ದಕ್ಷಿಣ ಕನ್ನಡಸುಳ್ಯ

ಸುಳ್ಯ: ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನ

ನ್ಯೂಸ್ ನಾಟೌಟ್: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಸಮೃದ್ಧ ಪರಿಸರವನ್ನು ಸುಂದರ ನಾಳೆಗಳಿಗಾಗಿ ರಕ್ಷಿಸಿ ಬೆಳೆಸುವ ಹೊಣೆಗಾರಿಗೆ ನಮ್ಮೆಲ್ಲರ ಮೇಲಿದೆ ಎಂದು ಉಪನ್ಯಾಸಕಿ, ವಾಗ್ಮಿ ಬೇಬಿ ವಿದ್ಯಾ ಪಿ.ಬಿ. ಹೇಳಿದರು.

ಸುಳ್ಯ ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ಬುಧವಾರ (ಜೂನ್ 5) ವಿಶ್ವ ಪರಿಸರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಪ್ರಾಂಶುಪಾಲ ಪ್ರೊ. ಉದಯಕೃಷ್ಣ ಬಿ. ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್. ಘಟಕದ ಸಂಯೋಜನಾಧಿಕಾರಿ ಕಲಾವತಿ ಎಂ., ರೆಡ್‌ಕ್ರಾಸ್ ಘಟಕದ ಅಧಿಕಾರಿ ಅರ್ಚನಾ ಆರ್. ರೈ ಮತ್ತು ಕಾನೂನು ನೆರವು ಸಮಿತಿಯ ಸಂಯೋಜಕಿ ನಯನಾ ಪಿ.ಯು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಸಂಸ್ಥೆಯ ವಿದ್ಯಾರ್ಥಿ ಕ್ಷೇಮಾಧಿಕಾರಿ ಟೀನಾ ಎಚ್.ಎಸ್. ಹಾಗೂ ಗ್ರಂಥಾಧಿಕಾರಿ ವಸಂತ ಕುಮಾರ್ ಕಜ್ಜೋಡಿ, ಕಚೇರಿ ಅಧೀಕ್ಷಕ ಗೋಪಿನಾಥ್ ಕೆ. ಹಾಗೂ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಕಾಲೇಜು ವಠಾರದಲ್ಲಿ ಗಿಡ ನೆಡಲಾಯಿತು. ಗಿಡ ಹಂಚುವ ಮೂಲಕ ಕಾರ್ಯಕ್ರಮ ನಡೆಯಿತು.

Related posts

ಕಲ್ಲುಗುಂಡಿ : ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಪೂರ್ವ ತಯಾರಿ ಸಭೆ,ಆಮಂತ್ರಣ ಪತ್ರಿಕೆ ಬಿಡುಗಡೆ

ಮಾರಕ ಕ್ಯಾನ್ಸರ್ ರೋಗಕ್ಕೆ ತುತ್ತಾದ ಸುಳ್ಯದ ಆಟೋ ರಿಕ್ಷಾ ಚಾಲಕ..ಶಸ್ತ್ರಚಿಕಿತ್ಸೆಗೆ ಬೇಕಿದೆ 15 ಲಕ್ಷ ರೂ.

ವೃದ್ಧ ಅತ್ತೆಯನ್ನು ಮೆನೆಯೊಳಗೆ ಕೂಡಿ ಹಾಕಿ ನಾಪತ್ತೆಯಾದ ಕಟುಕ ಅಳಿಯ ಸುಳ್ಯದಲ್ಲೊಂದು ಅಮಾನವೀಯ ಘಟನೆ