಅರ್ಪಿತಾ ಪಾಲ್ಗೊಂಡು ಮಾತನಾಡಿ, ‘ಸ್ವಾಮಿ ವಿವೇಕಾನಂದರ ಬೋಧನೆ, ಚಿಂತನೆ ಯುವ ಜನತೆಗೆ ಪ್ರೇರಣೆ. ಒಂದು ಕಲ್ಲನ್ನು ಸುಂದರ ಮೂರ್ತಿಯನ್ನಾಗಿ ಮಾಡಲು ಶಿಲ್ಪಿ ಯಾವ ರೀತಿ ಪ್ರಯತ್ನ ಪಡುತ್ತಾರೋ ಅದೇ ರೀತಿ ನಮ್ಮ ಬದುಕು ಉತ್ತಮವಾಗಲು ಒಳ್ಳೆಯ ಆಲೋಚನೆ ಮತ್ತು ಮಾರ್ಗಗಳು ಮುಖ್ಯ’ ಎಂದು ತಿಳಿಸಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಚಂದ್ರಶೇಖರ ಉದ್ದಂತಡ್ಕ ಮಾತನಾಡಿ, ‘ಪರಿಪೂರ್ಣ ಜೀವನಕ್ಕೆ ಕನ್ನಡಿ, ಜ್ಞಾನ, ಸತ್ಯ, ಪ್ರೇಮ ಮತ್ತು ವಿಶ್ವಾಸ ಎಂಬ ಐದು ಸತ್ಯಗಳನ್ನು ತಿಳಿದುಕೊಳ್ಳಬೇಕು. ಜೀವನದ ಮೌಲ್ಯಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕು’ ಎಂದು ಹೇಳಿದರು. ಇದೇ ವೇಳೆ ಮಾತನಾಡಿದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ್ ದಾಮ್ಲೆಯವರು ‘ನಮ್ಮೊಳಗಿನ ಶಕ್ತಿಯನ್ನು ವೃದ್ಧಿಸಲು ಬೇಕಾದ ಸಾಧನ ಜ್ಞಾನ. ಸಮಾಜದಲ್ಲಿ ನಾವು ಸಹಾಯ ಪಡೆಯುವವರಾಗದೆ ಸಮಾಜಕ್ಕೆ ಕೊಡುಗೆಯನ್ನು ಕೊಡುವವರಾಗಬೇಕು’ ಎಂದರು. ಸುಳ್ಯ ವಕೀಲರ ಸಂಘದ ಅಧ್ಯಕ್ಷ ನಾರಾಯಣ.ಕೆ, ಸುಳ್ಯ ಸಹಾಯಕ ಸರ್ಕಾರಿ ಅಭಿಯೋಜಕ ಆರೋನ್ ಡಿಸೋಜಾ, ಶಾಲಾ ಮುಖ್ಯೋಪಾಧ್ಯಾಯನಿ ಜಯಲಕ್ಷ್ಮಿ ದಾಮ್ಲೆ, ಶಾಲಾ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜಯಲಕ್ಷ್ಮಿ ದಾಮ್ಲೆ ಸ್ವಾಗತಿಸಿದರು. ಪ್ರದೀಪ್ ಬಿ ಬೊಳ್ಳೂರು ವಂದಿಸಿದರೆ ಶಿಕ್ಷಕಿ ಸವಿತಾ ಎಂ. ಕಾರ್ಯಕ್ರಮ ನಿರೂಪಿಸಿದರು.

Related posts

ಪೊಲೀಸ್ ದೌರ್ಜನ್ಯ ಪ್ರಕರಣ: ಪುತ್ತೂರು ಡಿವೈಎಸ್ಪಿ, ಸಂಪ್ಯ ಎಸ್ಐ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್, ಅರುಣ್ ಪುತ್ತಿಲ ಬರದಿರುತ್ತಿದ್ದರೆ ಹೊಡೆದು ಸಾಯಿಸ್ತಿದ್ದರು!

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ,ದಿ.ಡಾ.ಕೆ.ವಿ.ಜಿ ಜನ್ಮದಿನಾಚರಣೆ ಪ್ರಯುಕ್ತ ಪುಷ್ಪ ನಮನ ಕಾರ್ಯಕ್ರಮ

ಸುಳ್ಯ: ಬಿಜೆಪಿ ಕಚೇರಿಯಲ್ಲಿ ಪೂರ್ವ ಭಾವಿ ಕಸರತ್ತು..! ಮೂರು ದಿನ ‘ಗ್ರಾಮ ಚಲೊ’