ಕ್ರೈಂವೈರಲ್ ನ್ಯೂಸ್

ಗಂಡನ ಮೇಲೆಯೇ ಮಾಟಮಂತ್ರ ಮಾಡಿಸಿದ್ದೇಕೆ ಹೆಂಡತಿ? ರಹಸ್ಯ ತಿಳಿಯಲು ‘ಪ್ರೈವೇಟ್ ಡಿಟೆಕ್ಟಿವ್‌’ ಮೊರೆ ಹೋಗಿದ್ದ ಪತಿಗೆ ಎದುರಾಗಿತ್ತು ಬಿಗ್ ಶಾಕ್! ಪತಿ ಪೊಲೀಸರಿಗೆ ಕೊಟ್ಟ ದೂರಿನಲ್ಲೇನಿದೆ?

ನ್ಯೂಸ್‌ ನಾಟೌಟ್‌: ಹೆಂಡತಿಯೇ ನನ್ನ ಮೇಲೆ ಮಾಟಮಂತ್ರ ಪ್ರಯೋಗ ಮಾಡಿಸಿದ್ದಾಳೆಂದು ಆರೋಪಿಸಿ ವ್ಯಕ್ತಿಯೊಬ್ಬ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾನೆ. ಮನೆ ತುಂಬ ನಿಂಬೆಹೆಣ್ಣು, ಕುಂಕುಮ ಹಾಕಿದ್ದು, ಅಷ್ಟೆ ಅಲ್ಲದೆ ತನಗೆ ಗೊತ್ತಾಗದೆ ಊಟದಲ್ಲಿ ಬೂದಿ, ಬೇರೆ ಬೇರೆ ರೀತಿಯ ಎಣ್ಣೆ ಹಾಗೂ ಉಗುಳನ್ನು ಬೆರಸಿ ಕೊಡುತ್ತಿದ್ದರೆಂದು ಪತಿ ಆರೋಪಿಸಿದ್ದಾರೆ ಎನ್ನಲಾಗಿದೆ.

ಬ್ಯೂಸಿನೆಸ್ ಟ್ರಿಪ್ ಮೇಲೆ ಹೊರ ಹೋಗಿದ್ದ ವೇಳೆ ಬ್ಲಾಕ್ ಮ್ಯಾಜಿಕ್ ನಡೆಸಿದ್ದು, ಮನೆಗೆ ವಾಪಸ್ ಬಂದಾಗ ಮನೆ ತುಂಬ ನಿಂಬೆಹಣ್ಣು, ಪೂಜೆ ಮಾಡಿದ್ದ ತೆಂಗಿನಕಾಯಿ ಕುಂಕುಮ ಇದ್ದದ್ದನ್ನು ಕಂಡ ಪತಿ ಅನುಮಾನಗೊಂಡು ಗ್ಲೋಬಲ್ ಡಿಟೆಕ್ಟಿವ್‌ ಏಜೆನ್ಸಿಯನ್ನ ಸಂಪರ್ಕಿಸಿದ್ದರಂತೆ. ಆ ಡಿಟೆಕ್ಟಿವ್‌ ಏಜೆನ್ಸಿ ಮಾಂತ್ರಿಕರ ಜೊತೆ ಸೇರಿ ಪತ್ನಿ ಐಶ್ವರ್ಯ ಮತ್ತಾಕೆಯ ತಾಯಿ ಮಹಾಲಕ್ಚ್ಮಿ ವಾಮಾಚಾರ ಮಾಡಿದ್ದಾರೆಂದು ವರದಿ ನೀಡಿದ್ದರಂತೆ.

ಪ್ರೈವೇಟ್ ಡಿಟೆಕ್ಟಿವ್‌ ಮೊರೆ ಹೋಗಿದ್ದ ಪತಿಗೆ ಬಿಗ್ ಶಾಕ್ ಆಗಿದ್ದು, ವೈದ್ಯೆ ಪತ್ನಿ ಹಾಗೂ ಆಕೆಯ ತಾಯಿಯಿಂದ ಬ್ಲಾಕ್ ಮ್ಯಾಜಿಕ್ ಮಾಡಿಸಿದ್ದಾರೆಂದು ಪತಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ. ಸ್ಮಶಾನದಲ್ಲಿ ಪೂಜೆ ಮಾಡುವ ಅತ್ತಿಗುಪ್ಪೆಯ ಮಾಂತ್ರಿಕ ನಾಗೇಂದ್ರನಿಂದ ಮಾಟಮಂತ್ರ ಮಾಡಿಸಿದ್ದಾರೆಂದು ಉದ್ಯಮಿ ದೇವಕುಮಾರ್ ಪತ್ನಿ ಡಾಕ್ಟರ್ ಐಶ್ವರ್ಯ ಮೇಲೆ ದೂರು ನೀಡಿದ್ದಾರೆ.

ಬ್ಲಾಕ್ ಮ್ಯಾಜಿಕ್ ಸಫಲವಾಗಲು ಆಹಾರದಲ್ಲಿ ಕೂಡ ನಿಷೇಧ ಪದಾರ್ಥಗಳನ್ನ ನೀಡುತ್ತಿದ್ದಾರೆ. ತನಗೆ ಹಾಗೂ ತನ್ನ ಕುಟುಂಬಕ್ಕೆ ಪತ್ನಿ ಹಾಗೂ ಆಕೆಯ ತಾಯಿಯಿಂದ ಜೀವ ಬೆದರಿಕೆ ಇದೆ ಎಂದು ಉದ್ಯಮಿ ದೂರಿನಲ್ಲಿ ತಿಳಿಸಿದ್ದಾರೆ.

ಸದ್ಯ ಕಬ್ಬನ್ ಪಾರ್ಕ್ ಪೊಲೀಸರು ಕೋರ್ಟ್ ಆದೇಶ ಪಡೆದು ಸೂಕ್ತ ಕಾಯ್ದೆಯಡಿ (Karnataka Prevention and Eradication of Inhuman Evil Practices and Blackagic act 2017) ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ ಎನ್ನಲಾಗಿದೆ.

Related posts

ಸುಳ್ಯ , ಬೆಳ್ಳಾರೆ ವ್ಯಾಪ್ತಿಯಲ್ಲಿ ಮದ್ಯದಂಗಡಿ, ಬಾರ್‌ ಬಂದ್ ಮಾಡಲು ಜಿಲ್ಲಾಧಿಕಾರಿ ಸೂಚನೆ, ಯಾವ ದಿನ ಮದ್ಯ ಸಿಗಲ್ಲ..? ಇಲ್ಲಿದೆ ನೋಡಿ ಡಿಟೇಲ್ಸ್ ..

ಸುಳ್ಯ: ಮಣಿಪುರದಲ್ಲಿ ಮಹಿಳೆಯರ ಶೋಷಣೆ, ಸುಳ್ಯದಲ್ಲಿ ಮೋದಿ ಸರ್ಕಾರದ ವಿರುದ್ಧ ಸಿಡಿದೆದ್ದ ಕಾಂಗ್ರೆಸ್

ಆಧಾರ್‌, ಪಾನ್‌ ಇನ್ನೊಬ್ಬರಿಗೆ ಕೊಡೊ ಮುಂಚೆ ಎಚ್ಚರ..! ದಾಖಲೆ ನಕಲು ಮಾಡಿ 20 ಲಕ್ಷ ರೂ. ಸಾಲ ಪಡೆದದ್ದೇಗೆ ಖದೀಮರು?