ಕರಾವಳಿ

ಕರ್ತವ್ಯದಲ್ಲಿರುವಾಗಲೇ ಗುಪ್ತಚರ ಇಲಾಖೆ ಸಿಬ್ಬಂದಿಗೆ ಹೃದಯಾಘಾತ..!ಎದೆನೋವೆಂದು ರೆಸ್ಟ್ ರೂಮಿಗೆ ತೆರಳುತ್ತಿದ್ದಂತೆ ಕುಸಿದುಬಿದ್ದು ಕೊನೆಯುಸಿರು

ನ್ಯೂಸ್ ನಾಟೌಟ್ : ಕರ್ತವ್ಯದಲ್ಲಿರುವಾಗಲೇ ಗುಪ್ತಚರ ಇಲಾಖೆ ಸಿಬ್ಬಂದಿಗೆ ಹೃದಯಾಘಾತವಾಗಿ ದುರಂತ ಅಂತ್ಯ ಕಂಡ ಘಟನೆ ಮಂಗಳೂರಿನಿಂದ ವರದಿಯಾಗಿದೆ.ಉರ್ವ ಮಾರಿಗುಡಿ ನಿವಾಸಿ ರಾಜೇಶ್ ಬಿ.ಯು (45)ಉಸಿರು ಚೆಲ್ಲಿದ ವ್ಯಕ್ತಿ ಎಂದು ತಿಳಿದು ಬಂದಿದೆ.

ಇಂದು ಮಧ್ಯಾಹ್ನ ವೇಳೆ ಗುಪ್ತಚರ ಇಲಾಖಾ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭ ಇವರಿಗೆ ಎದೆನೋವು ಕಾಣಿಸಿಕೊಂಡಿದೆ.ಕೂಡಲೇ ರೆಸ್ಟ್ ರೂಮಿಗೆ ತೆರಳಿ ವಿಶ್ರಾಮ ಪಡೆಯುತ್ತಿದ್ದಂತೆ ರಾಜೇಶ್ ಕುಸಿದುಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆನ್ನುವಷ್ಟರಲ್ಲೇ ಅವರು ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.

1993 ನೇ ಬ್ಯಾಚ್ ನ ಪೂಲೀಸಿ ಸಿಬ್ಬಂದಿಯಾದ ರಾಜೇಶ್ ಅವರು ಜಿಲ್ಲೆಯ ಸುರತ್ಕಲ್ ಹಾಗೂ ಪಣಂಬೂರು ಪೊಲೀಸ್ ಠಾಣೆಯ ಸಿಬ್ಬಂದಿಯೂ ಆಗಿದ್ದರು ಎಂದು ತಿಳಿದು ಬಂದಿದೆ.

Related posts

ಸುಳ್ಯ:ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ , ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಸಂಪಾಜೆ:ಕೊಡಗು ಡಿ.ಸಿ.ಸಿ ಬ್ಯಾಂಕ್ ನಿ.ಮಡಿಕೇರಿ 22 ನೇ ನೂತನ ಶಾಖೆ ಶುಭಾರಂಭ,ಶಾಸಕ ಎ.ಎಸ್.ಪೊನ್ನಣ್ಣರಿಂದ ಉದ್ಘಾಟನೆ ;ಗಣ್ಯರು ಭಾಗಿ

ವಿಶ್ವ ಬಂಟರ ಕ್ರೀಡಾಕೂಟ: ಪದಕ ಗೆದ್ದು ಮಿಂಚಿದ ಸುಳ್ಯದ ತ್ರಿವಳಿ ರತ್ನಗಳು..! ದೇವಿ ಪ್ರಸಾದ್ ರೈ, ಸರಿತಾ, ಮಹಾಬಲ ರೈ ಚಾಂಪಿಯನ್ಸ್