ದೇಶ-ಪ್ರಪಂಚ

ಪಾಕಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಪೋಟ:17 ಮಂದಿ ಸಾವು,95 ಮಂದಿಗೆ ಗಾಯ

ನ್ಯೂಸ್ ನಾಟೌಟ್ : ಪಾಕಿಸ್ತಾನದ ವಾಯುವ್ಯ ನಗರವಾದ ಪೇಶಾವರದ ಮಸೀದಿಯೊಂದರಲ್ಲಿ  ಇಂದು ಮಧ್ಯಾಹ್ನ ಪ್ರಾರ್ಥನೆಯ ವೇಳೆ ಬಾಂಬ್‌ ಸ್ಫೋಟ ಸಂಭವಿಸಿದೆ. ದುರ್ಘಟನೆಯಲ್ಲಿ 17 ಜನ ಸಾವಿಗೀಡಾಗಿದ್ದು, 95ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಟ್ಟಡದ ಒಂದು ಭಾಗ ಕುಸಿತ:

ಪೊಲೀಸ್ ಲೈನ್ಸ್ ಪ್ರದೇಶದ ಬಳಿ ಪ್ರಾರ್ಥನೆ ವೇಳೆ ಆತ್ಮಹತ್ಯಾ ದಾಳಿ ನಡೆದಿದ್ದು, ಸ್ಫೋಟದಲ್ಲಿ ಪೊಲೀಸರು, ಆರೋಗ್ಯ ಅಧಿಕಾರಿಗಳು, ಭದ್ರತಾ ಸಿಬ್ಬಂದಿಗಳಿಗೆ ಹೆಚ್ಚು ಹಾನಿಯಾಗಿದೆ ಎಂದು ತಿಳಿದುಬಂದಿದೆ.ಸ್ಪೋಟದ ಭೀಕರತೆ ಎಷ್ಟಿತ್ತಿಂದರೆ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿದ್ದು, ಅದರ ಅಡಿಯಲ್ಲಿ ಹಲವಾರು ಮಂದಿ ಸಿಲುಕಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

17 ಮಂದಿ ಸಾವು:

ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಸ್ಫೋಟದಲ್ಲಿ 17 ಜನರು ಸಾವಿಗೀಡಾಗಿದ್ದಾರೆ ಮತ್ತು 95 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹೆಚ್ಚಾಗಿ ಪೊಲೀಸರಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.ಗಾಯಾಳುಗಳನ್ನು ಪೇಶಾವರದ ಲೇಡಿ ರೀಡಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದ್ದು, ೧೭ ಮಂದಿ ಗಾಯಗೊಂಡವರಲ್ಲಿ 13 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.ಅಲ್ಲಿನ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಸಂತ್ರಸ್ತರಿಗಾಗಿ ರಕ್ತದಾನ ಮಾಡುವಂತೆ ಆಸ್ಪತ್ರೆ ನಾಗರಿಕರಲ್ಲಿ ಮನವಿ ಮಾಡಿದೆ.

Related posts

30 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದ ಕೂಸು, ಆರಾಮವಾಗಿ ಎದ್ದು ಅತ್ತಿಂದಿತ್ತ ಓಡಾಡಿದ್ದು ಹೇಗೆ?ವಿಡಿಯೋ ವೈರಲ್

ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಹತ್ಯೆಯಾದದ್ದೇಕೆ..? ಅಶ್ಲೀಲ ವಿಡಿಯೋ ಹರಿಬಿಡುತ್ತಿದ್ದ ಈಕೆ ಯಾರು..?

Ram Mandir: ಇನ್ನು ಮುಂದೆ ಅಯೋಧ್ಯೆಯ ರಾಮ ಮಂದಿರದ ಆವರಣದಲ್ಲಿ ಮೊಬೈಲ್​ ಬಳಕೆ ನಿಷೇಧ..! ವಿಐಪಿ ಮತ್ತು ವಿವಿಐಪಿಗಳು ಕೂಡ ಮೊಬೈಲ್ ಫೋನ್ ಕೊಂಡೊಯ್ಯುವಂತಿಲ್ಲ..!