ಕರಾವಳಿ

ಕಾಳು ಮೆಣಸು ಕೊಯ್ಯುತ್ತಿರುವಾಗ ಬಾವಿಗೆ ಬಿದ್ದ ಪತಿ!,ಪತ್ನಿ ಮಾಡಿದ್ದೇನು ನೋಡಿ..

ನ್ಯೂಸ್‌ ನಾಟೌಟ್‌: ಗಂಡ-ಹೆಂಡತಿ ಪರಸ್ಪರ ಅನ್ಯೋನ್ಯವಾಗಿದ್ದರೆ ಎಂತಹ ಕಷ್ಟಗಳು ಬಂದರೂ ಮಂಜಿನಂತೆ ಕರಗಿ ಹೋಗುತ್ತವೆ. ಹೌದು, ಮದುವೆಯಾದಾಗಿನಿಂದ ಸಾಯುವ ತನಕ ಆ ಬಾಂಧವ್ಯ ಹಾಗೆಯೇ ಇರುತ್ತೆ.ಹೀಗೆ 56 ವರ್ಷದ ಮಹಿಳೆ ತನ್ನ ಗಂಡನನ್ನು ಅಪಾಯದಲ್ಲಿ ರಕ್ಷಿಸಿದ ರೀತಿ ಈ ವಿವಾಹ ಬಂಧದ ಶಕ್ತಿಯನ್ನು ಪ್ರದರ್ಶಿಸುತ್ತದೆ. ಕೇರಳದ ಎರ್ನಾಕುಲಂ ಜಿಲ್ಲೆಯ ಪಿರವಂ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ನಡೆದಿದ್ದೇನು?

ಬೆಳಗ್ಗಿನ ವೇಳೆ , 64 ವರ್ಷದ ರಮೇಶನ್ ಕಾಳುಮೆಣಸು ಕೀಳಲು ತಮ್ಮ ಹಿತ್ತಲಿನಲ್ಲಿರುವ ಕಾಳು ಮೆಣಸು ಬಳ್ಳಿ ಹಬ್ಬಿಕೊಂಡಿದ್ದ ಮರವನ್ನು ಹತ್ತುತ್ತಿದ್ದಾಗ, ಕೊಂಬೆ ಆಕಸ್ಮಿಕವಾಗಿ ಮುರಿದು ಹತ್ತಿರದ 40 ಅಡಿ ಆಳದ ಬಾವಿಗೆ ಬಿದ್ದಿದ್ದಾರೆ. ಇದನ್ನು ನೋಡಿದ ಅವರ ಪತ್ನಿ ಪದ್ಮಾ ( 56 ವರ್ಷದ ) ಗಾಬರಿಯಾಗಲಿಲ್ಲ.  ಬದಲಾಗಿ ತುರ್ತು ಪ್ರಜ್ಞೆಯಿಂದ ವರ್ತಿಸಿದರು. ಅವರು ತಕ್ಷಣ ಹಗ್ಗದ ಸಹಾಯದಿಂದ ಬಾವಿಗೆ ಇಳಿದರು. ಮುಳುಗಿ ಪ್ರಜ್ಞೆ ಕಳೆದುಕೊಳ್ಳುವ ಹಂತದಲ್ಲಿದ್ದ ತನ್ನ ಗಂಡನನ್ನು ಸುಮಾರು 20 ನಿಮಿಷಗಳ ಕಾಲ ಹಿಡಿದುಕೊಂಡು ಜೋರಾಗಿ ಕಿರುಚಿದಳು.

ಈ ಮಹಿಳೆಯ ಕಿರುಚಾಟ ಕೇಳಿ, ದಾರಿಹೋಕರು ಓಡಿ ಬಂದು ಬಾವಿಯೊಳಗೆ ನೋಡಿದರು. ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಲಾಯಿತು. ಸ್ಥಳೀಯರಿಂದ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಬುಟ್ಟಿಯ ಸಹಾಯದಿಂದ ದಂಪತಿಯನ್ನು ಹೊರತೆಗೆದರು. ನಂತರ ರಮೇಶನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.ಪತಿಯನ್ನು ಉಳಿಸಲು ಧೈರ್ಯ ಮತ್ತು ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸಿದ 56 ವರ್ಷದ ಪದ್ಮಾ ಅವರಿಗೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.

Related posts

ಬಂಟ್ವಾಳ: ಯುವತಿ ಸ್ನಾನ ಮಾಡುತ್ತಿದ್ದಾಗ ವಿಡಿಯೋ ಮಾಡುತ್ತಿದ್ದ ಕಿರಾತಕ,ಆರೋಪಿ ವಶಕ್ಕೆ

ಸುಳ್ಯ: 50ಕ್ಕೂ ಹೆಚ್ಚು ಔಷಧಿಯ ಗಿಡ ಮೂಲಿಕೆ ಸಸ್ಯಗಳಿಂದ ವಿದ್ಯಾರ್ಥಿಗಳಿಗೆ ಕಷಾಯ..! ಮಳೆಗಾಲದ ಶೀತ, ಕೆಮ್ಮು, ಜ್ವರದಿಂದ ಮಕ್ಕಳನ್ನು ರಕ್ಷಿಸೋಕೆ ಸ್ನೇಹ ಶಾಲೆ ತಂತ್ರ..!

ಸುಳ್ಯ: ದಿಢೀರ್ ಆರೋಗ್ಯದಲ್ಲಿ ಏರುಪೇರು,ಚಿಕಿತ್ಸೆ ಪಡೆಯುತ್ತಿದ್ದ ಕ್ರೀಡಾಪಟು/ಎಲೆಕ್ಟ್ರೀಷಿಯನ್ ನಿಧನ