ಕರಾವಳಿ

ವಿಟ್ಲ : ನೇಣಿಗೆ ಕೊರಳೊಡ್ಡಿದ ವಿವಾಹಿತ ಮಹಿಳೆ

ನ್ಯೂಸ್ ನಾಟೌಟ್ : ವಿವಾಹಿತ ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದ ಮೈರ ಕರವೀರ ಎಂಬಲ್ಲಿ ನಡೆದಿದೆ.

ಮೃತರನ್ನು ಪದ್ಮಿನಿ (35) ಎಂದು ಗುರುತಿಸಲಾಗಿದೆ. ಪದ್ಮಿನಿ ಯವರು ಪತಿಯನ್ನು ತೊರೆದು ಪೋಷಕರ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ.ಇವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಈ ಮೊದಲು ಎರಡು, ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರೆನ್ನಲಾಗಿದೆ. ಇಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತರು ತಂದೆ, ಓರ್ವ ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Related posts

ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ವರ್ಗಾವಣೆ; ನೂತನ ಜಿಲ್ಲಾಧಿಕಾರಿಯಾಗಿ ವಿದ್ಯಾಕುಮಾರಿ ನೇಮಕ

ಕೊಯನಾಡು, ಸಂಪಾಜೆ, ಕಲ್ಲುಗುಂಡಿಯಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ, ಬಹು ದಿನಗಳ ನಂತರ ಇಳೆಗೆ ತಂಪೆರೆದ ಮಳೆರಾಯ

ಬಡವರ ಬಗೆಗಿನ ಕಾಳಜಿಯೇ ಸೇವಾ ಸೌರಭ ಕಾರ್ಯಕ್ಕೆ ಶ್ರೀರಕ್ಷೆ : ಸ್ಪೀಕರ್‌ ಯು.ಟಿ. ಖಾದರ್