ನ್ಯೂಸ್ ನಾಟೌಟ್: ಬೆಂಗಳೂರಿನ ಆಟೋ ಚಾಲಕನೊಬ್ಬ ತನ್ನ ಹೆಂಡತಿ ತನ್ನ ತವರು ಮನೆಗೆ ಹೋಗಿದ್ದನ್ನು ಯಾವ ಮಟ್ಟಿಗೆ ಸಂಭ್ರಮಿಸಿದ್ದಾನೆ ಎಂದರೆ ಆಕೆ ತವರಿಗೆ ಹೋಗಿರುವ ವಿಚಾರ ಇದೀಗ ಸೋಷಿಯಲ್ ಮೀಡಿಯಾದ ತುಂಬೆಲ್ಲ ಹರಿದಾಡುತ್ತಿದೆ.
ನನ್ನ ಹೆಂಡತಿ ತವರು ಮನೆಗೆ ಹೋಗಿರುವುದರಿಂದ ನಾನು ಬಹಳ ಸಂತೋಷವಾಗಿದ್ದೇನೆ ಎಂದು ಬೋರ್ಡ್ವೊಂದನ್ನು ತನ್ನ ಆಟೋದಲ್ಲಿ ಬರೆದು ಹಾಕಿರುವ ಆತ ಅದೇ ಖುಷಿಯಲ್ಲಿ ತನ್ನ ಆಟೋದಲ್ಲಿ ಪ್ರಯಾಣಿಸುವ ಎಲ್ಲ ಪ್ರಯಾಣಿಕರಿಗೂ ಉಚಿತ ಬಿಸ್ಕೆಟ್ ವಿತರಿಸಿದ್ದಾನೆ.
ಈ ಪೋಸ್ಟ್ ಅನ್ನು ಆತನ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ “ಹೆಂಡತಿ ತನ್ನ ಹೆತ್ತವರ ಮನೆಗೆ ಹೋಗಿದ್ದಾಳೆ, ನಾನು ಸಂತೋಷವಾಗಿದ್ದೇನೆ” ಎಂದು ಬರೆಯಲಾಗಿದೆ. ಆ ವ್ಯಕ್ತಿ ತಮ್ಮ ಆಟೋದಲ್ಲಿ ಪ್ರಯಾಣಿಸುವವರಿಗೆ ಬ್ರಿಟಾನಿಯಾ ಮಿಲ್ಕ್ ಬಿಸ್ಕೆಟ್ ಗಳನ್ನು ವಿತರಿಸಿದ್ದಾನೆ. ಇದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ.