ಕರಾವಳಿ

ಉಡುಪಿಯಲ್ಲಿ ತೇಲುವ ಸೇತುವೆ ಮರು ನಿರ್ಮಾಣ

ನ್ಯೂಸ್ ನಾಟೌಟ್ : ಇತ್ತೀಚೆಗಷ್ಟೇ ರಾಜ್ಯದ ಮೊಟ್ಟ ಮೊದಲ ತೇಲುವ ಸೇತುವೆ  ಉಡುಪಿಯ ಮಲ್ಪೆ ಬೀಚ್ ನಲ್ಲಿ ಉದ್ಘಾಟನೆಯಾಗಿತ್ತು. ಆ ಸೇತುವೆ ಉದ್ಘಾಟನೆಯಾದ 48 ಗಂಟೆಗಳ ಅವಧಿಯಲ್ಲೇ ಸಮುದ್ರದ ಅಲೆಗಳ ದೊಡ್ಡ ಹೊಡೆತಕ್ಕೆ ಸಿಲುಕಿ ಛಿದ್ರವಾಗಿತ್ತು. ಇದೀಗ ಆ ಸೇತುವೆಯನ್ನು ಮರು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಸಹಜವಾಗಿಯೇ ಉಡುಪಿಗೆ ಪ್ರವಾಸ ತೆರಳುವ ಪ್ರವಾಸಿಗರು ಖುಷಿಯಾಗಿದ್ದಾರೆ.

ಉಡುಪಿಯ ಮಲ್ಪೆ ಬೀಚ್ ನಲ್ಲಿ ಪ್ರವಾಸಿಗರನ್ನು  ಆಕರ್ಷಿಸಲು ತೇಲುವ ಸೇತುವೆಯನ್ನು ವ್ಯವಸ್ಥೆಗೊಳಿಸಲಾಗಿತ್ತು. ಇದು ಕರ್ನಾಟಕ ರಾಜ್ಯದಲ್ಲೇ ಪ್ರಥಮ ತೇಲುವ ಸೇತುವೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಈ ತೇಲುವ ಸೇತುವೆ ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ಸಮುದ್ರದ ಅಲೆಗಳ ರಭಸಕ್ಕೆ ಸಿಲುಕಿ ಛಿದ್ರವಾಗಿತ್ತು. ಆ ಕಾರಣದಿಂದ  ತೇಲುವ ಸೇತುವೆ ಬಳಿ ಪ್ರವಾಸಿಗರ ಪ್ರವೇಶಕ್ಕೆ  ಬಂದ್ ಮಾಡಲಾಗಿತ್ತು. ಕೆಲವು ಸಮಯಗಳ ಬಳಿಕ ಜಿಲ್ಲಾಡಳಿತ ಒಪ್ಪಿಗೆ ಮೇರೆಗೆ ಇದೀಗ ಮತ್ತೆ ಮರು ನಿರ್ಮಾಣವಾಗಲಿದೆ. ತಜ್ಣರು ಪರಿಶೀಲನೆ ನಡೆಸಿದ ಬಳಿಕವಷ್ಟೇ ನಿರ್ಮಾಣ ಮಾಡಲಾಗುತ್ತದೆ ಎಂದು ವರದಿಯಾಗಿದೆ.

Related posts

ಕಾಲ್ತುಳಿತದಿಂದ 121 ಜನರ ಸಾವಿನ ಪ್ರಕರಣದ ಪ್ರಮುಖ ಆರೋಪಿಯ ಬಂಧನಕ್ಕೆ ಸಹಾಯ ಮಾಡುವವರಿಗೆ ₹1 ಲಕ್ಷ ಬಹುಮಾನ..! 6 ಮಂದಿ ಸ್ವಯಂಸೇವಕರು ಅರೆಸ್ಟ್..!

ಕೊರಗಜ್ಜನ ಗುಡಿಗೆ ಬೆಂಕಿ ಇಟ್ಟ ಪ್ರಕರಣ, ಓರ್ವ ಅರೆಸ್ಟ್‌, 5 ಮಂದಿ ವಿರುದ್ಧ ಪ್ರಕರಣ ದಾಖಲು

ಇನ್ನೂ ನಿದ್ದೆಯಿಂದ ಎದ್ದೇಳದ ಅಧಿಕಾರಿಗಳು, ಸಾಲು ಬಿಂದಿಗೆ ಹಿಡಿದುಕೊಂಡು ವ್ಯಕ್ತಿಯ ಆಕ್ರೋಶ