ಕರಾವಳಿಸುಳ್ಯ

‘ಯುಗಾದಿ ಹಬ್ಬ’ ಹಿಂದೂಗಳ ಪಾಲಿಗೆ ಅಷ್ಟೊಂದು ವಿಶೇಷ ಏಕೆ..? ನಿಮಗೆ ಗೊತ್ತಿರದ ಹಲವು ವಿಚಾರಗಳ ವಿಶೇಷ ಅಂಕಣ ಇಲ್ಲಿದೆ ಓದಿ

ವರದಿ: ಹರ್ಷಿತಾ ವಿನಯ್

ನ್ಯೂಸ್ ನಾಟೌಟ್: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಅನ್ನುವ ಹಾಡಿನ ಸಾಲುಗಳು ಎಷ್ಟೊಂದು ಸಾರ್ವಕಾಲಿಕ ಅಲ್ವಾ..? ಈ ಯುಗಾದಿ ಹಿಂದೂಗಳ ಪಾಲಿಗೆ ಮಹತ್ವದ ಹಬ್ಬವಾಗಿದೆ. “ಯುಗಾದಿ” ಹೆಸರೇ ಸೂಚಿಸುವಂತೆ ಯುಗ (ಯುಗ) ಮತ್ತು ಆದಿ (ಆರಂಭ): “ಹೊಸ ಯುಗದ ಆರಂಭ” ಎಂಬುದು ಅರ್ಥ . ಯುಗಾದಿ ಅಥವಾ ಉಗಾದಿಯು ” ಚೈತ್ರ ಶುದ್ಧ ಪಾಡ್ಯಮಿ ” ಅಥವಾ ಭಾರತೀಯ ತಿಂಗಳ ಚೈತ್ರದ ಪ್ರಕಾಶಮಾನವಾದ ಅರ್ಧದ ಮೊದಲ ದಿನದಂದು ಬರುತ್ತದೆ. ಇದು ಸಾಮಾನ್ಯವಾಗಿ ಗ್ರೆಗೋರಿಯನ್ ಕ್ಯಾಲೆಂಡರ್‌ನ ಮಾರ್ಚ್ ಅಂತ್ಯದಲ್ಲಿ ಅಥವಾ ಏಪ್ರಿಲ್ ಆರಂಭದಲ್ಲಿ ಬರುತ್ತದೆ. ಯುಗಾದಿ ಹಬ್ಬ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಇದರ ಆಚರಣೆಯ ಹಿನ್ನೆಲೆ ಏನು ಅನ್ನುವುದು ಯಾರಿಗೂ ಗೊತ್ತಿಲ್ಲ. ಈ ಬಗೆಗಿನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ವೀಕ್ಷಿಸಿ.

ಉಗಾದಿ ಅಥವಾ ಯುಗಾದಿ ಹಬ್ಬವು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದೇಶದ ಹಲವಾರು ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬವಾಗಿದೆ. ಹಿಂದೂಗಳ ಹೊಸ ವರ್ಷವನ್ನು ಸೂಚಿಸುವ ಹಬ್ಬವೇ ಈ ಯುಗಾದಿ. ಈ ಬಾರಿ ಅಂದರೆ 2024 ರ ಯುಗಾದಿ ಹಬ್ಬವನ್ನು ಏಪ್ರಿಲ್ 9 ರಂದು ಬಹಳ ಸಡಗರದಿಂದ ಆಚರಿಸಲಾಗುತ್ತಿದೆ.

