ಸಾಧಕರ ವೇದಿಕೆಸುಳ್ಯ

ಸುಳ್ಯ: ಎನ್ ಎಂ ಪಿಯುಸಿ ಹುಡುಗರ ತಂಡ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ, ಜಿಲ್ಲಾ ಮಟ್ಟಕ್ಕೆ ಆಯ್ಕೆ

ನ್ಯೂಸ್ ನಾಟೌಟ್ :ಪ.ಪೂ ಶಿಕ್ಷಣ ಇಲಾಖೆಯ ವತಿಯಿಂದ ರೋಟರಿ ಸಂಯುಕ್ತ ಪ.ಪೂ ಕಾಲೇಜು ಮಿತ್ತಡ್ಕ-ಆಲೆಟ್ಟಿ ಎಂಬಲ್ಲಿ ನಡೆದ ತಾಲೂಕು ಮಟ್ಟದ ಹುಡುಗರ ವಾಲಿಬಾಲ್ ಪಂದ್ಯಾಟದಲ್ಲಿ ನೆಹರು ಮೆಮೋರಿಯಲ್ ಪ.ಪೂ. ಕಾಲೇಜು ಸುಳ್ಯ ದ ಹುಡುಗರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಈ ತಂಡ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.

ಈ ಪೈಕಿ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿ ಹಂಝತುಲ್ ಕರಾರ್ ಸರ್ವಾoಗೀಣ ಆಟಗಾರ, ಹಾಗೂ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಎಂ.ವಿಶಾಲ್ ಉತ್ತಮ ದಾಳಿಗಾರ ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಸಾಧಕ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ -ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ ಎಂದು ವರದಿ ತಿಳಿಸಿದೆ.

Related posts

ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದ ವಾರ್ಷಿಕ ಕಾರ್ಯ ಚಟುವಟಿಕೆಗಳ ಉದ್ಘಾಟನೆ

ಸಂಪಾಜೆ: ಜೀವನದಲ್ಲಿ ನೊಂದು ಆತ್ಮಹತ್ಯೆ ಗೆ ಶರಣಾದ ವ್ಯಕ್ತಿ, ಅಷ್ಟಕ್ಕೂ ಆಗಿದ್ದೇನು..?

ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ಸುಳ್ಯ ತಾ. ಸಮಿತಿ ವತಿಯಿಂದ ಶಿಲ್ಪಾಚಾರಿ ಕಾಂತಮಂಗಲರಿಗೆ ಸನ್ಮಾನ