ಕರಾವಳಿಮಂಗಳೂರು

ದಕ್ಷಿಣ ಕನ್ನಡ: ಮಲಗಿದ್ದವರ ಮೇಲೆ ಉರುಳಿ ಬಿದ್ದ ಕಂಪೌಂಡ್, ಇಬ್ಬರು ಮಕ್ಕಳು ಸಹಿತ ಒಂದೇ ಕುಟುಂಬದ ನಾಲ್ವರ ದಾರುಣ ಸಾವು

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಬಾರದ ಘೋರ ದುರಂತವೊಂದು ನಡೆದು ಬಿಟ್ಟಿದೆ. ಬುಧವಾರ ಬೆಳಗ್ಗೆ ಉಳ್ಳಾಲ ಸಮೀಪದ ಮುನ್ನೂರು ಗ್ರಾಮದ ಮದನಿ ನಗರ ಎಂಬಲ್ಲಿ ಮನೆಯ ಹಿಂಬದಿಯಿದ್ದ ಕಂಪೌಂಡ್ ಮನೆಯ ಮೇಲೆ ಕುಸಿದು ಬಿದ್ದಿದೆ. ಪರಿಣಾಮ ಮನೆಯ ಒಳಗಡೆ ಮಲಗಿದ್ದ ಇಬ್ಬರು ಮಕ್ಕಳು ಸಹಿತ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮೃತಪಟ್ಟವರನ್ನು ವಿದ್ದ ಯಾಸಿರ್(45),ಅವರ ಪತ್ನಿ ಮರಿಯಮ್ಮ(40) ಮಕ್ಕಳಾದ ರಿಯಾನ ಮತ್ತು ರಿಫಾನ ಎಂದು ಗುರುತಿಸಲಾಗಿದೆ. ಸದ್ಯ ನಾಲ್ವರ ಮೃತ ದೇಹವನ್ನು ಹೊರಕ್ಕೆ ತೆಗೆಯಲಾಗಿದೆ. ಸ್ಥಳಕ್ಕೆ ಉಳ್ಳಾಲ ಪೊಲೀಸ್ ಠಾಣೆಯ ಅಧಿಕಾರಿಗಳು ಆಗಮಿಸಿದ್ದಾರೆ. ರಕ್ಷಣಾ ತಂಡಕ್ಕೆ ಸ್ಥಳೀಯರು ಕೂಡ ಸಾಥ್ ನೀಡಿದ್ದಾರೆ. ಕಳೆದ ಆರು ತಿಂಗಳಷ್ಟೇ ದಂಪತಿಗಳು ಮನೆ ಖರೀದಿಸಿದ್ದರು ಎಂದು ತಿಳಿದು ಬಂದಿದೆ. ಆದರೆ ದುರಾದೃಷ್ಟವಶಾತ್ ಅವರು ಇದೀಗ ಅದೇ ಮನೆಯಲ್ಲಿ ಸಾವನ್ನಪ್ಪಿರುವುದು ನೋವಿನ ವಿಚಾರವಾಗಿದೆ.

Related posts

ಗಣೇಶ ವಿಸರ್ಜನೆ ವೇಳೆ ಬುರ್ಕಾ ಧರಿಸಿ ಡ್ಯಾನ್ಸ್..! ಆತನನ್ನು ಬಂಧಿಸಿದ್ದೇಕೆ ಪೊಲೀಸರು?

ದುರ್ಗಾದೇವಿ ಮೂರ್ತಿ ವಿರ್ಸಜನೆ ವೇಳೆ ಕೋಮು ಸಂಘರ್ಷ..! ನವರಾತ್ರಿ ಸಂಭ್ರಮದ ವೇಳೆ ಓರ್ವ ಸಾವು, ಲಾಠಿ ಚಾರ್ಜ್, 30 ಮಂದಿ ಬಂಧನ..!

ತಾಯಿಯಿಂದ ಬೇರ್ಪಟ್ಟು ಪರಿತಪಿಸುತ್ತಿರುವ ಮರಿಯಾನೆ!;ಬಾ ಎಂದರೆ ಹತ್ತಿರ ಬರುತ್ತೆ,ಹೋಗು ಎಂದರೆ ದೂರ ಹೋಗುತ್ತೆ,ವಿಡಿಯೋ ಇಲ್ಲಿದೆ