Uncategorized

‘ಕರಿಮಣಿ ಮಾಲೀಕ ನೀನಲ್ಲ’ ರೀಲ್ಸ್ ಮಾಡಿದ್ದಕ್ಕೆ ಪತಿ ಸತ್ತಿದ್ದಲ್ಲ,ವಿಪರೀತ ಸಾಲ ಮಾಡಿಕೊಂಡಿದ್ದರು;ಗಂಡನ ಸಾವಿನ ಕಾರಣ ಬಿಚ್ಚಿಟ್ಟ ಪತ್ನಿ

ನ್ಯೂಸ್ ನಾಟೌಟ್ : ರೀಲ್ಸ್‌ ಮಾಡಿ ಪತಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾದ ಘಟನೆ ನಿನ್ನೆ ವರದಿಯಾಗಿತ್ತು. ಇದೀಗ ಕರಿಮಣಿ ಮಾಲೀಕ ರೀಲ್ಸ್ (Karimani Malika Reels) ಮಾಡಿದ್ದಕ್ಕೆ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಮಹಿಳೆ ರೂಪಾ ಪ್ರತಿಕ್ರಿಯೆ ನೀಡಿದ್ದಾರೆ.

ಹಾಗಾದರೆ ಪತಿ ಸಾವನ್ನಪ್ಪಲು ಕಾರಣವೇನು? ಎಂದು ಪತ್ನಿ ಹೇಳಿದ್ದಾರೆ.ಚಾಮರಾಜನಗರ ಜಿಲ್ಲೆಯ ಹನೂರು (Hanuru, Chamarajanaga) ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದ ನಿವಾಸಿ 33 ವರ್ಷದ ಕುಮಾರ್ ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದರು.  ಪತ್ನಿ ರೂಪಾ ಕರಿಮಣಿ ಮಾಲೀಕ ನೀನಲ್ಲ ಹಾಡಿಗೆ ರೀಲ್ಸ್ ಮಾಡಿದ್ದಕ್ಕೆ ನೊಂದು ಕುಮಾರ್ ಆತ್ಮಹತ್ಯೆ ಮಡ್ಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಕುಮಾರ್ ಪತ್ನಿ ರೂಪಾ ಗಂಡನ ಆತ್ಮಹತ್ಯೆಯ ಕಾರಣವನ್ನು ಬಿಚ್ಚಿಟ್ಟಿದ್ದು, ತಮ್ಮ ವಿರುದ್ಧ ಕೇಳಿ ಬಂದಿರೋ ಆರೋಪಗಳನ್ನು ಅಲ್ಲಗಳೆದಿದ್ದಾರೆ.

ನಾನು ರೀಲ್ಸ್ ಮಾಡಿದಕ್ಕೆ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ನನ್ನ ಪತಿ ವಿಪರೀತ ಸಾಲ ಮಾಡಿಕೊಂಡಿದ್ದರು. ನಿತ್ಯ ಮದ್ಯ ಕುಡಿದು ಇಸ್ಪೀಟ್ ಆಡುತ್ತಿದ್ದರು. ಸಾಲ ಹಿಂದಿರುಗಿಸಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರೂಪಾ ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ಮಕ್ಕಳ ಮೇಲಾಣೆ, ಈ ಹಿಂದಿನಿಂದಲೂ ನಾನು ರೀಲ್ಸ್ ಮಾಡಿದ್ದೇನೆ. ಅದು ನನ್ನ ಪತಿ ಕುಮಾರ್ ಅವರಿಗೂ ತಿಳಿದಿತ್ತು. ನನ್ನ ಮೇಲೆ ಪತಿ ಕುಟುಂಬಸ್ಥರು ಸುಖಾಸುಮ್ಮನೆ ಆರೋಪಿಸುತ್ತಿದ್ದಾರೆ. ಈ ಸಾವಿಗೆ ನಾನು ಮಾಡಿದ್ದ ರೀಲ್ಸ್ ಕಾರಣ ಅಲ್ಲವೆಂದು ರೂಪಾ ಪ್ರತಿಭಟನೆ ನಡೆಸಿದ್ದರು.

ಸೋದರ ಮಾವ, ಸಹೋದರಿ ಜೊತೆಗೆ ಕರಿಮಣಿ ಮಾಲೀಕ ನೀನಲ್ಲ ಎಂದು ಪತ್ನಿ ರೂಪಾ ರೀಲ್ಸ್ ಮಾಡಿದ್ದರು. ಕರಿಮಣಿ ಮಾಲೀಕ ನೀನಲ್ಲ ಹಾಡಿಗೆ ರೀಲ್ಸ್ ಮಾಡಿದ್ದರಿಂದ ಕುಮಾರ್​ಗೆ ಆತನ ಗೆಳೆಯರು ಛೇಡಿಸುತ್ತಿದ್ದರು.ಈ ರೀಲ್ಸ್ ಸಂಬಂಧ ದಂಪತಿ ನಡುವೆ ಜಗಳ ಆಗಿತ್ತು. ರೀಲ್ಸ್​ ನಿಂದ ಮನನೊಂದು ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ್ದರು.

Related posts

ಕೊನೆಗೂ ಬಯಲಾಗಿತ್ತು 19 ರ ಯುವತಿಯ ಆ ರಸಿಕ ರಾತ್ರಿಯ ರಹಸ್ಯ  !

ಮೊದಲ ಸಂಪುಟ ಸಭೆಯಲ್ಲಿಯೇ ಮುಖ್ಯಮಂತ್ರಿ ಬೊಮ್ಮಾಯಿ ರಾಜ್ಯದ ಜನರಿಗೆ ಕೊಟ್ರು ಭರ್ಜರಿ ಗಿಫ್ಟ್

ಶಾಲೆಗೆ ತಡವಾಗಿ ಬಂದ ಶಿಕ್ಷಕಿಗೆ ಬೂಟಿನಿಂದ ಹೊಡೆದ ಪ್ರಾಂಶುಪಾಲ