ಕರಾವಳಿ

ಉಪ್ಪಿನಂಗಡಿ: ಮನೆಗೆ ನುಗ್ಗಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ ಆರೋಪ,ಪೋಕ್ಸೋ ಕಾಯ್ದೆಯಡಿ ಇಬ್ಬರು ಅರೆಸ್ಟ್

ನ್ಯೂಸ್ ನಾಟೌಟ್ : ಬಾಲಕಿಯೋರ್ವಳನ್ನು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಂಧಿತ ಆರೋಪಿಗಳ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು,ಕಡಬ ತಾಲೂಕಿನ ಕೊಯಿಲ ಗ್ರಾಮದ ನಿವಾಸಿಗಳಾದ ಹಸೈನಾರ್ (24) ಹಾಗೂ ಅಬ್ಬಾಸ್ (30) ಬಂಧಿತ ಆರೋಪಿಗಳು.ಇವರು ಮನೆಗೆ ನುಗ್ಗಿ ಬಾಲಕಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಕರಾಯ ಎಂಬಲ್ಲಿಗೆ ಆರೋಪಿಗಳಿಬ್ಬರು ಮೂರು ದಿನಗಳಿಂದ ಮರ ತುಂಡರಿಸುವ ಕೆಲಸದ ನಿಮಿತ್ತ ಕಾರ್ಯ ನಿರ್ವಹಿಸಿದ್ದರು. ಸಂತ್ರಸ್ತ ಬಾಲಕಿ ಮನೆ ಅಲ್ಲೇ ಸಮೀಪದಲ್ಲಿದ್ದು,ಈ ಸಂದರ್ಭ ನೀರು ಕೇಳುವ ನೆಪದಲ್ಲಿ ಆರೋಪಿಗಳಿಬ್ಬರು ಹೋಗಿದ್ದರು. ಮನೆಯಲ್ಲಿನ ಎಲ್ಲವನ್ನು ಗಮನಿಸಿದ ಆತ ಸದಸ್ಯರ ಬಗ್ಗೆ ಗಮನಿಸಿದ್ದಾನೆ. ಆರೋಪಿಗಳ ಪೈಕಿ ಹಸೈನಾರ್ ಶುಕ್ರವಾರ ಸಂಜೆ ಸಂತ್ರಸ್ತೆಯ ಮನೆಗೆ ಬಂದು ಮರ ತುಂಡರಿಸುವ ಚೈನ್ ಇಲ್ಲಿ ಬಾಕಿಯಾಗಿದೆ ಎಂದು ಹೇಳಿದ್ದಾನೆ. ಈ ವೇಳೆ ಬಾಲಕಿಯ ಕೈಗೆ ಚೀಟಿಯೊಂದನ್ನು ನೀಡಿ ಆಕೆಯನ್ನು ಪುಸಲಾಯಿಸಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ. ಈ ನಂಬರಿಗೆ ಫೋನ್ ಮಾಡು ಎಂದು ಒತ್ತಾಯಿಸಿದ್ದು ಮಾತ್ರವಲ್ಲದೇ ಒಂದು ವೇಳೆ ಫೋನ್ ಮಾಡದೇ ನನ್ನ ವಿರುದ್ಧವಾಗಿ ನಡೆದುಕೊಂಡರೆ ನಿನ್ನನ್ನು ಬಿಡುವುದಿಲ್ಲ ಎಂಬುವುದಾಗಿಯೂ ಜೀವ ಬೆದರಿಕೆಯೊಡ್ಡಿ ಹೋಗಿದ್ದ ಎಂದು ದೂರಲಾಗಿದೆ.

ಇದಾದ ಬಳಿಕ ಮರು ದಿನ ರಾತ್ರಿ 8 ಗಂಟೆಯ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ತನ್ನ ಸಹಚರ ಅಬ್ಬಾಸ್ ಎಂಬಾತನೊಂದಿಗೆ ಬಂದ ಆರೋಪಿಯು ಮನೆಯ ಒಳಗೆ ಅಕ್ರಮವಾಗಿ ಪ್ರವೇಶ ಮಾಡಿದ್ದಾನೆ. ಬಾಲಕಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ತಿಳಿದು ಬಂದಿದೆ. ಈ ವೇಳೆ ಅದೃಷ್ಟವಶಾತ್ ಬಾಲಕಿ ತಾಯಿ ಮನೆಯೊಳಗಡೆ ಇದ್ದಿರುವುದಕ್ಕೆ ಬಾಲಕಿ ಬಚಾವ್ ಆಗಿದ್ದಾಳೆ.ಇಲ್ಲದೇ ಹೋಗಿದ್ದರೆ ಆಕೆ ರಕ್ಷಣೆ ಕಷ್ಟ ಸಾಧ್ಯವಾಗುತ್ತಿತ್ತು ಎಂಬುದು ಸ್ಥಲೀಯರ ಮಾತು.ಏಕೆಂದರೆ ಬಾಲಕಿ ತಾಯಿ ಚೀರಾಡುವುದನ್ನು ಕೇಳಿ ನಾವೆಲ್ಲ ಬಂದು ಬಾಲಕಿಯ ರಕ್ಷಣೆಗೆ ಮುಂದಾಗಿದ್ದೇವೆ.ಮಾತ್ರವಲ್ಲ ನಮ್ಮ ಸಹಕಾರದಿಂದಲೇ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದೇವೆ ಎಂದು ಹೇಳಿದರು. ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು, ಅವರ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Related posts

‘ಸಾರಿ ಅಣ್ಣ’ ಬರೆದು ವಿದೇಶದಲ್ಲಿ ಉದ್ಯೋಗದಲ್ಲಿದ್ದ ಕಡಬದ ಯುವಕ ಆತ್ಮಹತ್ಯೆ

‘ಮಗಳಿಗೆ ಪದವಿಯಲ್ಲಿ ಡಿಸ್ಟಿಂಕ್ಷನ್ ‘ ,ಟೀಕಿಸಿದವರಿಗೆ ಉತ್ತರ ನೀಡಿದ ಸಾನ್ಯ ಅಯ್ಯರ್ ತಾಯಿ

ಅಯೋಧ್ಯೆ ತಲುಪಿದ ಕಾರ್ಕಳದ ಕೃಷ್ಣ ಶಿಲೆ