ಕ್ರೈಂದೇಶ-ಪ್ರಪಂಚ

ಅವಿವಾಹಿತ ಯುವತಿ ಗರ್ಭಪಾತಕ್ಕೆ ಯತ್ನ! 19 ವರ್ಷದ ಯುವತಿಯ ದುರಂತ ಅಂತ್ಯ!

ನ್ಯೂಸ್‌ ನಾಟೌಟ್‌: ಅವಿವಾಹಿತ ಯುವತಿ 4 ತಿಂಗಳ ಗರ್ಭಿಣಿಯಾಗಿದ್ದಳು. ಈ ವಿಷಯವನ್ನು ಮುಚ್ಚಿಡುವ ಪ್ರಯತ್ನದಲ್ಲಿ ಆಕೆ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. 19 ವರ್ಷದ ಯುವತಿಯು ಸಾವನ್ನಪ್ಪಿದ ಈ ಘಟನೆ ಹರಿಯಾಣದ ಹಿಸಾರ್ ಜಿಲ್ಲೆಯ ಆಗ್ರೋಹಾದಲ್ಲಿ ಮಾರ್ಚ್ ೨೨ರಂದು ಈ ಘಟನೆ ನಡೆದಿದೆ.

ಈ ಹಿನ್ನೆಲೆಯಲ್ಲಿ ಆಕೆಯ ಸಂಬಂಧಿಕರು ಆಕೆಯನ್ನು ಗರ್ಭಪಾತಕ್ಕಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಆಕೆಗೆ ಗರ್ಭಪಾತಕ್ಕೆ ಪ್ರಯತ್ನಿಸಲಾಗಿದೆ. ಆದರೆ ಇದರಿಂದಾಗಿ ಯುವತಿಯ ಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು, ಅದಾದ ಬಳಿಕ ಆಕೆಯನ್ನು ಪೋಷಕರು ಸಿವಿಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ದುರದೃಷ್ಟವಶಾತ್, ಅಲ್ಲಿಂದ ಮತ್ತೆ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದ್ದು, ಆಕೆಯ ಸ್ಥತಿ ಮತ್ತಷ್ಟು ಗಂಭೀರವಾಗಿತ್ತು. ಈ ಸ್ಥಿತಿಯಲ್ಲಿದ್ದ ಯುವತಿಯ ಕರುಳುಗಳು ಹೊರಬಂದು ಗರ್ಭಾಶಯದಲ್ಲಿ ಗಾಯಗಳಾಗಿತ್ತು. ಅಷ್ಟೇ ಅಲ್ಲದೇ ಮೂತ್ರಪಿಂಡಗಳು ಸಹ ವಿಫಲವಾಗಿದ್ದ ಕಾರಣ ಆಕೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾಳೆ ಎಂದು ವರದಿ ತಿಳಿಸಿದೆ.

Related posts

ಶಾಲಾ ಬಾಲಕಿಗೆ ದಿನಾ ಕರೆದೊಯ್ಯುತ್ತಿದ್ದ ಆಟೋ ಚಾಲಕನಿಂದ ಲೈಂಗಿಕ ಕಿರುಕುಳ..! ವಿಡಿಯೋ ವೈರಲ್ ಆದ ಬೆನ್ನಲ್ಲೇ ಚಾಲಕನ ಬಂಧನ..!​​

ದೀಪಾವಳಿ ಸಂಭ್ರಮದಲ್ಲಿರುವ ದಿಲ್ಲಿಯ ಜನತೆಗೆ ಶಾಕ್‌..! ಏನದು ಗೊತ್ತಾ?

ಲಂಡನ್‌: ಹೈಕಮಿಷನ್‌ ಎದುರು ಭಾರತೀಯ ಪ್ರತಿಭಟನಾಕಾರರ ಜೊತೆ ಯುಕೆ ಪೊಲೀಸ್ ಡ್ಯಾನ್ಸ್ ! ಇಲ್ಲಿದೆ ವೈರಲ್ ವಿಡಿಯೋ!