ಕರಾವಳಿಸುಳ್ಯ

ಉಪ್ಪಿನಂಗಡಿ: ಬಸ್ ಗಳಿಲ್ಲದೇ ವಿದ್ಯಾರ್ಥಿಗಳ,ಸಾರ್ವಜನಿಕರ ಪರದಾಟ:ಕಾದು ಕಾದು ಸುಸ್ತಾದ ಪ್ರಯಾಣಿಕರು

ನ್ಯೂಸ್ ನಾಟೌಟ್ : ಮತದಾನ ಮಾಡಲೆಂದು ದೂರದ ಊರುಗಳಿಂದ ಬಂದಿರುವ ಜನ ಬಸ್ ಕೊರತೆಯಿಂದಾಗಿ ಪರದಾಡುವಂತಾಯಿತು.ಮಾತ್ರವಲ್ಲ ಬೆರಳೆಣಿಕೆ ಬಸ್ ಗಳಿಂದಾಗಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಒದ್ದಾಡಬೇಕಾಯಿತು.

ಉಪ್ಪಿನಂಗಡಿ ಬಸ್ ನಿಲ್ದಾಣದಿಂದ ಇಂದು ಬೆಳಗ್ಗಿನಿಂದ ಸಾರಿಗೆ ಬಸ್‌ಗಳು ಎಂದಿನಂತೆ ಪೂರ್ಣ ಪ್ರಮಾಣದಲ್ಲಿ ಸಂಚರಿಸದೇ ಇರುವುದರಿಂದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ತೊಂದರೆ ಅನುಭವಿಸಿದರು. ಖಾಸಗಿ ಬಸ್‌ಗಳು ಇದೆಯಾದರೂ, ಬಹುತೇಕರು ಕೆಎಸ್‌ ಆರ್‌ಟಿಸಿ ಬಸ್‌ಗಳನ್ನೇ ನಂಬಿದ್ದಾರೆ. ಹೀಗಿರುವಾಗ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸದ ಕಾರಣ ಮಂಗಳೂರು ಕಡೆ ಹೊರಡುವ ಎಲ್ಲರೂ ಕಾದು ಸುಸ್ತಾದರು. ಬೆಳಗ್ಗೆ 07:00 ಗಂಟೆಗೆ ಬಂದ ವಿದ್ಯಾರ್ಥಿಗಳು 9:00 ಗಂಟೆಯವರೆಗೂ ಬಸ್ಸಿಗಾಗಿ ಕಾದು ಕಾದು ಎರಡು ಗಂಟೆ ಬಳಿಕ ಬಸ್ ಬಂದಿತ್ತು.ಆದರೆ ಆ ಬಸ್ಸಿಗಾಗಿ ನೂರಾರು ಪ್ರಯಾಣಿಕರು ಕಾದಿದ್ದರಿಂದ ಬಸ್ ಫುಲ್ ರಶ್ ಆಯಿತು.

ಈ ಕುರಿತು ಪ್ರತಿಕ್ರಿಯಿಸಿದ ವಿದ್ಯಾರ್ಥಿಗಳು ಪ್ರತಿನಿತ್ಯ ಒಡಾಡುವ ಬಸ್ಸುಗಳನ್ನೇ ಚುನಾವಣಾ ಕರ್ತವ್ಯಕ್ಕೆ ಬಿಡಲಾಗಿದೆ.ಇದರಿಂದ ನಾವು ಶಾಲಾ-ಕಾಲೇಜು-ಮನೆಗೆ ವಾಪಸ್‌ ಹೋಗುವುದಕ್ಕೆ ಕಷ್ಟವಾಗಿದೆ.ನಮಗೆ ಬಸ್ ವ್ಯವಸ್ಥೆಯನ್ನಾದರೂ ಮಾಡಬೇಕಾಗಿತ್ತು.ಕಾಲೇಜಿಗೆ ಸರಿಯಾದ ಸಮಯಕ್ಕೆ ನಾವು ತಲುಪುವುದು ಬೇಡವೇ ಎಂದು ಆಕ್ರೋಶ ಹೊರಹಾಕಿದರು.

Related posts

ಚೆಂಬು, ಗೂನಡ್ಕದಲ್ಲಿ 7 ನೇ ಬಾರಿಗೆ ಭೂಮಿ ಗಡಗಡ..!

ಪ್ರವೀಣ್ ನೆಟ್ಟಾರ್ ಗೆ ಕಡಿದದ್ದು ಯಾರು? ಇವನೇ ರಕ್ತಾಸುರ

NMC ವಿಜ್ಞಾನ ಸಂಘದಿಂದ ರಸಪ್ರಶ್ನೆ ಸ್ಪರ್ಧೆ, ಮಿಂಚಿದ ಕೀರ್ತನ್, ಸುಶ್ಮಿತಾ ತಂಡ