Uncategorized

ಅಪ್ಪ-ಅಮ್ಮನ ಬಳಿಗೆ ಮರಳಿ ಬಾ ಮಗಳೇ,16 ವರ್ಷ ಮಾತ್ರ ಬದುಕುವುದು ಎಂದು ಮೊದಲೇ ತಿಳಿದಿದ್ದರೆ.., ಖ್ಯಾತ ನಟ, ಸಂಗೀತ ನಿರ್ದೇಶಕ ವಿಜಯ್​ ಆ್ಯಂಟನಿ ಪತ್ನಿಯಿಂದ ಮಗಳಿಗೆ ಭಾವನಾತ್ಮಕ ಪೋಸ್ಟ್

ನ್ಯೂಸ್ ನಾಟೌಟ್ : ತಮಿಳಿನ ಖ್ಯಾತ ನಟ, ಸಂಗೀತ ನಿರ್ದೇಶಕ ವಿಜಯ್​ ಆ್ಯಂಟನಿ (Vijay Antony) ಅವರ ಮಗಳು ಮೀರಾ ಬದುಕನ್ನೇ ಕತ್ತಲು ಮಾಡಕೊಂಡ ವಿಚಾರ ಇಡೀ ಚಿತ್ರರಂಗಕ್ಕೆ ಆಘಾತ ಉಂಟುಮಾಡಿತ್ತು.ಇದೀಗ ಆಕೆಯ ತಂದೆ-ತಾಯಿಗೆ ಆ ನೋವಿನಿಂದ ಹೊರಬರಲಾಗುತ್ತಿಲ್ಲ.ಇತ್ತೀಚೆಗಷ್ಟೇ ತಂದೆ ವಿಜಯ್ ಅವರು ಭಾವನಾತ್ಮಕವಾಗಿ ಬರೆದು ಟ್ವೀಟ್ ಮಾಡಿದ ಬೆನ್ನಲ್ಲೇ ಇದೀಗ ತಾಯಿಯೂ ಈ ಬಗ್ಗೆ ಭಾವುಕ ಸಾಲುಗಳನ್ನು ಬರೆದು ಹಂಚಿಕೊಂಡಿದ್ದಾರೆ.

ಮಗಳಿಲ್ಲ ಅನ್ನುವ ನೋವನ್ನು ಹಂಚಿಕೊಂಡು ಬರೆದ ಭಾವನಾತ್ಮಕ ಪೋಸ್ಟ್​ ವೈರಲ್​ ಆಗಿದ್ದು,ಜನರು ಕಾಮೆಂಟ್​ ಮೂಲಕ ಸಾಂತ್ವನ ತಿಳಿಸುತ್ತಿದ್ದಾರೆ.ಮೀರಾ ಅವರಿಗೆ 16 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ಅವರು ಖಿನ್ನತೆಗೆ ಒಳಗಾಗಿದ್ದರು ಹಾಗೂ ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು ಎಂಬ ಮಾತಿದೆ. ಆದರೆ ಅವರು ಬದುಕನ್ನೇ ಕತ್ತಲು ಮಾಡಿಕೊಳ್ಳುವಂತಹ ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಯಾರೂ ಊಹಿಸಿರಲಿಲ್ಲ. ಮಗಳಿಗೆ ಉತ್ತಮವಾದ ಭವಿಷ್ಯ ರೂಪಿಸಿಕೊಡಬೇಕು ಎಂದುಕೊಂಡಿದ್ದ ವಿಜಯ್​ ಆ್ಯಂಟನಿ ಮತ್ತು ಫಾತಿಮಾ ದಂಪತಿಗೆ ತೀವ್ರ ಆಘಾತ ಆಗಿದೆ. ಈಗ ಮಗಳನ್ನು ಮಿಸ್​ ಮಾಡಿಕೊಂಡು ಫಾತಿಮಾ ಅವರು ಈ ಸಾಲುಗಳನ್ನು ಹಂಚಿಕೊಂಡಿದ್ದಾರೆ.

