ಕರಾವಳಿಸುಳ್ಯ

ಬೆಂಗಳೂರಿನಲ್ಲಿ ತನ್ನ ಜೀವನವನ್ನೇ ಕತ್ತಲನ್ನಾಗಿಸಿದ ಸುಳ್ಯದ ಮಹಿಳೆ,ಉದ್ಯಮಿಯೊಬ್ಬರ ಪತ್ನಿಯ ಈ ನಿರ್ಧಾರಕ್ಕೆ ಕಾರಣವೇನು?ಪಾರ್ಥೀವ ಶರೀರ ಇಂದು ಸಂಜೆ ಸುಳ್ಯಕ್ಕೆ ಆಗಮನ

ನ್ಯೂಸ್ ನಾಟೌಟ್ : ಸುಳ್ಯದ ಕನಕಮಜಲು ಮೂಲದ ಮಹಿಳೆಯೊಬ್ಬರು ಬೆಂಗಳೂರಿನಲ್ಲಿ ತನ್ನ ಜೀವನವನ್ನೇ ಕತ್ತಲನ್ನಾಗಿಸಿದ ಘಟನೆ ವರದಿಯಾಗಿದೆ. ಇವರು ಉದ್ಯಮಿಯೋರ್ವರ ಪತ್ನಿಯಾಗಿದ್ದು,ಇವರನ್ನು 26 ವರ್ಷ ಪ್ರಾಯದ ಐಶ್ವರ್ಯ ಎಂದು ಗುರುತಿಸಲಾಗಿದೆ.

ಮಹಿಳೆ ಐಶ್ವರ್ಯ ಅವರು ಅ.26 ರಂದು ಮಧ್ಯಾಹ್ನದ ವೇಳೆ ಈ ಕೃತ್ಯವೆಸಗಿದ್ದಾರೆಂದು ತಿಳಿದು ಬಂದಿದೆ.ಇವರು ಉಬರಡ್ಕ ಮಿತ್ತೂರು ಗ್ರಾಮದ ಮದುವೆಗದ್ದೆ ಸುಬ್ರಹ್ಮಣ್ಯ ಗೌಡ ಹಾಗೂ ಉಷಾ ದಂಪತಿಯ ಪುತ್ರಿ ಎಂದು ತಿಳಿದು ಬಂದಿದೆ. ಐಶ್ವರ್ಯ ಅವರನ್ನು ಕಳೆದ 4 ವರ್ಷದ ಹಿಂದೆಯಷ್ಟೇ ರಾಜೇಶ್ ಅವರಿಗೆ ಮದುವೆ ಮಾಡಿಕೊಡಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

ಮದುವೆಯಾದ ಬಳಿಕ ಐಶ್ವರ್ಯರವರು ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಪತಿ ರಾಜೇಶ್ ಸ್ವಂತ ಐಸ್‌ಕ್ರೀಮ್ ಪಾರ್ಲರ್ ನಡೆಸಿಕೊಂಡು ಬೆಂಗಳೂರಿನ ಸ್ಯಾಟ್‌ಲೈಟ್‌ ಸಮೀಪ ವಾಸವಾಗಿದ್ದರೆಂದು ತಿಳಿದು ಬಂದಿದೆ.ಈ ದುರ್ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಐಶ್ವರ್ಯ ಅವರು ತಂದೆ ಸುಬ್ರಹ್ಮಣ್ಯ ಗೌಡ ಮದುವೆಗದ್ದೆ, ತಾಯಿ ಶ್ರೀಮತಿ ಉಷಾ , ಪತಿ ರಾಜೇಶ್ ಕಾಪಿಲ, ಸಹೋದರ ಸೂರ್ಯ, ಮಾವ ಗಿರಿಯಪ್ಪ ಗೌಡ ಕಾಪಿಲ ಸೇರಿದಂತೆ ಅಪಾರ ಬಂಧು -ಬಳಗ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಐಶ್ವರ್ಯ ಅವರ ಪಾರ್ಥೀವ ಶರೀರ ಬೆಂಗಳೂರಿನಿಂದ ಸುಳ್ಯಕ್ಕೆ ಸಂಜೆ 6 ಗಂಟೆಯ ವೇಳೆಗೆ ತಲುಪಲಿದೆ ಎಂದು ತಿಳಿದು ಬಂದಿದೆ.ಬಳಿಕ ತಂದೆ ಮನೆ ಉಬರಡ್ಕ ಮಿತ್ತೂರು ಗ್ರಾಮದ ಮದುವೆಗದ್ದೆಯಲ್ಲಿ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

https://www.youtube.com/watch?v=mtKTEHG9O4I

Related posts

ಫಾಸಿಲ್ ಹತ್ಯೆಯ ಹಿಂದಿನ ರಹಸ್ಯ ಬಯಲು

ಚೈತ್ರ ಕುಂದಾಪುರ ಪ್ರಕರಣ: ವಜ್ರದೇಹಿ ಮಠದ ಸ್ವಾಮೀಜಿಗೆ ಶಾಕ್..! ಸ್ವಾಮೀಜಿ ಸಿಸಿಬಿ ನೋಟಿಸ್ ನೀಡಿದ್ದೇಕೆ?

ಮನೆಯನ್ನೇ ಮ್ಯೂಸಿಯಂನ್ನಾಗಿಸಿದ ಬಂಟ್ವಾಳದ ವ್ಯಕ್ತಿ,ಇವರ ಮನೆಯಲ್ಲಿರುವ ಒಟ್ಟು ಗಡಿಯಾರಗಳೆಷ್ಟು ಗೊತ್ತಾ?