ದೇಶ-ಪ್ರಪಂಚ

ತಾಯಿ ಕೊನೆಯುಸಿರೆಳೆದಿದ್ದಾರೆಂದು ಘೋಷಿಸಿದ ಬಳಿಕ ದೇಹವನ್ನು ಊರಿಗೆ ಕೊಂಡೊಯ್ದ ಮಕ್ಕಳು..! ಬರೋಬ್ಬರಿ 18 ಗಂಟೆಗಳ ಸುದೀರ್ಘ ಪ್ರಯಾಣದ ಬಳಿಕ ಎದ್ದು ಕುಳಿತ ತಾಯಿ..! ಏನಿದು ಘಟನೆ?

ನ್ಯೂಸ್‌ ನಾಟೌಟ್‌ :ಕೆಲವೊಮ್ಮೆ ವೈದ್ಯರು ಮೃತಪಟ್ಟಿದ್ದಾರೆಂದು ಹೇಳಿದ ಬಳಿಕವೂ ಪವಾಡವೆಂಬಂತೆ ಕೊನೆಯುಸಿರೆಳೆದ ವ್ಯಕ್ತಿಗಳು ಎದ್ದು ಕೂತಿರುವ ಉದಾಹರಣೆಗಳು ಈ ಹಿಂದೆಯೂ ಆಗಿವೆ.ಇಂತಹ ಘಟನೆಗಳು ವೈದ್ಯಲೋಕಕ್ಕೆ ಅಚ್ಚರಿಯೆಂಬಂತಿದೆ.ಇಂತಹ ಘಟನೆ ಇದೀಗ ಬಿಹಾರದಲ್ಲೂ ನಡೆದಿದೆ.

ಮಹಿಳೆಯೊಬ್ಬರು ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದರು. ಈ ವೇಳೆ ಮಹಿಳೆಯನ್ನು ಪರೀಕ್ಷಿಸಿದ ವೈದ್ಯರು ಕೊನೆಯುಸಿರೆಳೆದಿದ್ದಾರೆ ಎಂದು ದೃಢಪಡಿಸಿದ್ದಾರೆ. ಸರಿ ಇದೆಲ್ಲ ಆದ ಬಳಿಕ ಕುಟುಂಬಸ್ಥರು ವಾಹನದ ಮೂಲಕ ಮನೆ ಕಡೆ ದೇಹವನ್ನು ಕೊಂಡೊಯ್ಯುತ್ತಾರೆ.ಅಷ್ಟರಲ್ಲಾಗಲೇ ಆ ಮಹಿಳೆ ಎದ್ದು ಕೂತಿದ್ದಾರೆ..!

ಮೂಲತಃ ಬಿಹಾರದ ಬೇಗುಸರಾಯ್‌ ನಲ್ಲಿ ವಾಸಿಸುವ ರಾಮವತಿ ದೇವಿ ಎನ್ನುವ ಮಹಿಳೆ ಫೆ.11 ರಂದು ಇಬ್ಬರು ಮಕ್ಕಳಾದ ಮುರಾರಿ ಶಾವೋ ಮತ್ತು ಘನಶ್ಯಾಮ್ ಶಾವೋ ಜೊತೆ ಛತ್ತೀಸ್‌ಗಢಕ್ಕೆ ಹೋಗಿದ್ದರು. ಈ ವೇಳೆ ಅವರಿಗೆ ಉಸಿರಾಟ ತೊಂದರೆ ಉಂಟಾಗಿದೆ. ಇದನ್ನು ಮಕ್ಕಳ ಬಳಿ ಹೇಳಿದಾಗ, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಛತ್ತೀಸ್‌ಗಢದ ಕೊರ್ವಾ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಾದ ಬಳಿಕ ವೈದ್ಯರು ಮಹಿಳೆಗೆ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ವೇಳೆ ಮಹಿಳೆ ಬಾರದ ಲೋಕಕ್ಕೆ ತೆರಳಿದ್ದಾರೆನ್ನುವ ಮಾಹಿತಿ ವೈದ್ಯರಿಂದ ಲಭ್ಯವಾಗಿದೆ.18  ಗಂಟೆಗಳ ಸುದೀರ್ಘ ಪಯಣದ ನಂತರ ವಾಹನ ಬಿಹಾರದ ಔರಂಗಾಬಾದ್ ತಲುಪಿದಾಗ, ಇದ್ದಕ್ಕಿದ್ದಂತೆ ರಾಮಾವತಿಗೆ ಪ್ರಜ್ಞೆ ಬಂದಿದೆ.

ಪ್ರಜ್ಞೆ ಬಂದು ಎದ್ದು ಕೂತದ್ದನ್ನು ನೋಡಿದ ಮಕ್ಕಳು ಭೀತಿಯಿಂದ ವಾಹನವನ್ನು ಅರ್ಧ ದಾರಿಯಲ್ಲಿ ನಿಲ್ಲಿಸಿದ್ದಾರೆ.  ತಾಯಿಯನ್ನು ಮತ್ತೊಮ್ಮೆ ಜೀವಂತವಾಗಿ ನೋಡಿದ ಬಳಿಕ ಬೇಗುಸರೈ ಸದರ್ ಹಾಸ್ಪಿಟಲ್ ಗೆ ಅವರನ್ನು ದಾಖಲಿಸಲಾಗಿದೆ.ಮಹಿಳೆಯನ್ನು ರಸ್ತೆಯ ಮೂಲಕ ಕರೆತರುತ್ತಿದ್ದಾಗ, ವಾಹನ ಅಲುಗಾಡಿದ್ದು ಅವರಿಗೆ ಅದು ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (ಸಿಪಿಆರ್) ಆಗಿ ಕೆಲಸ ಮಾಡಿರಬಹುದು. ಇದೇ ಕಾರಣದಿಂದ ಅವರಿಗೆ ಪ್ರಜ್ಞೆಗೆ ಮರಳಿರಬಹುದೆಂದು ಎಂದು ವೈದ್ಯರು ಹೇಳಿದ್ದಾರೆ.ಸದ್ಯ ಮಹಿಳೆಯನ್ನು ಐಸಿಯುಗೆ ದಾಖಲಿಸಲಾಗಿದೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಹೇಳಿರುವುದಾಗಿ ವರದಿ ತಿಳಿಸಿದೆ.

Related posts

ಅಫ್ಘಾನ್ ವಾಯುಪಡೆಯ ವಿಮಾನವನ್ನು ಹೊಡೆದುರುಳಿಸಿದ ಉಜ್ಬೆಕಿಸ್ತಾನ್

ಅರ್ಜುನನ ಅಂತ್ಯಸಂಸ್ಕಾರಕ್ಕೆ ಅಡ್ಡಿ ಪಡಿಸಿದ್ದೇಕೆ ಮಾವುತರು..? ಅರಣ್ಯ ಇಲಾಖೆ ಬಗ್ಗೆ ಜನರಿಗಿರುವ ಸಂಶಯವೇನು..? ಪೊಲೀಸರಿಂದ ಲಾಠಿ ಪ್ರಹಾರ!

ಏರ್ ಇಂಡಿಯಾ ವಿಮಾನ ಟೇಕ್‌ ಆಫ್‌ ಆಗುವ ವೇಳೆಗೆ ರನ್‌ ವೇಗೆ ಬಂದಿಳಿದ ಇನ್ನೊಂದು ವಿಮಾನ..! ಕರ್ತವ್ಯದಲ್ಲಿದ್ದ ಅಧಿಕಾರಿಗಳು ಪದಚ್ಯುತಿ..! ಇಲ್ಲಿದೆ ವೈರಲ್ ವಿಡಿಯೋ