“ಮಗಳೇ,ನೀನು ಕೇವಲ 16 ವರ್ಷ ಮಾತ್ರ ಬದುಕುವುದು ಎಂಬುದು ನನಗೆ ಮೊದಲೇ ತಿಳಿದಿದ್ದರೆ ನಾನು ನಿನ್ನನ್ನು ನನ್ನ ಸನಿಹದಲ್ಲೇ ಇಟ್ಟುಕೊಳ್ಳುತ್ತಿದ್ದೆ. ಸೂರ್ಯ, ಚಂದ್ರರಿಗೂ ನಿನ್ನನ್ನು ತೋರಿಸುತ್ತಿರಲಿಲ್ಲ. ನಾನು ನಿನ್ನ ಯೋಚನೆಯಲ್ಲೇ ಮುಳುಗಿದ್ದೇನೆ. ನಿನ್ನನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ ಮಗಳೇ, ಅಪ್ಪ-ಅಮ್ಮನ ಬಳಿಗೆ ಮರಳಿ ಬಾ. ಲಾರಾ ನಿನಗಾಗಿ ಕಾಯುತ್ತಿದ್ದಾಳೆ’ ಎಂದು ಬರೆದುಕೊಂಡಿರುವ ಫಾತಿಮಾ ಅವರು ಇದರ ಜೊತೆ ಒಂದು ಫೋಟೋವನ್ನು ಪೋಸ್ಟ್​ ಮಾಡಿದ್ದಾರೆ.

‘ಇಂಥ ಸ್ಥಿತಿಯಲ್ಲಿ ನಿಮ್ಮನ್ನು ನೋಡಲು ಕಷ್ಟ ಆಗುತ್ತಿದೆ. ಈ ಸಂದರ್ಭದಲ್ಲಿ ನೀವು ಗಟ್ಟಿಯಾಗಿ ಇರಿ. ನಿಮ್ಮ ಮಗಳ ನೆನಪು ನಿಮಗೆ ಶಕ್ತಿ ನೀಡುತ್ತದೆ. ವಿಜಯ್ ಆ್ಯಂಟನಿ ಅವರಿಂದ ಪಾಸಿಟಿವಿಟಿ ಪಡೆಯಿರಿ. ತಾಯಿಯ ಪ್ರೀತಿ ಎಂಬುದು ಸಮುದ್ರಕ್ಕಿಂತಲೂ ಆಳ. ನೆನಪಿನ ಮೂಲಕ ಮೀರಾ ನಿಮ್ಮ ಜೊತೆಯಲ್ಲೇ ಇರುತ್ತಾಳೆ. ನಿಮಗಾಗಿ ನಾವು ಪ್ರಾರ್ಥಿಸುತ್ತೇವೆ’ ಎಂಬಿತ್ಯಾದಿ ಕಾಮೆಂಟ್​ಗಳ ಮೂಲಕ ಅಭಿಮಾನಿಗಳು ಸಮಾಧಾನ ಮಾಡಿದ್ದಾರೆ.

Related posts

ಕಬಡ್ಡಿ ಆಡುತ್ತಲೇ ಹೃದಯಾಘಾತದಿಂದ ಯುವಕ ಸಾವು

ಸೊಂಟ ಬಳುಕಿಸಿದ ನಾಲ್ವರು ಮಹಿಳಾ ಪೊಲೀಸರ ವರ್ಗಾವಣೆ

ತುಪ್ಪ ಹಚ್ಕೊಳ್ಳಿ…ಚರ್ಮದ ಕಾಂತಿ ಹೆಚ್ಚಿಸ್ಕೊಳ್ಳಿ, ಮಹಿಳೆಯರಿಗೆ ಇಲ್ಲಿದೆ ಸೂಪರ್ ಟಿಪ್ಸ್‌