ಕ್ರೈಂದೇಶ-ಪ್ರಪಂಚ

ರೀಲ್ಸ್‌ ಮಾಡಿ ಪ್ರಾಣ ಕಳೆದುಕೊಂಡ ಯುವಕ!

ನ್ಯೂಸ್‌ ನಾಟೌಟ್‌:  ಇತ್ತೀಚೆಗೆ ರೀಲ್ಸ್‌ ಮಾಡಿ ಚೇಷ್ಟೆ ಮಾಡುವ ಹವ್ಯಾಸ ಜೋರಾಗಿದೆ. ಇದೇ ರೀಲ್ಸ್‌ ಹುಚ್ಚಿಗೆ ಬಲಿಯಾಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಮೃತ ಯುವಕನನ್ನು ಹೈದರಾಬಾದ್​ನ ಸನತ್ ನಗರದ ನಿವಾಸಿ ಸರ್ಪರಾಜ್ (16) ಎಂದು ಗುರುತಿಸಲಾಗಿದೆ. ಸ್ನೇಹಿತರೊಂದಿಗೆ ರೈಲ್ವೆ ಹಳಿಯ ಪಕ್ಕದಲ್ಲಿ ನಿಂತು ರೀಲ್ಸ್ ರೆಕಾರ್ಡ್ ಮಾಡುತ್ತಿದ್ದ. ಈ ಸಂದರ್ಭ ಹಿಂದಿನಿಂದ ಬಂದ ಟ್ರೈನ್ ಯುವಕನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸರ್ಪರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಜೀವನದಲ್ಲಿ ಸಾಕಷ್ಟು ಕನಸುಗಳೊಂದಿಗೆ ಬಾಳಿ ಬದುಕಬೇಕಾದ ಯುವಕ ರೀಲ್ಸ್‌ ಹುಚ್ಚಿನಿಂದ ಪ್ರಾಣ ಕಳೆದುಕೊಂಡಿದ್ದಾನೆ. ಈ ಘಟನೆಯನ್ನು ಆತನ ಸ್ನೇಹಿತನ ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.

Related posts

ಕಾಸರಗೋಡು : ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದೇಕೆ ಆ ಗುಂಪು? ಜಿಲ್ಲಾ ಪಂಚಾಯತ್ ಸದಸ್ಯನ ಬಂಧನ

ಬಿಎಸ್ ವೈ ಸುತ್ತ ಐಟಿ ಬಲೆ: ವಿಜಯೇಂದ್ರ ಆಪ್ತನ ಮನೆಯಿಂದ ದಾಖಲೆ ವಶ

ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹಳಿ ದಾಟುತ್ತಿದ್ದ ವಿದ್ಯಾರ್ಥಿನಿಗೆ ರೈಲು ಡಿಕ್ಕಿಯಾಗಿ ಸಾವು