ಕ್ರೈಂದೇಶ-ಪ್ರಪಂಚ

ಮೊಬೈಲ್ ಚಾರ್ಜ್‌ಗಿಟ್ಟು ಮಾತನಾಡುವ ವೇಳೆ ಸ್ಫೋಟಗೊಂಡು ಮಹಿಳೆ ದುರಂತ ಅಂತ್ಯ,ಕೆಲ ವರ್ಷಗಳ ಹಿಂದೆ ಕೊನೆಯುಸಿರೆಳೆದಿದ್ದರು ಮಹಿಳೆ ಪತಿ; ಅಪ್ಪ-ಅಮ್ಮನನ್ನು ಕಳೆದುಕೊಂಡು ಗಂಡು ಮಗು ಈಗ ಅನಾಥ

ನ್ಯೂಸ್ ನಾಟೌಟ್ : ಮೊಬೈಲನ್ನು  ಚಾರ್ಜ್‌ ಗೆ ಇಟ್ಟು ಮಾತನಾಡಬಾರದು.ಮಕ್ಕಳು ಚಾರ್ಜ್‌ಗಿಟ್ಟು ಗೇಮ್ಸ್ ಆಡಬಾರದು ಎಂದು ವರದಿಗಳು ಬರುತ್ತಲೇ ಇದ್ದರೂ ಜನ ಎಚ್ಚೆತ್ತುಕೊಳ್ಳೊದಿಲ್ಲ ಅನ್ನೋದು ವಿಪರ್ಯಾಸ.ಈ ಹಿಂದೆಯೂ ಮೊಬೈಲ್ ಚಾರ್ಜ್‌ಗಿಟ್ಟು ಮಾತಾಡಿರುವ ಸಂದರ್ಭ ಅನೇಕ ದುರ್ಘಟನೆಗಳು ಸಂಭವಿಸಿದ ವರದಿಗಳನ್ನು ನೀವು ಓದಿರುತ್ತೀರಿ..ಇದೀಗ ಅಂತಹುದ್ದೇ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ (Tamilnadu) ನಡೆದಿದೆ.ಮೊಬೈಲನ್ನು ಚಾರ್ಚ್‌ಗಿಟ್ಟು ಮಾತಾಡಿದ ಮಹಿಳೆ ದುರಂತ ಅಂತ್ಯವನ್ನೇ ಕಂಡಿದ್ದಾಳೆ.

ಯುವತಿ ಮೊಬೈಲನ್ನು ಚಾರ್ಚ್‌ಗೆ ಇಟ್ಟಿದ್ದಾಳೆ.ಈ ವೇಳೆ ಫೋನ್ ಬಂತೆಂದು ಮಾತನಾಡಲು ಶುರು ಮಾಡಿದ್ದಾಳೆ.ಈ ವೇಳೆ ಕೆಲ ನಿಮಿಷಗಳ ಬಳಿಕ ಮೊಬೈಲ್ ಸ್ಪೋಟ ಗೊಂಡಿದೆ. ಇದರ ತೀವ್ರತೆಗೆ ಮಹಿಳೆ ಉಸಿರು ಚೆಲ್ಲಿದ್ದಾಳೆ.ಕೊಕಿಲಾಂಪಾಲ್ (33) ದುರಂತ ಅಂತ್ಯಕ್ಕೀಡಾದ ಮಹಿಳೆ ಎಂದು ತಿಳಿದು ಬಂದಿದೆ.

ತಂಜಾವೂರು ಜಿಲ್ಲೆಯ ಪಾಪನಾಶಂ ಬಳಿಯಿರುವ ವಿಶಿಷ್ಟರಾಜಪುರಂ ಮೂಲದ ಈಕೆಗೆ ಮದುವೆಯಾಗಿದ್ದು, ಓರ್ವ ಗಂಡು ಮಗನಿದ್ದಾನೆ. ಪತಿ ಪ್ರಭಾಕರನ್ ಅನಾರೋಗ್ಯ ಕಾರಣದಿಂದ ಕೆಲವು ವರ್ಷಗಳ ಹಿಂದೆಯೇ ಕೊನೆಯುಸಿರೆಳೆದಿದ್ದರು.ಇದೀಗ ಗಂಡು ಮಗು ಅಪ್ಪ-ಅಮ್ಮನನ್ನು ಕಳೆದುಕೊಂಡು ಗಂಡು ಮಗು ಈಗ ಅನಾಥವಾಗಿದೆ.

ಗಂಡ ಇಲ್ಲದ ಮೇಲೆ ಕೋಕಿಲಾಂಪಾಲ್ ಜೀವನ ನಡೆಸಲು ಮೇಲಕಾಪಿಸ್ಥಳದಲ್ಲಿ ವಾಚ್ ಮತ್ತು ಸೆಲ್ ಫೋನ್ ರಿಪೇರಿ ಅಂಗಡಿ ನಡೆಸುತ್ತಿದ್ದಳು. ಬುಧವಾರ ಮಧ್ಯಾಹ್ನ ಸೆಲ್ ಫೋನ್ ಚಾರ್ಜ್ ಮಾಡುವಾಗ ಕಿವಿಯಲ್ಲಿ ಹೆಡ್ ಫೋನ್ ಹಾಕಿಕೊಂಡು ಮಾತನಾಡುತ್ತಿದ್ದಳು. ಆಗ ಅನಿರೀಕ್ಷಿತವಾಗಿ ಮೊಬೈಲ್ ಸ್ಫೋಟಗೊಂಡಿದೆ. ಪರಿಣಾಮ ಕೋಕಿಲಾಂಪಲ್ ಸ್ಥಳದಲ್ಲೇ ದುರಂತ ಅಂತ್ಯ ಕಂಡಿದ್ದಾಳೆ.ಅಲ್ಲದೆ ಅಂಗಡಿಯಲ್ಲಿದ್ದ ಸಾಮಗ್ರಿಗಳು ಕೂಡ ಬೆಂಕಿಗೆ ಆಹುತಿಯಾಗಿವೆ. 

ಸದ್ಯ ಈ ಸಂಬಂಧ ಕೋಕಿಲಂಪಾಲ್ ತಂದೆ ಕಪಿಸ್ತಲಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

ಕರ್ನಾಟಕದಲ್ಲಿ ಭಾರತದ ಹುಲಿ ಸಂರಕ್ಷಣೆಯ ಯಶಸ್ಸಿನ ಕಾರ್ಯಕ್ರಮ, ಬಂಡೀಪುರದಲ್ಲಿ 3 ದಿನಗಳ ಸಫಾರಿ ನಡೆಸಲಿರುವ ನರೇಂದ್ರ ಮೋದಿ

ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ ! ಅಂತರಾಷ್ಟ್ರೀಯ ತಲ್ಲಣಗಳು ಬೆಲೆ ಏರಿಕೆಗೆ ಕಾರಣವೇ ?

ಕೋರ್ಟ್ ಗೆ ಕರೆದೊಯ್ಯುವಾಗ ಪೊಲೀಸರೇ ಕಳ್ಳರನ್ನು ಬಿಟ್ಟರಾ..?11 ಪೊಲೀಸರು ಅಮಾನತ್ತಾದ ರೋಚಕ ಸ್ಟೋರಿ ಇಲ್ಲಿದೆ, ವಿಡಿಯೋ ನೋಡಿ