ಕರಾವಳಿ

ಉಡುಪಿ: ಕಾರ್ಮಿಕನ ಮೈಮೇಲೆ ಪ್ರೇತಾತ್ಮ ಆವಾಹನೆ..! ಮೀನು ಕಟ್ಟಿಂಗ್ ಮಿಷನ್ ಹಿಡಿದೇ ಸಹ ಕೆಲಸಗಾರರ ಮೇಲೆ ದಾಳಿ..! ಎದ್ನೋ..ಬಿದ್ನೋ ಅಂತ ಓಡಿದ ಸಹ ಕಾರ್ಮಿಕರು..!

ನ್ಯೂಸ್ ನಾಟೌಟ್: ಮೀನು ಕಟ್ಟಿಂಗ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನ ಮೈಮೇಲೆ ಪ್ರೇತಾತ್ಮವೊಂದು ಅವಾಹನೆಯಾಗಿರುವ ಘಟನೆ ಉಡುಪಿ ಜಿಲ್ಲೆಯ ಉದ್ಯಾವರದ ಪಿತ್ರೋಡಿ ಎಂಬಲ್ಲಿ ನಡೆದಿದೆ. ಈ ಘಟನೆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಉಡುಪಿಯ ಮೀನು ಕಟ್ಟಿಂಗ್ ಮಾಡುವ ಕಾರ್ಖಾನೆಯಲ್ಲಿ ಬಿಹಾರ ಮೂಲದ ಕಾರ್ಮಿಕನೊಬ್ಬ ಕೆಲಸ ಮಾಡುತ್ತಿದ್ದ. ಈತ ಕೆಲಸ ಮಾಡುತ್ತಿದ್ದಾಗಲೇ ಇದ್ದಕ್ಕಿದ್ದಂತೆ ಕಿರುಚಾಡುವುದಕ್ಕೆ ಆರಂಭಿಸಿದ್ದಾನೆ. ಮೀನು ಕಟ್ಟಿಂಗ್ ಮಾಡುವ ಮಿಷನ್ ಹಿಡಿದು ಒಳಗಿದ್ದ ಕಾರ್ಮಿಕರ ಮೇಲೆ ಹಲ್ಲೆ ನಡೆಸುವುದಕ್ಕೆ ಮುಂದಾಗಿದ್ದಾನೆ. ಈ ವೇಳೆ ಒಳಗಿದ್ದ ಕಾರ್ಮಿಕರೆಲ್ಲರೂ ಅಲ್ಲಿಂದ ಓಡುವುದಕ್ಕೆ ಆರಂಭಿಸುತ್ತಾರೆ. ಈ ದೃಶ್ಯಾವಳಿಗಳು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಬಳಿಕ ಆತನನ್ನು ಹಿಡಿದು ನೀರು ಚಿಮುಕಿಸಿದಾಗ ಆತ ಸಹಜ ಸ್ಥಿತಿಗೆ ಬಂದಿದ್ದಾನೆಂದು ಸಹ ಕಾರ್ಮಿಕರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

Related posts

ನಾಪತ್ತೆಯಾಗಿ 20 ದಿನಗಳಾದರೂ ಸಿಕ್ಕಿಲ್ಲ ಸುಬ್ರಹ್ಮಣ್ಯ ಗ್ರಾ.ಪಂ.ಸದಸ್ಯೆ

ಸಂಪಾಜೆಯ ಮಸೀದಿ ಬಳಿ ಎರಡು ಬೈಕ್‌ಗಳ ನಡುವೆ ಅಪಘಾತ;ಇಬ್ಬರಿಗೆ ಗಾಯ, ಓರ್ವ ಗಂಭೀರ

ಕೇರಳ :ವರದಕ್ಷಿಣೆ ಬೇಡಿಕೆ, ಮನನೊಂದು ವೈದ್ಯ ವಿದ್ಯಾರ್ಥಿನಿ ಆತ್ಮಹತ್ಯೆ