ಯುಗಾದಿ ನಿನ್ನೆ, ಮೊನ್ನೆಯಿಂದ ಆಚರಿಸಿಕೊಂಡು ಬಂದ ಹಬ್ಬವಲ್ಲ. ಬದಲಾಗಿ ಶತ ಶತಮಾನಗಳಿಂದಲೂ ಆಚರಿಸಿಕೊಂಡು ಬಂದ ಹಬ್ಬವಾಗಿದೆ. ಅದರ ಮೂಲವು ಶಾತವಾಹನ ರಾಜವಂಶಕ್ಕೂ ಹಿಂದಿನದು ಎನ್ನುವ ನಂಬಿಕೆಯಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಯುಗಾದಿಯನ್ನು ಹೊಸ ವರ್ಷದ ದಿನವಾಗಿ ಆಚರಿಸಲಾಗುತ್ತದೆ. ಈ ಹಬ್ಬವು ಹೊಸ ಯುಗದ ಆರಂಭವನ್ನು ಸಂಕೇತಿಸುತ್ತದೆ, ಏಕೆಂದರೆ ಬ್ರಹ್ಮಾಂಡದ ಸೃಷ್ಟಿಕರ್ತನಾದ ಬ್ರಹ್ಮನು ಈ ಮಂಗಳಕರ ದಿನದಂದು ಸೃಷ್ಟಿ ಪ್ರಕ್ರಿಯೆಯನ್ನು ಪ್ರಾರಂಭಿಸಿದನು ಎಂಬುದು ಈ ಹಬ್ಬಕ್ಕೆ ಸಂಬಂಧಿಸಿದ ಪೌರಾಣಿಕ ನಂಬಿಕೆಯಾಗಿದೆ. ಹಾಗಾಗಿ ವಿಶೇಷವಾಗಿ ಹಿಂದೂಗಳು ಈ ದಿನವನ್ನು ತಮ್ಮ ಹೊಸ ವರ್ಷದ ಪ್ರಾರಂಭ ಎಂದು ಪರಿಗಣಿಸಿ ಆಚರಿಸುತ್ತಾರೆ.

ಭಾರತವೂ ಸೇರಿದಂತೆ ಅನೇಕ ದೇಶಗಳು ಜನವರಿ ಒಂದರಂದು ಹೊಸ ವರ್ಷವನ್ನಾಗಿ ಆಚರಿಸಲಾಗುತ್ತದೆ. ಜನವರಿ ಶುರುವಾಗ್ತಿದ್ದಂತೆ ಹೊಸ ವರ್ಷ ಆರಂಭವಾಗಿದೆ ಎನ್ನುತ್ತೇವೆ. ಶತಮಾನಗಳ ಹಿಂದೆ, ಹೊಸ ವರ್ಷ ಜನವರಿ ಒಂದಾಗಿರಲಿಲ್ಲ.ವಿವಿಧ ದೇಶಗಳಲ್ಲಿ ವಿವಿಧ ದಿನಗಳಲ್ಲಿ ಹೊಸ ವರ್ಷವನ್ನು ಆಚರಿಸಲಾಗ್ತಿತ್ತು. ಕೆಲವರು ಮಾರ್ಚ್ 25 ರಂದು ಆಚರಿಸಿದ್ರೆ ಮತ್ತೆ ಕೆಲವರು ಡಿಸೆಂಬರ್ 25 ರಂದು ಆಚರಿಸುತ್ತಿದ್ದರು. ನಂತರ ಜನವರಿ ಒಂದರಂದು ಹೊಸ ವರ್ಷಾರಚಣೆ ಶುರುವಾಯ್ತು. ಮೊದಲ ಬಾರಿ ರೋಮ್ ನಲ್ಲಿ ಇದು ಶುರುವಾಯ್ತು. ಅಲ್ಲಿ ರಾಜ ನುಮಾ ಪೊಂಪಿಲಸ್ ರೋಮನ್ ಕ್ಯಾಲೆಂಡರ್ ಬದಲಾಯಿಸಿದ. ಈ ಕ್ಯಾಲೆಂಡರ್ ಬಂದ ನಂತರ, ಹೊಸ ವರ್ಷವನ್ನು ಜನವರಿ ಮೊದಲ ದಿನದಂದು ಆಚರಿಸಲಾಗ್ತಿದೆ. ವರ್ಷದ ಜನವರಿ ತಿಂಗಳನ್ನು ಮೊದಲು ಜಾನಸ್ ಎಂದು ಕರೆಯಲಾಗುತ್ತಿತ್ತು. ರೋಮನ್ ದೇವರ ಹೆಸರು ಜಾನಸ್ (Janus). ಆದ್ರೆ ಕೆಲ ಸಮಯದ ನಂತ್ರ ಜಾನಸ್ ಹೆಸರು ಜನವರಿಯಾಗಿ ಬದಲಾಯ್ತು. ಇಡೀ ವಿಶ್ವವೇ ಒಪ್ಪಿಕೊಂಡು ಹೊಸ ವರ್ಷವನ್ನು ಜನವರಿ 1 ರಂದೇ ಹೊಸ ವರ್ಷವನ್ನು ಆಚರಿಸುತ್ತಾರೆ. ಮುನ್ನಾ ದಿನವಾದ ಅಂದರೆ ಡಿಸೆಂಬರ್ 31 ರಂದೇ ಮೋಜು ಮಸ್ತಿ ಮಾಡಲು ಶುರು ಮಾಡ್ತಾರೆ ಪಾರ್ಟಿಗಳನ್ನು ಆಯೋಜಿಸುವುದು ಸ್ನೇಹಿತರೊಂದಿಗೆ ಮದ್ಯ ರಾತ್ರಿಯಿಂದಲೇ ಪಾರ್ಟಿ ಮಾಡುವುದು ಶುಭಾಷಯಗಳ ವಿನಿಮಯ ಅಷ್ಟು ಮಾತ್ರವಲ್ಲದೇ ಆ ದಿನ ಹಲವಾರು ಅವಘಡಗಳು ಸಂಭವಿಸುವ ಸಾದ್ಯತೆ ಇರುತ್ತದೆ. ಏಕೆಂದರೇ ಪಾರ್ಟಿಯ ಅಮಲಲ್ಲಿ ಕುಡಿದು ತೂರಾಡುತ್ತಾ ಗಲಾಟೆಗಳಾಗುವುದು ಇತ್ಯಾದಿ.

