ಉಡುಪಿಕ್ರೈಂ

ಉಡುಪಿ: ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ..! 600ಕ್ಕೂ ಅಧಿಕ ಮಕ್ಕಳನ್ನು ಮೈದಾನದಲ್ಲಿ ನಿಲ್ಲಿಸಿ ಶಾಲೆಯ ತಪಾಸಣೆ..!

ನ್ಯೂಸ್ ನಾಟೌಟ್: ಉಡುಪಿಯ ಕುಂಜಿಬೆಟ್ಟುವಿನ ರೆಸಿಡೆನ್ಸಿ ಶಾಲೆಗೆ ಇಂದು(ಜ.27) ಬಾಂಬ್ ಬೆದರಿಕೆ ಬಂದಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಶಾಲಾ ಕಟ್ಟಡವನ್ನು ತಪಾಸಣೆ ನಡೆಸಿದ್ದಾರೆ.

ಕುಂಜಿಬೆಟ್ಟು ಎಂಜಿಎಂ ಕಾಲೇಜಿನ ಮೈದಾನದ ಸಮೀಪದ ಖಾಸಗಿ ಶಾಲೆಯ ಇಮೇಲ್ ಗೆ ಬಾಂಬ್ ಸ್ಪೋಟದ ಸಂದೇಶ ಬಂದಿದ್ದು, ಇದನ್ನು ಗಮನಿಸಿದ ಶಾಲೆಯವರು ಕೂಡಲೇ ಮಕ್ಕಳನ್ನು ಶಾಲೆಯಿಂದ ಹೊರಗೆ ಕಳುಹಿಸಿ ಮೈದಾನದಲ್ಲಿ ಇರಿಸಿದ್ದಾರೆ.

ಬಾಂಬ್ ಸ್ಫೋಟದ ಬೆದರಿಕೆ ಹಿನ್ನಲೆಯಲ್ಲಿ ಉಡುಪಿ ಪೊಲೀಸರು ಅಲರ್ಟ್ ಆಗಿದ್ದು ಸ್ಥಳಕ್ಕೆ ಆಗಮಿಸಿ ಶ್ವಾನ ದಳದೊಂದಿಗೆ ಶಾಲೆಯ ಸುತ್ತಮುತ್ತ ಪರಿಶೀಲನೆ ನಡೆಸಿದರು. ಆದರೆ ಬಾಂಬ್ ಗೆ ಸಂಬಂಧಪಟ್ಟ ಯಾವುದೇ ಸುಳಿವುಗಳು ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಶಾಲೆಯಲ್ಲಿ ಸುಮಾರು 600ಕ್ಕೂ ಅಧಿಕ ಮಕ್ಕಳು ಕಲಿಯುತ್ತಿದ್ದು ಇವರನ್ನೆಲ್ಲ ಶಾಲೆಯ ಮೈದಾನದಲ್ಲಿ ನಿಲ್ಲಿಸಲಾಗಿತ್ತು. ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಈ ಶಾಲೆಯ ಸಮೀಪದಲ್ಲಿರುವ ವಿದ್ಯಾ ಸಂಸ್ಥೆಯ ಮಕ್ಕಳನ್ನು ಕೂಡ ಹೊರಗಡೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

Click

https://newsnotout.com/2025/01/central-home-minister-amith-shah-kumbha-mela-s/
https://newsnotout.com/2025/01/kannada-news-actress-shashikala-serial-kannada-news-fir/
https://newsnotout.com/2025/01/monkey-kannada-news-10-student-nomore-d/
https://newsnotout.com/2025/01/microfinance-issue-women-nomore-in-mysore-siddaramaiha/
https://newsnotout.com/2025/01/delhi-election-strategy-kannada-news-viral-news/

Related posts

ಹೆಲ್ಮೆಟ್ ಹಾಕದ ಪೊಲೀಸರಿಗೂ ದಂಡ ವಿಧಿಸಿದ ಎಸ್.ಪಿ..! ಕರ್ಕಶ ಸೈಲೆನ್ಸರ್ ಗಳನ್ನು ರೋಡ್ ರೋಲರ್ ನಿಂದ ಪುಡಿ ಮಾಡಿಸಿದ ಪೊಲೀಸರು..!

ಸುಣ್ಣಮೂಲೆ: ಆರು ವರ್ಷದ ಬಾಲಕನಿಗೆ ಓಮ್ನಿ ಕಾರು ಡಿಕ್ಕಿ, ಗಂಭೀರ ಸ್ಥಿತಿಯಲ್ಲಿ ಬಾಲಕ ಆಸ್ಪತ್ರೆಗೆ ದಾಖಲು

ವಿದ್ಯಾರ್ಥಿಗೆ ಪ್ರೀತಿಸುವಂತೆ ಪೀಡಿಸಿ ಮತಾಂತರಕ್ಕೆ ಒತ್ತಾಯಿಸಿದರಾ ಶಿಕ್ಷಕಿ! 10ನೇ ತರಗತಿ ವಿದ್ಯಾರ್ಥಿಗೆ ಅಶ್ಲೀಲ ಸಂದೇಶ ರವಾನಿಸಿದ ಶಿಕ್ಷಕಿ ಬಗ್ಗೆ ಪೋಷಕರು ಹೇಳಿದ್ದೇನು?