ಜೀವನ ಶೈಲಿ/ಆರೋಗ್ಯದೇಶ-ಪ್ರಪಂಚದೇಶ-ವಿದೇಶಮಹಿಳೆ-ಆರೋಗ್ಯವೈರಲ್ ನ್ಯೂಸ್

ಅಂಗಾಂಗ ದಾನ ಮಾಡಿ ಆರು ಜನರ ಜೀವ ಉಳಿಸಿದ ಆದರ್ಶ ಮಹಿಳೆ..! ಆಕೆಯ ಹೃದಯ, ಯಕೃತ್ತು ಹಾಗೂ ಎರಡು ಕಿಡ್ನಿ ದಾನ..!

ನ್ಯೂಸ್ ನಾಟೌಟ್: ಸುಜಾತ ಎಂಬವರು (42) ಹಲವರಿಗೆ ಅಂಗಾಂಗ ದಾನ ಮಾಡುವ ಮೂಲಕ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಮನೆಯಲ್ಲಿ ತನ್ನ ಮಕ್ಕಳಿಗೆ ಅನ್ನ ಬಡಿಸುತ್ತಿರುವ ವೇಳೆ ಏಕಾಏಕಿ ಕುಸಿದು ಬಿದ್ದು ಬ್ರೈನ್‌ ಡೆಡ್‌ ಆಗಿದ್ದ ಸುಜಾತ ಹೃದಯ, ಯಕೃತ್ತು ಹಾಗೂ ಎರಡು ಕಿಡ್ನಿಗಳನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ. ಮೃತ ಸುಜಾತಾ ಅಂಗಾಂಗ ದಾನದಿಂದ ಆರು ಜೀವಗಳನ್ನು ಉಳಿಸಿದ್ದಾರೆ ಎನ್ನಲಾಗಿದೆ.

ಈ ಮಹಿಳೆ ಯಾದಾದ್ರಿ ಭುವನಗಿರಿ ಜಿಲ್ಲೆ ಆಲೇರು ಮಂಡಲದ ಬಹದ್ದೂರ್ ಪೇಟೆಯವರು ಎಂದು ವರದಿ ತಿಳಿಸಿದೆ. ಕುಟುಂಬ ಸದಸ್ಯರಿಗೆ ಅನ್ನ ಬಡಿಸುವಾಗ ಸುಜಾತಾ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಮನೆಯವರು ಆಕೆಯನ್ನು ಆಲೇರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಸುಜಾತಾಳನ್ನು ಪರೀಕ್ಷಿಸಿ ಉತ್ತಮ ಚಿಕಿತ್ಸೆಗಾಗಿ ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸೂಚಿಸಿದ್ದರು. ಚಿಕಿತ್ಸೆಗಾಗಿ ಹೈದರಾಬಾದ್‌ ನ ಯಶೋದಾ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ. ಎರಡು ದಿನಗಳ ನಂತರ ವೈದ್ಯರು ಆಕೆಯ ಬ್ರೈನ್ ಡೆಡ್ ಎಂದು ದೃಢಪಡಿಸಿದ್ದರು.

ಇದರೊಂದಿಗೆ ವೈದ್ಯರು, ಅಂಗಾಂಗ ದಾನದ ಜೀವದಾನ ಟ್ರಸ್ಟ್ ಬಗ್ಗೆ ಆಕೆಯ ಕುಟುಂಬ ಸದಸ್ಯರಿಗೆ ಬಗ್ಗೆ ತಿಳಿಸಿದ್ದಾರೆ. ಜೀವದಾನ ಟ್ರಸ್ಟ್ ಸಿಬ್ಬಂದಿ ಅಂಗಾಂಗ ದಾನದ ಬಗ್ಗೆ ತಿಳಿಸಿದಾಗ ಸುಜಾತಾ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆಕೆಯ ಎರಡು ಮೂತ್ರಪಿಂಡಗಳು, ಹೃದಯ, ಯಕೃತ್ತು ಮತ್ತು ಶ್ವಾಸಕೋಶಗಳನ್ನು ತೆಗೆದು ಆರು ಜನರಿಗೆ ಕಸಿ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Click 👇

https://newsnotout.com/2024/05/dysp-cyber-case-madikeri-bank-account
https://newsnotout.com/2024/05/inspector-and-acp-threat-case
https://newsnotout.com/2024/05/lipslick-ban-in-nk-and-rules

Related posts

ಮಗನಿಗೆ ಮತ್ತು ತಮ್ಮನಿಗೆ ವಿಷ ಹಾಕಿ, ಆಕೆಯೂ ಆತ್ಮಹತ್ಯೆ ಮಾಡಿಕೊಂಡದ್ದೇಕೆ..? ಒಂದೇ ಕುಟುಂಬದ ಮೂವರು ಸತ್ತು 2 ದಿನವಾದರೂ ತಿಳಿಯಲೇ ಇಲ್ಲ..!

ಸರ್ಕಾರಿ ಶಾಲೆಯ ಶಿಕ್ಷಕನನ್ನು ಅಪಹರಿಸಿ ಬಂದೂಕು ತೋರಿಸಿ ಬಲವಂತದ ಮದುವೆ..! ಈ ಬಗ್ಗೆ ವಧು ಹೇಳಿದ್ದೇನು..? ಇಲ್ಲಿದೆ ವೈರಲ್ ವಿಡಿಯೋ

ಬಡವರಿಗಾಗಿ ಮಿಡಿದ ಸೂಪರ್‌ ಸ್ಟಾರ್ ರಜನಿಕಾಂತ್ ಹೃದಯ..!12 ಎಕರೆ ಜಮೀನಿ​​ನಲ್ಲಿ ಆಸ್ಪತ್ರೆ ನಿರ್ಮಿಸಲು ಮುಂದಾದ ತಲೈವಾ..!ಏನಿದರ ಸ್ಪೆಶಾಲಿಟಿ