ಆದರೆ ಹಿಂದೂಗಳ ಹೊಸ ವರ್ಷದ ಆಚರಣೆ ಹಾಗಲ್ಲ ಸಾಂಸ್ಕ್ರತಿಕವಾಗಿ ಬಹಳ ವಿಶೇಷತೆಯನ್ನು ಹೊಂದಿದೆ ಆಚರಣೆಯು ಅಷ್ಟೆ ವಿಶೇಷವಾಗಿ ಈ ಹಬ್ಬವನ್ನು ಹೆಚ್ಚಾಗಿ ಕರ್ನಾಟಕ ,ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುವರು. ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವ ಎನ್ನುತ್ತಾರೆ. ಬಹಳ ಸಾತ್ವಿಕವಾಗಿ ನಡೆಯುತ್ತದೆ. ಯುಗಾದಿಯ ಮುನ್ನಾ ದಿನವೇ ಮನೆ ಸುತ್ತ ಮುತ್ತ ಪರಿಸರವನ್ನೆಲ್ಲ ಶುಚಿಗೊಳಿಸಿ ಮನೆಯನ್ನು ತಳಿರು ತೋರಣಗಳಿಂದ ಶೃಂಗರಿಸುತ್ತಾರೆ. ವಿಶೇಷವಾಗಿ ಅಂದು ದೇವರ ಮನೆಯನ್ನು ಶೃಂಗರಿಸುತ್ತಾರೆ. ಮನೆ ಮಂದಿಯೆಲ್ಲಾ ಹೊಸ ಬಟ್ಟೆ ತೊಟ್ಟು ಸಂಭ್ರಮಿಸುತ್ತಾರೆ. ರುಚಿ ರುಚಿಯಾದ ಅಡುಗೆಯನ್ನು ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ಭೋಜನವನ್ನು ಸವಿಯುತ್ತಾರೆ. ವಿಶೇಷವಾಗಿ ದೇವಸ್ಥಾನಗಳಿಗೆ ಬೇಟಿ ನೀಡಿ ದೇವರನ್ನು ಪುಜಿಸುತ್ತಾರೆ. ಮಾತ್ರವಲ್ಲದೆ. ದೇವರಿಗೆ ತಾವು ಬೆಳೆಸಿದ ದವಸ ದಾನ್ಯ ತರಕಾರಿ ಬೆಳೆಗಳನ್ನಿಟ್ಟು ವಿಶೇಷವಾಗಿ ಕೃ‍ಷಿಕರು ಸಂಭ್ರಮಿಸುತ್ತಾರೆ. ಒಬ್ಬಟ್ಟು ಪಾಯಸ ಮಾಡಿ ಸವಿಯುತ್ತಾರೆ. ಹಬ್ಬದ ದಿನದಂದು ಜನರು ತಮ್ಮ ಮನೆಯ ಸುತ್ತಲಿನ ಸ್ಥಳಗಳನ್ನು ಹಸುವಿನ ಸಗಣಿಯ ನೀರನ್ನು ಸಿಂಪಡಿಸಿ ಸ್ವಚ್ಛಗೊಳಿಸಿದರೆ, ಇನ್ನೂ ಕೆಲವರು ಹಸುವಿನ ಸಗಣಿಯನ್ನು ಹಾಕಿ ಮನೆಯಂಗಳವನ್ನು ಸ್ವಚ್ಛಗೊಳಿಸುತ್ತಾರೆ. ನಂತರ ಮನೆಯನ್ನು ಹೂವುಗಳಿಂದ ಮತ್ತು ರಂಗೋಲಿಗಳಿಂದ ಅಲಂಕರಿಸುತ್ತಾರೆ. ತಮ್ಮ ದೇವರಿಗೆ ಪೂಜೆ ಸಲ್ಲಿಸಿದ ನಂತರ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ದಕ್ಷಿಣ ಭಾರತದ ಅನೇಕ ಭಾಗಗಳಲ್ಲಿ, ಭಕ್ತರು ಎಣ್ಣೆ ಸ್ನಾನದಿಂದ ದಿನವನ್ನು ಪ್ರಾರಂಭಿಸುತ್ತಾರೆ. ಸಂಬಂಧಿಕರು ಒಟ್ಟಿಗೆ ಸೇರಿ ಈ ದಿನವನ್ನು ಸಂಭ್ರಮಿಸುತ್ತಾರೆ.ಇಂತಹ ಮಹತ್ತರವಾದ ಶ್ರೀಮಂತ ಸಂಸ್ಕ್ರಿತಿ ನಮ್ಮದು. ಹಲವಾರು ಪ್ರದೇಶಗಳಲ್ಲಿ ಆಚರಣೆ ಭಿನ್ನ ವಿಭಿನ್ನವಾಗಿರುತ್ತದೆ.

