ಕರಾವಳಿಕ್ರೈಂವೈರಲ್ ನ್ಯೂಸ್

ವಯನಾಡ್ ದುರಂತದಲ್ಲಿ 9 ಮಂದಿಯನ್ನು ಕಳೆದುಕೊಂಡಾಕೆಗೆ ಮತ್ತೊಂದು ಆಘಾತ..! ಮದುವೆಯಾಗಬೇಕಿದ್ದ ವರನೂ ಸಾವು..! ಇಲ್ಲಿದೆ ಮನಕಲಕುವ ಘಟನೆ..!

ನ್ಯೂಸ್ ನಾಟೌಟ್: ಕಳೆದ ಆಗಸ್ಟ್ ತಿಂಗಳಲ್ಲಿ ಕೇರಳದ ವಯನಾಡ್ ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ತನ್ನ ಕುಟುಂಬ ಸದಸ್ಯರನ್ನೆಲ್ಲಾ ಕಳೆದುಕೊಂಡಿದ್ದ ಯುವತಿಗೆ ಮತ್ತೊಂದು ಆಘಾತ ಎದುರಾಗಿದೆ.

ಭೂಕುಸಿತದಲ್ಲಿ ತನ್ನ ಕುಟುಂಬದ ಒಂಬತ್ತು ಮಂದಿಯನ್ನು ಕಳೆದುಕೊಂಡಿದ್ದ ಶ್ರುತಿಗೆ ಡಿಸೆಂಬರ್ ನಲ್ಲಿ ಮದುವೆ ನಿಶ್ಚಯವಾಗಿದ್ದು ಇದೀಗ ಶ್ರುತಿಯ ಕೈಹಿಡಿಯಲಿದ್ದ ಹುಡುಗ ಜೆನ್ಸನ್ ಎಂಬಾತ ಮಂಗಳವಾರ(ಸೆ.12) ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಆತ ಬುಧವಾರ(ಸೆ.11) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಇದರೊಂದಿಗೆ ತನ್ನ ಕುಟುಂಬ ಸದಸ್ಯರನ್ನು ಕಳೆದುಕೊಂಡ ದುಃಖದಲ್ಲಿದ್ದ ಶ್ರುತಿಗೆ ಭಾವಿ ಪತಿಯ ಸಾವಿನ ಸುದ್ದಿ ಶಾಕ್ ನೀಡಿದೆ.

ಶ್ರುತಿ ಹಾಗೂ ಜೆನ್ಸನ್ ಮದುವೆ ನಿಶ್ಚಯವಾಗಿತ್ತು ಇದರ ನಡುವೆ ಆಗಸ್ಟ್ ನಲ್ಲಿ ವಯನಾಡ್, ಮೆಪ್ಪಾಡಿ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ಶ್ರುತಿ ಕುಟುಂಬದ ಒಂಬತ್ತು ಮಂದಿ ಸಾವನ್ನಪ್ಪಿದ್ದರು. ಭೂಕುಸಿತದಲ್ಲಿ ಶ್ರುತಿ ಅವರ ಮನೆಯೂ ಕೊಚ್ಚಿ ಹೋಗಿತ್ತು ಅಷ್ಟು ಮಾತ್ರವಲ್ಲದೆ ಮದುವೆಗೆಂದು ಇರಿಸಿದ್ದ 4 ಲಕ್ಷ ನಗದು, 15 ಪವನ್ ಚಿನ್ನವೂ ಮಣ್ಣುಪಾಲಾಗಿ ಹೋಗಿತ್ತು.

ಇದೆಲ್ಲ ನಡೆದು ನಲವತ್ತೊಂದು ದಿನದ ಬಳಿಕ ಶ್ರುತಿಯ ಸಂಬಂಧಿಸಿಕರು ಮದುವೆಯ ತಯಾರಿಗೆ ಮುಂದಾಗಿದ್ದಾರೆ. ಈ ನಡುವೆ ತಮ್ಮವರನ್ನೆಲ್ಲಾ ಕಳೆದುಕೊಂಡು ಬೇಸರದಲ್ಲಿರುವ ಸಮಯದಲ್ಲಿ ಅದ್ದೂರಿಯಾಗಿ ಮದುವೆಯಾಗುವುದು ಬೇಡ ಎಂದು ಶ್ರುತಿ ಹಾಗೂ ಜೆನ್ಸನ್ ರಿಜಿಸ್ಟರ್ ಮದುವೆಯಾಗಲು ನಿರ್ಧರಿಸಿದ್ದರು. ಈ ವೇಳೆ ಮಂಗಳವಾರ (ಸಪ್ಟೆಂಬರ್ 10) ಶ್ರುತಿ ಸಂಬಂಧಿಕರು ಹಾಗೂ ಜೆನ್ಸನ್ ಚಲಾಯಿಸುತ್ತಿದ್ದ ಕಾರು ಬಸ್ಸಿಗೆ ಡಿಕ್ಕಿ ಹೊಡೆದಿದೆ, ಪರಿಣಾಮ ಜೆನ್ಸನ್ ಗಂಭೀರ ಗಾಯಗೊಂಡಿದ್ದ, ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು ಆದರೆ ತಲೆ ಮತ್ತು ಮುಖದ ಭಾಗಕ್ಕೆ ಗಂಭೀರ ಪೆಟ್ಟು ಬಿದ್ದ ಪರಿಣಾಮ ಜೆನ್ಸನ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ವರದಿ ತಿಳಿಸಿದೆ.

Click

https://newsnotout.com/2024/09/amry-tranees-are-under-attack-by-unkown-kannada-news-police-investugation/
https://newsnotout.com/2024/09/first-night-man-ask-adhar-with-girl-jain-caste-kannada-news-viral/
https://newsnotout.com/2024/09/kannada-news-school-girl-arrest-police-rajashekar-arrested/
https://newsnotout.com/2024/09/masjid-kannada-news-darga-of-muslim-and-ganesha-chaturti-issue/
https://newsnotout.com/2024/09/ganesha-chathurti-conflict-kannada-news-46-are-arrested-kannada-news-d/
https://newsnotout.com/2024/09/kannada-news-ayyappa-temple-onam-celebration-kannada-news/

Related posts

ಎಸಿ ಸರಿಯಾಗಿ ವರ್ಕ್‌ ಆಗ್ತಿಲ್ಲ ಎಂದು ರೈಲ್ವೆ ಚೈನ್‌ ಎಳೆದ ಪ್ರಯಾಣಿಕನಿಗೆ ಥಳಿಸಿದ ಪೊಲೀಸರು..! ಇಲ್ಲಿದೆ ವೈರಲ್ ವಿಡಿಯೋ

ಬ್ರೇಕ್ ಫೇಲ್ ಆಗಿ ಡಾಬಾ ಮತ್ತು ಬೀಡಾ ಅಂಗಡಿಗೆ ಗುದ್ದಿದ BMTC ಬಸ್..! ತಪ್ಪಿದ ಭಾರೀ ಅನಾಹುತ..!

2 ಕೋಟಿ ರೂ. ನೋಟು, 50 ಲಕ್ಷ ರೂ. ನಾಣ್ಯಗಳಿಂದ ಗಣಪತಿಗೆ ಶೃಂಗಾರ; ಫೋಟೋಗಳಲ್ಲಿ ನೋಡಿ