ಯುಗಾದಿ ಹಬ್ಬದ ದಿನ ಬೇವು ಬೆಲ್ಲ ಸೇವಿಸಿ ಇತರರಿಗೆ ಹಂಚುವ ವಿಶೇಷ ಸಂಪ್ರದಾಯವಿದೆ. ಬೇವು ಬೆಲ್ಲ ಸೇವಿಸುವ ಆಚರಣೆಯು ಇಡೀ ಮನುಕುಲಕ್ಕೆ ಒಂದು ಪಾಠವನ್ನ ಹೇಳುತ್ತದೆ. ಜೀವನದಲ್ಲಿ ಎದುರಾಗುವ ಸುಖ ದುಃಖವನ್ನು , ನೋವು ನಲಿವನ್ನು ಸಮನಾಗಿ ಸ್ವೀಕರಿಸಬೇಕು. ಇದರ ಜೊತೆಗೆ ಬೇವು ಬೆಲ್ಲಕ್ಕೆ ವಿಶೇಷವಾದ ಔಷಧಿ ಗುಣಗಳು ಇರುವುದನ್ನು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ಬೇವು ಬೆಲ್ಲದಂತೆ ಕಹಿ ನೆನಪು ಮರೆಯಾಗಿ ಸಿಹಿ ನೆನಪು ಚಿರಾವಾಗಲಿ. ಹೊಷ ವರುಷದಲ್ಲಿ ನೀವು ಕಂಡ ಕನಸು ನನಸಾಗಲಿ ಎಂದು ಹಾರೃಸುತ್ತಾ ಮತ್ತೊಮ್ಮೆ ಎಲ್ಲ ವೀಕ್ಷಕರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

Related posts

ಸುಳ್ಯ : ಕೆ.ವಿ.ಜಿ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಪ್ರಥಮ ಬಿ.ಎ.ಎಂ.ಎಸ್ ಓರಿಯೆಂಟೇಶನ್ ಕಾರ್ಯಕ್ರಮ,ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಎಓಎಲ್ಇ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ

ಸಬ್ ರಿಜಿಸ್ಟ್ರಾರ್ ಕಚೇರಿ ಸೇವಾ ಸಮಯ ಪರಿಷ್ಕರಣೆ

ಬೆಳ್ತಂಗಡಿ: ಸೌಜನ್ಯ ಪ್ರಕರಣ ಮರು ತನಿಖೆ ನಡೆಸುವಂತೆ ಆಗ್ರಹ, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಮುಖ್ಯಮಂತ್ರಿಗೆ ಮನವಿ